ದೆಹಲಿಯ ಓರ್ವ ಹಿಂದೂ ಮನೆಯಲ್ಲಿ ಪೂಜೆ ಮಾಡುತ್ತಿರುವಾಗ ಗಂಟೆ ಹಾಗೂ ಶಂಖ ಬಾರಿಸಿದ್ದರಿಂದ ನೆರೆಯ ಮತಾಂಧರಿಂದ ಹಿಂದೂ ಕುಟುಂಬಕ್ಕೆ ಕೊಲೆ ಬೆದರಿಕೆ !

ಇದು ಮತಾಂಧರ ಸಂಖ್ಯೆ ಹೆಚ್ಚಾಗುತ್ತಿರುವುದರ ಪರಿಣಾಮವಾಗಿದೆ ಎಂಬುದು ಹಿಂದೂ ಕುಟುಂಬದವರ ಅಭಿಪ್ರಾಯ !

ದೂರು ದಾಖಲಿಸಿಕೊಳ್ಳದ ಪೊಲೀಸರು !

* ಅಲ್ಪಸಂಖ್ಯಾತರ ಜನಸಂಖ್ಯೆ ಹೆಚ್ಚಾದ ನಂತರ ಬಹುಸಂಖ್ಯಾತ ಹಿಂದೂಗಳ ವಿಷಯದಲ್ಲಿ ಏನೆಲ್ಲ ನಡೆಯುತ್ತದೆಯೋ ಅದೇ ಈ ಪ್ರಕರಣದಲ್ಲೂ ನಡೆದಿದೆ, ಎಂಬುದನ್ನು ಗಮನದಲ್ಲಿಟ್ಟುಕೊಳ್ಳಿ ! – ಸಂಪಾದಕರು

* ಜೀವ ಬೆದರಿಕೆಯೊಡ್ಡಿದರೂ ಪೊಲೀಸರು ಯಾವುದೇ ಅಪರಾಧವನ್ನು ದಾಖಲಿಸದಿರುವುದು ಆಶ್ಚರ್ಯದ ಸಂಗತಿ ! ‘ಪೊಲೀಸರಿಂದ ಮತಾಂಧರಿಗೆ ಬೆಂಬಲ ಇದೆಯೇ ?’ ಎಂಬ ಪ್ರಶ್ನೆ ಉದ್ಭವಿಸುತ್ತದೆ. ದೆಹಲಿ ಪೊಲೀಸ್ ಖಾತೆಯು ಕೇಂದ್ರದ ಭಾಜಪ ಸರಕಾರದ ನಿಯಂತ್ರಣದಲ್ಲಿರುವುದರಿಂದ ಸರಕಾರ ಇದರತ್ತ ಗಮನ ಹರಿಸಬೇಕು, ಎಂದು ಹಿಂದೂಗಳಿಗೆ ಅನಿಸುತ್ತದೆ !- ಸಂಪಾದಕರು

ಸಾಂಕೇತಿಕ ಛಾಯಾಚಿತ್ರ

ನವ ದೆಹಲಿ – ಇಲ್ಲಿನ ಮದನ್‍ಪುರ ಖಾದರ್ ಎಕ್ಸ್‍ಟೆನ್ಶನ್ ಪ್ರದೇಶದ ನಿವಾಸಿ ರೋಷನ್ ಪಾಠಕ್ ಇವರು ತಮ್ಮ ಮನೆಯಲ್ಲಿ ಪೂಜೆ ಮಾಡುತ್ತಿದ್ದರು. ಆ ಸಮಯದಲ್ಲಿ ಗಂಟೆ ಮತ್ತು ಶಂಖನಾದ ಮಾಡಿದ್ದರಿಂದ ನೆರೆಯ ದಾನಿಶ್ ಎಂಬ ಮತಾಂಧನು ಪಠಕ ಇವರಿಗೆ ಗಂಟೆ ಮತ್ತು ಶಂಖಗಳನ್ನು ಬಾರಿಸುವುದನ್ನು ನಿಲ್ಲಿಸಲು ಹೇಳಿದರು. ‘ಇದರಿಂದ ನಿದ್ದೆ ಹಾಳಾಗುತ್ತದೆ’, ಎಂದು ಹೇಳಿದರು. ಆತ ಅಲ್ಲಿಗೆ ಇತರ ಮತಾಂಧರನ್ನು ಕರೆಸಿ ವಿರೋಧಿಸಿದ. ಅದೇ ರೀತಿ ‘ಇನ್ನುಮುಂದೆ ಗಂಟೆ ಮತ್ತು ಶಂಖವನ್ನು ಬಾರಿಸಿದರೆ, ಕೊಲ್ಲುತ್ತೇವೆ’, ಎಂದು ಬೆದರಿಕೆಯೊಡ್ಡಿದರು. ಈ ಬಗ್ಗೆ ಪಾಠಕ್ ಅವರು ಪೊಲೀಸ್ ಠಾಣೆಯಲ್ಲಿ ದೂರು ನೀಡಿದರೂ ಪೊಲೀಸರು ಇನ್ನೂ ಪ್ರಕರಣ ದಾಖಲಿಸಿಕೊಂಡಿಲ್ಲ. (ಇಂತಹ ಪೊಲೀಸರು ಭಾರತದ್ದೋ ಪಾಕಿಸ್ತಾನದವರದ್ದೋ ? – ಸಂಪಾದಕರು) ಈ ಪ್ರಕರಣದಲ್ಲಿ ಹಿಂದೂ ಸಂಘಟನೆಗಳು ರೋಷನ್ ಪಾಠಕ್‍ಗೆ ಸಹಾಯ ಮಾಡುವುದಾಗಿ ಭರವಸೆ ನೀಡಿವೆ.


ರೋಶನ್ ಪಾಠಕ ಇವರು ಕಳೆದ 24 ವರ್ಷಗಳಿಂದ ಮದನ್‍ಪುರ್ ಖಾದರ್ ಎಕ್ಸ್‍ಟೆನ್ಶನ್ ಪ್ರದೇಶದಲ್ಲಿ ವಾಸಿಸುತ್ತಿದ್ದಾರೆ; ಆದರೆ ಕಳೆದ 3 ವರ್ಷಗಳಿಂದ ಈ ಭಾಗದಲ್ಲಿ ಮತಾಂಧರ ಸಂಖ್ಯೆ ಹೆಚ್ಚಾಗಿದ್ದರಿಂದ ಹಾಗೂ ಹಿಂದೂಗಳ ಸಂಖ್ಯೆ ಕಡಿಮೆಯಾಗಿರುವುದರಿಂದ ಪೂಜೆಗೆ ವಿರೋಧ ವ್ಯಕ್ತವಾಗುತ್ತಿವೆ, ಎಂದು ಮಾಹಿತಿ ನೀಡಿದರು.