* ದೇಶದ ರಾಜಧಾನಿಯಲ್ಲೇ ಈ ಸ್ಥಿತಿ ಇದ್ದರೆ, ಬೇರೆ ರಾಜ್ಯಗಳು ಮತ್ತು ನಗರಗಳ ಪರಿಸ್ಥಿತಿ ಏನಿರಬಹುದು, ಎಂಬ ಕಲ್ಪನೆ ಬರುತ್ತದೆ ?- ಸಂಪಾದಕರು * ದೇಶದಲ್ಲಿ ಅಪರಾಧಗಳನ್ನು ಕಡಿಮೆ ಮಾಡಬೇಕಾದ ಅವಶ್ಯಕತೆಯಿರುವಾಗ ಅದು ದಿನೇದಿನೇ ಹೆಚ್ಚಾಗುತ್ತಿದೆ ಅಂದರೆ ದೇಶದ ನಾಗರಿಕರು, ಅವರ ಆಸ್ತಿ, ಅಸುರಕ್ಷಿತವಾಗುತ್ತಿದೆ, ಇದೆಲ್ಲ ಅದರದ್ದೇ ದ್ಯೋತಕವಾಗಿದೆ. ಈ ಪರಿಸ್ಥಿತಿಯು ಹಿಂದೂ ರಾಷ್ಟ್ರವನ್ನು ಅನಿವಾರ್ಯವಾಗಿಸುತ್ತದೆ ! -ಸಂಪಾದಕರು * ಇಂದಿನ ತನಕದ ಆಡಳಿತಗಾರರು ಜನರಿಗೆ ಸಾಧನೆಯನ್ನು ಕಲಿಸದ ಪರಿಣಾಮವಿದು ! ಸರಕಾರ ಈಗಲಾದರೂ ಜನರಿಗೆ ಸಾಧನೆ ಕಲಿಸಲು ಪ್ರಯತ್ನಿಸುತ್ತದೆಯೇ ? -ಸಂಪಾದಕರು |
ನವದೆಹಲಿ : ರಾಷ್ಟ್ರೀಯ ಅಪರಾಧ ನೋಂದಣಿ ಇಲಾಖೆ ಮತ್ತು ನಿಯಂತ್ರಣ ಮತ್ತು ಆಡಿಟರ್ ಜನರಲ್ (ಸಿಎಜಿ) ವರದಿಯ ಪ್ರಕಾರ, 2013 ರಿಂದ 2019 ರ ನಡುವೆ ದೆಹಲಿಯಲ್ಲಿ ಅಪರಾಧವು ಶೇ. 275 ರಷ್ಟು ಹೆಚ್ಚಾಗಿದೆ. 2013 ರಲ್ಲಿ ಒಟ್ಟು ಅಪರಾಧಗಳ ಸಂಖ್ಯೆ 86,800 ಆಗಿದ್ದರೆ, 2019 ರಲ್ಲಿ 2 ಲಕ್ಷದ 99,475 ರಷ್ಟಾಗಿದೆ. ‘ಸಿಎಜಿ’ ವರದಿಯ ಪ್ರಕಾರ, ಹೆಚ್ಚುತ್ತಿರುವ ಈ ಅಪರಾಧದ ಹಿಂದೆ ಪೊಲೀಸರಲ್ಲಿರುವ ಆಧುನಿಕ ಸಲಕರಣೆಗಳ ಸೌಲಭ್ಯಗಳ ಕೊರತೆಯೇ ಕಾರಣವಾಗಿದೆ.
Crimes in Delhi up 275% from 2013: CAG reporthttps://t.co/m8YaKDyK1b
— Hindustan Times (@HindustanTimes) September 23, 2020
1. 2019 ರಲ್ಲಿ ದೆಹಲಿಯಲ್ಲಿ 5 ಸಾವಿರದ 185 ಅಪರಾಧಗಳು ದಾಖಲಾಗಿವೆ. 2013 ರಲ್ಲಿ ಈ ಸಂಖ್ಯೆ 4,159 ಆಗಿತ್ತು.
2. 2019 ಕ್ಕೆ ಹೋಲಿಸಿದರೆ, 2020 ರಲ್ಲಿ ದೆಹಲಿಯಲ್ಲಿ ಅತ್ಯಾಚಾರ ಪ್ರಕರಣಗಳ ಸಂಖ್ಯೆ ಶೇ. 43 ರಷ್ಟು ಹೆಚ್ಚಾಗಿದೆ. ಇದಲ್ಲದೆ ಪತಿ ಮತ್ತು ಮಾವನಿಂದ ಮಹಿಳೆಯರಿಗಾದ ಕಿರುಕುಳದ 1,712 ಪ್ರಕರಣಗಳು ಹಾಗೂ ವರದಕ್ಷಿಣೆಗಾಗಿ ಹತ್ಯೆಯ ಶೇ. 56 ರಷ್ಟು ಪ್ರಕರಣಗಳಿದ್ದವು
3. 2011 ರಲ್ಲಿ ಭಾರತೀಯ ದಂಡ ಸಂಹಿತೆಯಡಿಯಲ್ಲಿ ದೆಹಲಿಯಲ್ಲಿ ಒಟ್ಟು 53,353 ಪ್ರಕರಣಗಳು ದಾಖಲಾಗಿವೆ. ಆಗಸ್ಟ್ 15, 2021 ರಂತೆ, ಈ ಸಂಖ್ಯೆ 1 ಲಕ್ಷದ 75 ಸಾವಿರ 27 ಕ್ಕೆ ಏರಿದೆ.
4. 2020 ರಲ್ಲಿ ದೆಹಲಿಯಲ್ಲಿ ವೃದ್ಧರ ಬಗ್ಗೆ 906 ಅಪರಾಧಗಳು ದಾಖಲಾಗಿವೆ. ದೇಶದ 19 ನಗರಗಳನ್ನು ಹೋಲಿಸಿದರೆ ಇದು ಅತಿ ಹೆಚ್ಚು ಆಗಿದೆ