ವಾರಣಾಸಿ (ಉತ್ತರಪ್ರದೇಶ) – ಕಾಶಿ ವಿಶ್ವನಾಥ ಸಂಕುಲ (ಕಾರಿಡಾರ್) ಶೇ. 80 ರಷ್ಟು ಕೆಲಸ ಪೂರ್ಣಗೊಂಡಿದೆ. 800 ಕೋಟಿ ವೆಚ್ಚದಲ್ಲಿ ಈ ಯೋಜನೆಯನ್ನು ಅನುಷ್ಠಾನಗೊಳಿಸಲಾಗುತ್ತಿದೆ.
ಶ್ರೀ ಕಾಶಿ ವಿಶ್ವನಾಥ ಮಂದಿರದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಸುನಿಲ ವರ್ಮಾ ಇವರು ಮಾತನಾಡುತ್ತಾ, ಈ ಕಾರಿಡಾರ್ ನ ಸ್ವರೂಪವು ರೂಪುಗೊಂಡಿದೆ. ಈ ಕಾರಿಡಾರ್ ನ ಸೌಂದರ್ಯೀಕರಣ ಕೆಲಸ ನವೆಂಬರ್ 30 ರೊಳಗೆ ಪೂರ್ಣಗೊಳ್ಳಲಿದೆ. ಇದಕ್ಕಾಗಿ 2,200 ಕಾರ್ಮಿಕರು ಶರವೇಗದಲ್ಲಿ ಕೆಲಸ ಮಾಡುತ್ತಿದ್ದಾರೆ. ಈ ಕಾರಿಡಾರ್ ಗೆ ಮಕರಾನಾ ಮಾರ್ಬಲ್‍ನಿಂದ ಕೆತ್ತಲಾದ 7 ವಿಧದ ಶಿಲೆಗಳಿಂದ ಭವ್ಯವಾದ ರೂಪವನ್ನು ನೀಡಲಾಗುತ್ತಿದೆ. 5 ಲಕ್ಷದ 27 ಸಾವಿರದ 730 ಚದರ ಅಡಿ ಜಾಗದಲ್ಲಿ ಸಂಪೂರ್ಣ ಕಾರಿಡಾರ್ ನಿರ್ಮಾಣವಾಗುತ್ತಿದೆ. ಇದಕ್ಕಾಗಿ 314 ಮನೆಗಳನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ. ಕೊರೊನಾ ಅವಧಿಯಲ್ಲೂ ನಿರ್ಮಾಣ ಕಾರ್ಯ ಸ್ಥಗಿತವಾಗಿರಲಿಲ್ಲ. ನಿರ್ಮಾಣದ ನಂತರ, ಈ ಬೃಹತ್ ಕಾರಿಡಾರನಲ್ಲಿ 2 ಲಕ್ಷ ಭಕ್ತರು ಬರಬಹುದು. ಕೆಲಸ ಮುಗಿದ ನಂತರ, ಭಕ್ತರು ಕಾರಿಡಾರ್ ನ ಹೊರಗಿನ ಪ್ರಾಂಗಣದಲ್ಲಿ ನಿಂತು ಗಂಗಾ ನದಿಯೊಂದಿಗೆ ಮಣಿಕರ್ಣಿಕಾ ಮತ್ತು ಲಲಿತಾ ಘಾಟ್‍ಗಳ ದರ್ಶನ ಪಡೆಯಲು ಸಾಧ್ಯವಾಗಲಿದೆ.