ಪಾಕಿಸ್ತಾನದಲ್ಲಿನ ಹಿಂದೂಗಳ ಈ ಸ್ಥಿತಿಯು ಭಾರತದಲ್ಲಿರುವ ಹಾಗೂ ಜಗತ್ತಿನಾದ್ಯಂತದ ಹಿಂದೂಗಳಿಗೆ ಲಜ್ಜಾಸ್ಪದ !- ಸಂಪಾದಕರು
ನವ ದೆಹಲಿ – ಭಾರತ ಮತ್ತು ಪಾಕಿಸ್ತಾನ ನಡುವೆ ಟಿ-20 ವಿಶ್ವಕಪ್ ಸ್ಪರ್ಧೆಯಲ್ಲಿ ಪಾಕಿಸ್ತಾನ ಭಾರತವನ್ನು ಸೋಲಿಸಿದ ನಂತರ ಪಾಕಿಸ್ತಾನದಲ್ಲಿ ಉತ್ಸವವನ್ನು ಆಚರಿಸುವುದರೊಂದಿಗೆ ಭಾರತದಲ್ಲಿನ ಮುಸಲ್ಮಾನ ಬಹುಸಂಖ್ಯಾತ ಭಾಗಗಳಲ್ಲಿ ಪಟಾಕಿಗಳನ್ನು ಸಿಡಿಸಲಾಯಿತು. ಈ ಬಗ್ಗೆ ದೆಹಲಿಯಲ್ಲಿನ ಆದರ್ಶನಗರದಲ್ಲಿ ವಾಸವಾಗಿರುವ ಪಾಕಿಸ್ತಾನಿ ನಿರಾಶ್ರಿತ ಹಿಂದೂಗಳು, ಹಿಂದೆ ಭಾರತ-ಪಾಕಿಸ್ತಾನ ನಡುವಿನ ಸ್ಪರ್ಧೆಯಲ್ಲಿ ಭಾರತವು ಗೆದ್ದರೆ ಅದರ ಸೇಡು ತೀರಿಸಿಕೊಳ್ಳಲು ಮತಾಂಧರು ಹಿಂದೂಗಳ ಹೆಣ್ಣು ಮಕ್ಕಳನ್ನು ಅಪಹರಿಸುತ್ತಿದ್ದರು ಎಂದು ಹೇಳಿದರು. ಈ ವಿಷಯವಾಗಿ ಹೆಚ್ಚು ಮಾಹಿತಿಯನ್ನು ನೀಡಲು ಅವರು ನಿರಾಕರಿಸಿದರು; ಏಕೆಂದರೆ ಅವರ ಸಂಬಂಧಿಕರು ಇನ್ನೂ ಪಾಕಿಸ್ತಾನದಲ್ಲಿರುವುದರಿಂದ ಅವರಿಗೆ ಇದರಿಂದ ಅಪಾಯವಾಗಬಹುದು ಎಂದು ಹೇಳಿದರು.
“विराट कोहली एक बार मैच जीत गया तो वहाँ गुजराती हिन्दुओं की तीन लड़कियाँ उठा ली गई थीं। मैच में हारने पर ऐसे बुरा हाल करते हैं। पाकिस्तान की पुलिस भी कुछ नहीं करती। कभी लड़कियाँ वापस आती हैं, कभी नहीं, हम थक-हार घर बैठ जाते हैं।”@Ravibhu09 की रिपोर्टhttps://t.co/G57d3KojWW
— ऑपइंडिया (@OpIndia_in) October 26, 2021
ಓರ್ವ ನಿರಾಶ್ರಿತ ಮಹಿಳೆಯು, ‘4-5 ವರ್ಷಗಳ ಹಿಂದೆ ಭಾರತವು ಒಂದು ಸ್ಪರ್ಧೆಯನ್ನು ಗೆದ್ದಿತ್ತು, ಆಗ ಅದರ ಸೇಡು ತೀರಿಸಿಕೊಳ್ಳುವುದಕ್ಕಾಗಿ 3 ಗುಜರಾತಿ ಭಾಷೆಯ ಹಿಂದೂ ಹೆಣ್ಣುಮಕ್ಕಳನ್ನು ಅಪಹರಿಸಲಾಗಿತ್ತು. ಅವರ ಸ್ಥಿತಿಯನ್ನು ಹಾಳು ಮಾಡಿದ್ದರು. ಆ ರೀತಿಯ ಘಟನೆಗಳಲ್ಲಿ ಕೆಲವೊಮ್ಮೆ ಆ ಹುಡುಗಿಯರು ವಾಪಾಸು ಬರುತ್ತಿದರು ಮತ್ತು ಕೆಲವೊಮ್ಮೆ ಅವರನ್ನು ಪತ್ತೆ ಹಚ್ಚಲೂ ಆಗುತ್ತಿರಲಿಲ್ಲ.’ ಈ ಮಹಿಳೆಯು ಕ್ಯಾಮೆರಾದ ಮುಂದೆ ಬಂದು ಮಾಹಿತಿ ನೀಡಲು ಭಯಪಡುತ್ತಿದ್ದರು. ಅವರು, ನನ್ನ ಸಂಬಂಧಿಕರು ಪಾಕಿಸ್ತಾನದಲ್ಲಿದ್ದಾರೆ. ಒಂದು ವೇಳೆ ನಾನೇನಾದರೂ ಮುಂದೆ ಬಂದು ಮಾತನಾಡಿದರೆ ನನ್ನ ಸಂಬಂಧಿಕರ ಹತ್ಯೆ ಮಾಡಲಾಗುವುದು’ ಎಂದು ಹೇಳಿದರು.