ಹಿಂದೂ ದೇವತೆಗಳಿಗೆ ಸಂಬಂಧಿಸಿದ ಆಕ್ಷೇಪಾರ್ಹ ಸಾಹಿತ್ಯಗಳನ್ನು ತೆಗೆದುಹಾಕಿ ! – ದೆಹಲಿ ಉಚ್ಚ ನ್ಯಾಯಾಲಯದಿಂದ ಟ್ವಿಟರ್ ಗೆ ಆದೇಶ

ವಾಸ್ತವದಲ್ಲಿ ಸರಕಾರವು ಇದನ್ನು ಮಾಡಬೇಕು ಮತ್ತು ಇಂತಹ ಸಾಮಾಜಿಕ ಮಾಧ್ಯಮಗಳಿಗೆ ಕಟ್ಟುನಿಟ್ಟಾದ ಕಾನೂನುಗಳನ್ನು ಮಾಡಬೇಕು, ಆಗ ಯಾರೂ ಹಿಂದೂ ದೇವತೆಗಳನ್ನು ಅವಮಾನಿಸುವ ಧೈರ್ಯ ಮಾಡುವುದಿಲ್ಲ ! – ಸಂಪಾದಕರು

ನವದೆಹಲಿ : ದೆಹಲಿ ಉಚ್ಚ ನ್ಯಾಯಾಲಯವು ಟ್ವಿಟರ್ ಸಂಸ್ಥೆಗೆ ತನ್ನ ವೇದಿಕೆಯಿಂದ ಹಿಂದೂ ದೇವತೆಗಳಿಗೆ ಸಂಬಂಧಿಸಿದ ಆಕ್ಷೇಪಾರ್ಹ ಸಾಹಿತ್ಯವನ್ನು ತೆಗೆದುಹಾಕುವಂತೆ ಆದೇಶಿಸಿದೆ. ನ್ಯಾಯಾಲಯವು ಟ್ವಿಟರ್‍ನ ನ್ಯಾಯವಾದಿಗಳಿಗೆ, ನಿಮ್ಮ ವೇದಿಕೆಯಲ್ಲಿರುವ ಆಕ್ಷೇಪಾರ್ಹ ಸಾಹಿತ್ಯವನ್ನು ಅಳಿಸುತ್ತಿರೋ ಇಲ್ಲ ? ಎಂದು ವಿಚಾರಿಸಿದೆ.

ಸಾಮಾಜಿಕ ಮಾಧ್ಯಮ ಸಂಸ್ಥೆಗಳು ಸಾಮಾನ್ಯ ನಾಗರಿಕರ ಭಾವನೆಗಳನ್ನು ಗೌರವಿಸುವುದು ಅಗತ್ಯವಾಗಿದೆ; ಏಕೆಂದರೆ ವ್ಯವಹಾರವನ್ನು ಅದೇ ಜನರೊಂದಿಗೆ ಮಾಡಲಾಗುತ್ತದೆ. ಆದ್ದರಿಂದ ಇಂತಹ ಸಾಹಿತ್ಯವನ್ನು ಅಳಿಸಬೇಕು ಎಂದು ಹೇಳಿದೆ.