‘ಭವಿಷ್ಯದಲ್ಲಿ ರಷ್ಯಾದ ಸಹಾಯವಿಲ್ಲದೆ ಭಾರತೀಯ ಸೇನೆ ಪೂರ್ಣ ಪ್ರಮಾಣದಲ್ಲಿ ಕಾರ್ಯನಿರ್ವಹಿಸಲು ಸಾಧ್ಯವಿಲ್ಲ !'(ಅಂತೆ) – ಅಮೆರಿಕಾದ ಒಂದು ಸಂಸ್ಥೆಯ ವರದಿಯಲ್ಲಿ ಹೇಳಿಕೆ !

ಭಾರತೀಯ ಸೇನೆಯನ್ನು ಕೀಳಾಗಿ ನೋಡುವವರನ್ನು ಸರಕಾರವು ಕಿವಿ ಹಿಂಡಬೇಕು !- ಸಂಪಾದಕರು 

ವಾಷಿಂಗ್ಟನ್ (ಅಮೇರಿಕಾ) – ಅಮೇರಿಕಾದ ‘ಕಾಂಗ್ರೆಶನಲ್ ರಿಸರ್ಚ್ ಸರ್ವೀಸ್’ನ (ಸಿ.ಆರ್.ಎಸ್.ನ) ಪ್ರಕಾರ, ರಷ್ಯಾದ ಶಸ್ತ್ರಾಸ್ತ್ರಗಳು ಮತ್ತು ಇತರ ಸಂಬಂಧಿತ ಸಾಮಗ್ರಿಗಳಿಲ್ಲದೆ ಮುಂಬರುವ ಮತ್ತು ಮಧ್ಯಂತರ ಅವಧಿಯಲ್ಲಿ ಭಾರತವು ಪೂರ್ಣ ಸಾಮಥ್ರ್ಯದಲ್ಲಿ ಕಾರ್ಯನಿರ್ವಹಿಸಲು ಸಾಧ್ಯವಿಲ್ಲ ಎಂದು ಅದು ತನ್ನ ವರದಿಯಲ್ಲಿ ಹೇಳಿದೆ. ಭಾರತವು ರಷ್ಯಾದಿಂದ ಶಸ್ತ್ರಾಸ್ತ್ರಗಳನ್ನು ಖರೀದಿಸಲು ಅಮೇರಿಕಾವು ವಿರೋಧ ವ್ಯಕ್ತಪಡಿಸಿದೆ. ಅಮೇರಿಕಾದ ‘ಕಾಟಸಾ’ ಈ ಕಾಯ್ದೆಯಡಿಯಲ್ಲಿ ಭಾರತದ ಮೇಲೆ ನಿರ್ಬಂಧವನ್ನು ಹೇರಬಹುದು.