ಎಲ್ಲವೂ ಅಲ್ಲ, ಕೇವಲ ಅಪಾಯಕಾರಿ ಪಟಾಕಿಗಳ ಮೇಲಷ್ಟೇ ನಿಷೇಧ ! – ಸರ್ವೋಚ್ಚ ನ್ಯಾಯಾಲಯದ ಸ್ಪಷ್ಟೀಕರಣ

ವಿಶೇಷ ಸಮುದಾಯದ ವಿರುದ್ಧ ನಿಷೇಧ ಇಲ್ಲವೆಂದೂ ನ್ಯಾಯಾಲಯದ ಸ್ಪಷ್ಟನೆ

ನವ ದೆಹಲಿ – ದೇಶದಲ್ಲಿ ಪಟಾಕಿಗಳ ಮೇಲೆ ಶೇ. 100 ರಷ್ಟು ನಿಷೇಧವಿಲ್ಲ, ಅದು ಕೇವಲ ಹಾನಿಕರ ರಾಸಾಯನಿಕಗಳಿಂದ ತಯಾರಿಸಿದ ಪಟಾಕಿಗಳ ಮೇಲಷ್ಟೇ ನಿಷೇಧವಿದೆ. ‘ಹಸಿರು’ ಪಟಾಕಿಗಳ ಮೇಲೆ ನಿಷೇಧ ಇಲ್ಲ. ನಮ್ಮ ಆದೇಶವನ್ನು ಕಟ್ಟುನಿಟ್ಟಾಗಿ ಪಾಲಿಸಬೇಕೆಂದು ಸಹ ಸರ್ವೋಚ್ಚ ನ್ಯಾಯಾಲಯವು ಪಟಾಕಿ ವಿಷಯದ ಅರ್ಜಿಯ ಆಲಿಕೆ ನಡೆಸುವಾಗ ಸ್ಪಷ್ಟಪಡಿಸಿದೆ.

ನ್ಯಾಯಾಲಯವು ಮುಂದಿನಂತೆ ಹೇಳಿದೆ,

1. ದೇಶದ ತನಿಖಾ ವ್ಯವಸ್ಥೆ ಹೇಗಿದೆ ಎಂಬುದು ಎಲ್ಲರಿಗೂ ತಿಳಿದಿದೆ. ನಾವು ಕೇವಲ ‘ಗ್ರೀನ್ ಪಟಾಕಿ’ಯ (ಕಡಿಮೆ ಮಾಲಿನ್ಯದ ಪಟಾಕಿಗಳು) ಮಾರಾಟಕ್ಕೆ ಅನುಮತಿ ನೀಡಿದ್ದೆವು. ಆದರೆ ಮಾರುಕಟ್ಟೆಯಲ್ಲಿ ಎಲ್ಲಾ ರೀತಿಯ ಪಟಾಕಿಗಳ ಮಾರಾಟ ಆಗುತ್ತಿದೆ.

2. ಪಟಾಕಿಗಳ ಮಾಲಿನ್ಯದಿಂದ ಪ್ರತಿವರ್ಷ ದೆಹಲಿಯ ಏನಾಗುತ್ತದೆ, ಇದು ಎಲ್ಲರಿಗೂ ತಿಳಿದಿದೆ. ವ್ಯಾಪಕ ಜನರ ಹಿತಕ್ಕಾಗಿ ಪಟಾಕಿಗಳ ಮೇಲೆ ನಿಷೇಧ ಹೇರಲಾಗಿದೆ. ಈ ನಿಷೇಧ ವಿಶಿಷ್ಟ ಸಮುದಾಯದ ವಿರುದ್ಧ ಇದೆ ಎಂದು ಕೆಲವು ಜನರಲ್ಲಿ ಭಾವನೆ ಇದೆ, ಆದರೆ ಹಾಗಿಲ್ಲ ಎಂದು ನಾವು ಸ್ಪಷ್ಟಪಡಿಸುತ್ತಿದ್ದೇವೆ, ಆನಂದ ಪಡೆಯಲು ಬೇರೆಯವರ ಜೀವನದ ಜೊತೆ ಚೆಲ್ಲಾಟವಾಡಬಾರದು. ನಾವು ಮೂಲಭೂತ ಹಕ್ಕುಗಳ ಸಂರಕ್ಷಣೆಗಾಗಿ ಇದ್ದೇವೆ ಎಂದು ಹೇಳಿದೆ.