ವಿವಿಧ ರೀತಿಯ ರಂಗೋಲಿಗಳನ್ನು ಬಿಡಿಸುವುದರಿಂದ ಆಗುವ ಸೂಕ್ಷ್ಮದ ಪರಿಣಾಮ ಮತ್ತು ಲಾಭಗಳನ್ನು ತೋರಿಸುವ ಸೂಕ್ಷ್ಮ ಚಿತ್ರ !

ಸನಾತನ ಹಿಂದೂ ಸಂಸ್ಕೃತಿಯಲ್ಲಿ ರಂಗೋಲಿಗಳಿಗೆ ಒಂದು ಬೇರೆಯೇ ಮತ್ತು ಮಹತ್ವದ ಸ್ಥಾನವಿದೆ. ಅದರ ಹಿಂದೆ ಶುದ್ಧ ಶಾಸ್ತ್ರೀಯ ದೃಷ್ಟಿಕೋನವಿದೆ. ಹಿಂದೂ ಸಂಸ್ಕøತಿಯಲ್ಲಿ ವಿವಿಧ ರೀತಿಯ ರಂಗೋಲಿಗಳನ್ನು ಬಿಡಿಸಲಾಗುತ್ತದೆ. ಸ್ತ್ರೀಯರು ಮನೆಯಲ್ಲಿ ದೇವರಕೋಣೆ, ಹೊಸ್ತಿಲು, ಅಂಗಳ ಮುಂತಾದ ಸ್ಥಳಗಳಲ್ಲಿ ರಂಗೋಲಿಗಳನ್ನು ಬಿಡಿಸುತ್ತಾರೆ. ಹುಟ್ಟುಹಬ್ಬದ ನಿಮಿತ್ತ, ಸಹೋದರ ಬಿದಿಗೆಯಂದು ತಟ್ಟೆಯ ಸುತ್ತಲೂ ಅಥವಾ ಯಜ್ಞಯಾಗಾದಿ ವಿಧಿಗಳ ಸಂದರ್ಭದಲ್ಲಿಯೂ ರಂಗೋಲಿಗಳನ್ನು ಬಿಡಿಸಲಾಗುತ್ತದೆ. ಅವುಗಳಲ್ಲಿನ ಕೆಲವು ನಿಯಮಿತ ಬಿಡಿಸಲಾಗುವ ರಂಗೋಲಿಗಳ ಸೂಕ್ಷ್ಮದಲ್ಲಾಗುವ ಪರಿಣಾಮ ಮತ್ತು ಲಾಭಗಳ ವಿಷಯದಲ್ಲಿ ಸೂಕ್ಷ್ಮಜ್ಞಾನದ ಮೂಲಕ ದೊರೆತ ಮಾಹಿತಿಯನ್ನು ನಾವು ಇಲ್ಲಿ ತಿಳಿದುಕೊಳ್ಳೋಣ. ರಂಗೋಲಿಗಳನ್ನು ಬಿಡಿಸುವಾಗ ದೇವತೆಗಳ ತತ್ತ್ವವನ್ನು ಆಕರ್ಷಿಸುವ ಸಾತ್ತ್ವಿಕ ಆಕಾರಗಳ ಸಹಾಯದಿಂದ ರಂಗೋಲಿಗಳನ್ನು ಬಿಡಿಸಿದರೆ, ಆ ಸ್ಥಳದಲ್ಲಿ ಆಯಾ ದೇವತೆಗಳ ತತ್ತ್ವಗಳೂ ಆಕರ್ಷಿಸಲ್ಪಡುತ್ತವೆ. ಇದರೊಂದಿಗೆ ರಂಗೋಲಿಯನ್ನು ಬಿಡಿಸುವ ವ್ಯಕ್ತಿಯ ಭಾವ ಹೆಚ್ಚಿದ್ದರೆ ರಂಗೋಲಿಯ ಸಾತ್ತ್ವಿಕತೆ ಮತ್ತು ಚೈತನ್ಯದ ಪ್ರಮಾಣವು ಹೆಚ್ಚಾಗುತ್ತದೆ. ಇಷ್ಟು ಮಾತ್ರವಲ್ಲದೇ, ಇಂತಹ ಸಾತ್ತ್ವಿಕ ರಂಗೋಲಿಗಳಿಂದ ಆನಂದ ಮತ್ತು ಶಾಂತಿಯ ಪ್ರಕ್ಷೇಪಣೆಯಾಗುತ್ತದೆ ಮತ್ತು ಅದರಿಂದ ಅಲ್ಲಿರುವ ಎಲ್ಲ ವ್ಯಕ್ತಿಗಳಿಗೆ ಲಾಭವಾಗುತ್ತದೆ. ಇಲ್ಲಿ ಬಿಳಿಯ ರಂಗೋಲಿಯನ್ನು ಬಿಡಿಸುವುದರಿಂದ, ಹೊಸ್ತಿಲಿನ ಮೇಲೆ ರಂಗೋಲಿಯನ್ನು ಬಿಡಿಸುವುದರಿಂದ, ರಂಗೋಲಿಯ ಮೇಲೆ ಅರಿಶಿಣ ಮತ್ತು ಕುಂಕುಮವನ್ನು ಹಾಕುವುದರಿಂದ ಮತ್ತು ಸಾತ್ತ್ವಿಕ ರಂಗೋಲಿಯನ್ನು ಬಿಡಿಸುವುದರಿಂದಾಗುವ ಪರಿಣಾಮ ಮತ್ತು ಲಾಭದ ಬಗೆಗಿನ ವಿಶ್ಲೇಷಣೆಯನ್ನು ನೀಡಲಾಗಿದೆ, ಹಾಗೆಯೇ ಈ ಸಂದರ್ಭದಲ್ಲಿನ ಸೂಕ್ಷ್ಮಚಿತ್ರಗಳನ್ನೂ ಸಹ ಇಲ್ಲಿ ನೀಡಲಾಗಿದೆ.

ಬಿಳಿ ರಂಗೋಲಿಯನ್ನು ಬಿಡಿಸುವುದರಿಂದಾಗುವ ಲಾಭಗಳು ಮತ್ತು ಪರಿಣಾಮ

೧. ಬಿಳಿ (ಬಣ್ಣಗಳನ್ನು ತುಂಬದಿರುವ) ರಂಗೋಲಿಯಲ್ಲಿ ದೇವತೆಯ ನಿರ್ಗುಣ ತತ್ತ್ವವು ಆಕರ್ಷಿಸಲ್ಪಡುತ್ತದೆ ಮತ್ತು ಅದು ರಂಗೋಲಿಯಲ್ಲಿ ಬಣ್ಣಗಳನ್ನು ತುಂಬದಿರುವ ಖಾಲಿ ಜಾಗಗಳಲ್ಲಿ ಸಂಗ್ರಹವಾಗುತ್ತದೆ. ಇಂತಹ ರಂಗೋಲಿಯಿಂದ ಸ್ಪಂದನಗಳ ಪ್ರಕ್ಷೇಪಣೆಯ ಕಾರ್ಯ ಅಲ್ಪ ಪ್ರಮಾಣದಲ್ಲಾಗುತ್ತದೆ : ದೇವತೆಯ ತತ್ತ್ವವನ್ನು ಆಕರ್ಷಿಸುವ ಕ್ಷಮತೆಯಿರುವ (ವಿಶಿಷ್ಟ ಆಕಾರದ) ರಂಗೋಲಿಯಲ್ಲಿ ದೇವತೆಯ ತತ್ತ್ವ ಆಕರ್ಷಿತವಾಗುತ್ತದೆ. ಅದು ದೇವತೆಯ ತತ್ತ್ವವನ್ನು ಆಕರ್ಷಿಸುವ ರಂಗೋಲಿಯಾಗಿದ್ದರೂ, ಬಿಳಿ ಬಣ್ಣದ್ದಾಗಿರುವುದರಿಂದ (ಬಣ್ಣವನ್ನು ತುಂಬದಿರುವುದರಿಂದ), ಆ ರಂಗೋಲಿಯ ಕಡೆಗೆ ವಿಶೇಷ ನೋಡಬೇಕೆಂದು ಅನಿಸುವುದಿಲ್ಲ ಮತ್ತು ಅದು ಅಪೂರ್ಣವಾಗಿದೆ ಎಂದು ಅನಿಸುತ್ತದೆ. ಇದರ ಹಿಂದಿನ ಕಾರಣವೆಂದರೆ ಬಿಳಿ ರಂಗೋಲಿಯು ದೇವತೆಯ ನಿರ್ಗುಣ ತತ್ತ್ವ ಆಕರ್ಷಿಸುತ್ತದೆ. ಈ ತತ್ತ್ವವು ಸಾಮಾನ್ಯ ಜನರಿಗೆ ಅರಿವಾಗುವುದಿಲ್ಲ. ಬಿಳಿಯ ರಂಗೋಲಿಯಲ್ಲಿ ಮಧ್ಯದ (ಬಣ್ಣವನ್ನು ತುಂಬದಿರುವ) ಭಾಗ ಖಾಲಿಯಿರುವುದರಿಂದ ಆ ಸ್ಥಳದಲ್ಲಿ ನಿರ್ಗುಣ ತತ್ತ್ವ ಸಂಗ್ರಹವಾಗಿರುತ್ತದೆ. ಇದರಿಂದ ಆ ರಂಗೋಲಿಯಿಂದ ಸ್ಪಂದನಗಳ ಪ್ರಕ್ಷೇಪಣೆಯ ಕಾರ್ಯ ಅಲ್ಪ ಪ್ರಮಾಣದಲ್ಲಿ ಆಗುತ್ತದೆ.

೨. ಬಿಳಿಯ ಬಣ್ಣದ ರಂಗೋಲಿಯಿಂದ ಶಾಂತಿಯ ಸ್ಪಂದನಗಳು ಅಧಿಕ ಪ್ರಮಾಣದಲ್ಲಿ ಪ್ರಕ್ಷೇಪಿಸುತ್ತವೆ.

ಬಿಳಿಯ ಬಣ್ಣದ ರಂಗೋಲಿಯಲ್ಲಿ ಬಣ್ಣಗಳನ್ನು ತುಂಬಿದರೆ ರಂಗೋಲಿಯಲ್ಲಿರುವ ನಿರ್ಗುಣ ತತ್ತ್ವವು ಸಗುಣ-ನಿರ್ಗುಣ ತತ್ತ್ವದಲ್ಲಿ ರೂಪಾಂತರವಾಗುತ್ತದೆ’.

ಹೊಸ್ತಿಲಿನ ಮೇಲೆ ರಂಗೋಲಿಯನ್ನು ಬಿಡಿಸುವುದರಿಂದಾಗುವ ಲಾಭಗಳು

ಹೊಸ್ತಿಲಿನ ಹತ್ತಿರ ತೊಂದರೆದಾಯಕ ಶಕ್ತಿಯ ಕಣಗಳು ಕಾರ್ಯನಿರತವಾಗಿರುತ್ತವೆ. ರಂಗೋಲಿಯನ್ನು ಬಿಡಿಸುವುದರಿಂದ ಹೊಸ್ತಿಲಿನ ಹತ್ತಿರ ಆಕ್ರಮಣ ಮಾಡುವ ತೊಂದರೆದಾಯಕ ಶಕ್ತಿಗಳು ದೂರವಾಗುತ್ತವೆ.

ರಂಗೋಲಿಯ ಮೇಲೆ ಅರಿಶಿಣ ಮತ್ತು ಕುಂಕುಮವನ್ನು ಹಾಕುವುದರಿಂದಾಗುವ ಲಾಭಗಳು

೧. ಕೆಟ್ಟ ಶಕ್ತಿಗಳ ತೊಂದರೆಗಳಿಂದ ವಾಸ್ತುವಿನ ರಕ್ಷಣೆಯಾಗಲು ಅರಿಶಿಣ ಮತ್ತು ಕುಂಕುಮದ ಮಿಶ್ರಣವನ್ನು ಮಾಡಿ ಹೊಸ್ತಿಲಿನ ಮೇಲೆ ಸ್ವಸ್ತಿಕಗಳನ್ನು ಬಿಡಿಸುವುದು

೧ ಅ. ಅರಿಶಿಣ ಮತ್ತು ಕುಂಕುಮದ ಮಿಶ್ರಣವನ್ನು ಮಾಡಿ ಅದರಿಂದ ಹೊಸ್ತಿಲಿನ ಮೇಲೆ ಸ್ವಸ್ತಿಕವನ್ನು ಬಿಡಿಸಲಾಗುತ್ತದೆ, ಆಗ ಅರಿಶಿಣದ ಮಾಧ್ಯಮದಿಂದ ಪೃಥ್ವಿ ತತ್ತ್ವ ಮತ್ತು ಕುಂಕುಮದ ಮಾಧ್ಯಮದಿಂದ ಶಕ್ತಿ ತತ್ತ್ವ ಪ್ರಕ್ಷೇಪಿಸುತ್ತದೆ.

೧ ಆ. ಹೊಸ್ತಿಲಿನ ಮೇಲೆ ಬಿಡಿಸಲಾಗುವ ಈ ಸ್ವಸ್ತಿಕದಿಂದ ವಾಸ್ತುವಿನಲ್ಲಿ ಹೊರಗಿನಿಂದ ಬರುವ ಮತ್ತು ಪಾತಾಳದಿಂದ ಬರುವ ತೊಂದರೆದಾಯಕ ಸ್ಪಂದನಗಳು ತಡೆಯಲ್ಪಡುತ್ತವೆ. ಇದರಿಂದ ವಾಸ್ತುವಿನ ರಕ್ಷಣೆಯಾಗುತ್ತದೆ.

ಸಾತ್ತ್ವಿಕ ರಂಗೋಲಿಯನ್ನು ಬಿಡಿಸುವುದರಿಂದಾಗುವ ಲಾಭಗಳು

. ರಂಗೋಲಿಗಳ ಆಕೃತಿಗಳ ಟೊಳ್ಳಿನಿಂದ ಈಶ್ವರೀ ತತ್ತ್ವದ ಸ್ಪಂದನಗಳು ಆಕರ್ಷಿಸಲ್ಪಟ್ಟು, ಅವು ನೆಲದ ಮೇಲೆ ಸಮಾನಾಂತರವಾಗಿ ಹರಡುತ್ತವೆ.

. ರಂಗೋಲಿಗಳ ಸಾತ್ತ್ವಿಕ ಆಕೃತಿಗಳಿಂದ ಭೂಮಿಯಿಂದ ಮೇಲೆ ಎರಡೂವರೆ ಅಡಿಗಳ ವರೆಗೆ ಮತ್ತು ಭೂಮಿಯ ಮೇಲೆ ಅಡ್ಡ ೫ ಅಡಿಗಳ ವರೆಗೆ ಸತ್ತ್ವಪ್ರಧಾನ ಸ್ಪಂದನಗಳು ಹರಡುತ್ತವೆ.

. ರಂಗೋಲಿಯ ಮಧ್ಯ ಬಿಂದುವಿನಿಂದ ಸ್ಪಂದನಗಳ ಉತ್ಪತ್ತಿಯಾಗುತ್ತಿದ್ದು, ನಿರ್ಮಾಣವಾಗುವ ಸ್ಪಂದನಗಳು ವಾತಾವರಣದಲ್ಲಿ ಹರಡುತ್ತವೆ.

. ರಂಗೋಲಿಗಳ ಚುಕ್ಕೆಗಳಿಂದ ರಂಗೋಲಿಯ ಎರಡೂ ಬದಿಗಳು ಸಮನಾಂತರವಾಗಿರುವುದರಿಂದ ಅವುಗಳಿಂದ ದೇವತೆಯ ಸ್ಪಂದನಗಳು ಆಕರ್ಷಿಸುತ್ತವೆ.

೫. ರಂಗೋಲಿಯಲ್ಲಿ ಅಸಾತ್ತ್ವಿಕ ಬಣ್ಣಗಳನ್ನು (ರಾಸಾಯನಿಕ ಬಣ್ಣಗಳನ್ನು) ಉಪಯೋಗಿಸಿದರೆ ಅವುಗಳ ಸಾತ್ತ್ವಿಕತೆ ಕಡಿಮೆಯಾಗುತ್ತದೆ ಎಂದು ಅರಿವಾಯಿತು.

. ರಂಗೋಲಿಗಳನ್ನು ಬಿಡಿಸುವಾಗ ಆಗುವ ಕೈಗಳ ಮುದ್ರೆಗಳಿಂದ ಜೀವಕ್ಕೆ ರಂಗೋಲಿಯಿಂದ ನಿರ್ಮಾಣವಾಗುವ ಚೈತನ್ಯ ಮತ್ತು ಶಕ್ತಿಯ ಸ್ಪಂದನಗಳನ್ನು ಸಹಜವಾಗಿ ಗ್ರಹಿಸಲು ಸಾಧ್ಯವಾಗುತ್ತದೆ.

. ರಂಗೋಲಿಯನ್ನು ಬಿಡಿಸಿ ಪೂರ್ಣಗೊಳಿಸುವಾಗ ಜೀವಕ್ಕೆ ಅಂತರ್ಮುಖತೆಯನ್ನು ಪ್ರಾಪ್ತಮಾಡಿಕೊಳ್ಳಲು ಸಾಧ್ಯವಾಗುತ್ತದೆ.

. ಭೂಮಿಯ ಮೇಲಿನ ಸಾತ್ತ್ವಿಕ ರಂಗೋಲಿಯಿಂದ ಭೂದೇವಿಯ ಪೂಜೆಯನ್ನು ಮಾಡಿದಂತೆ ಅನಿಸಿತು ಮತ್ತು ರಂಗೋಲಿ ಎಂದರೆ ಅದು ಭೂದೇವಿಯ ಆಸನವಾಗಿದ್ದು ಅವಳು ಅದರ ಮೇಲೆ ವಿರಾಜಮಾನಳಾಗಿದ್ದಾಳೆ ಎಂದು ಅನಿಸಿತು.

– ಕು. ಪ್ರಿಯಾಂಕಾ ಲೋಟಲಿಕರ, ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ, ಗೋವಾ.

ದೀಪಾವಳಿಯ ನಿಮಿತ್ತ ದೇವತೆಯ ತತ್ತ್ವ ಆಕರ್ಷಿಸುವ ಮತ್ತು ಪ್ರಕ್ಷೇಪಿಸುವ ರಂಗೋಲಿಯನ್ನು ಬಿಡಿಸಿರಿ !

* ಸೂಕ್ಷ್ಮ : ಪ್ರತ್ಯಕ್ಷ ಕಾಣುವ ಅವಯವಗಳಾದ ಮೂಗು, ಕಿವಿ, ಕಣ್ಣುಗಳು, ನಾಲಿಗೆ ಮತ್ತು ಚರ್ಮ ಇವು ಪಂಚಜ್ಞಾನೇಂದ್ರಿಯಗಳಾಗಿವೆ. ಈ ಪಂಚಜ್ಞಾನೇಂದ್ರಿಯಗಳು, ಮನಸ್ಸು ಮತ್ತು ಬುದ್ಧಿ ಇವುಗಳ ಆಚೆಗಿನ ಎಂದರೆ ಸೂಕ್ಷ್ಮ. ಸಾಧನೆಯಲ್ಲಿ ಪ್ರಗತಿ ಮಾಡಿಕೊಂಡ ಕೆಲವು ವ್ಯಕ್ತಿಗಳಿಗೆ ಈ ಸೂಕ್ಷ್ಮ ಸಂವೇದನೆಯ ಅರಿವಾಗುತ್ತದೆ. ಈ ಸೂಕ್ಷ್ಮ ಜ್ಞಾನದ ಬಗ್ಗೆ ವಿವಿಧ ಧರ್ಮಗ್ರಂಥಗಳಲ್ಲಿ ಉಲ್ಲೇಖವಿದೆ.

* ಸೂಕ್ಷ್ಮ ಪರೀಕ್ಷಣೆ : ಯಾವುದಾದರೊಂದು ಘಟನೆಯ ಬಗ್ಗೆ ಅಥವಾ ಪ್ರಕ್ರಿಯೆಯ ಬಗ್ಗೆ ಚಿತ್ತಕ್ಕೆ (ಅಂತರ್ಮನಸ್ಸಿಗೆ) ಏನು ಅರಿವಾಗುತ್ತದೆಯೋ, ಅದಕ್ಕೆ ‘ಸೂಕ್ಷ್ಮ ಪರೀಕ್ಷಣೆ ಎನ್ನುತ್ತಾರೆ.

* ಕೆಟ್ಟ ಶಕ್ತಿ: ವಾತಾವರಣದಲ್ಲಿ ಉತ್ತಮ ಹಾಗೂ ಕೆಟ್ಟ ಎರಡೂ ಶಕ್ತಿಗಳು ಕಾರ್ಯನಿರತವಾಗಿರುತ್ತವೆ. ಒಳ್ಳೆಯ ಶಕ್ತಿ ಒಳ್ಳೆಯ ಕಾರ್ಯಕ್ಕಾಗಿ ಮಾನವನಿಗೆ ಸಹಾಯ ಮಾಡುತ್ತವೆ ಹಾಗೂ ಕೆಟ್ಟ ಶಕ್ತಿಗಳು ಅವನಿಗೆ ತೊಂದರೆ ಕೊಡುತ್ತವೆ. ಹಿಂದಿನ ಕಾಲದಲ್ಲಿ ಋಷಿಮುನಿಗಳ ಯಜ್ಞಗಳಲ್ಲಿ ರಾಕ್ಷಸರು ವಿಘ್ನಗಳನ್ನು ತಂದಿರುವ ಅನೇಕ ಕಥೆಗಳು ವೇದ -ಪುರಾಣಗಳಲ್ಲಿ ಇರುತ್ತವೆ. ‘ಅಥರ್ವವೇದದಲ್ಲಿ ಅನೇಕ ಕಡೆಗಳಲ್ಲಿ ಕೆಟ್ಟ ಶಕ್ತಿ. ಉದಾ. ಅಸುರರು, ರಾಕ್ಷಸರು, ಪಿಶಾಚಿ ಇವರ ಪ್ರತಿಬಂಧದ ಮಂತ್ರಗಳನ್ನು ಹೇಳಲಾಗಿದೆ. ಕೆಟ್ಟ ಶಕ್ತಿಗಳ ತೊಂದರೆಯ ನಿವಾರಣೆಗಾಗಿ ವಿವಿಧ ಆಧ್ಯಾತ್ಮಿಕ ಉಪಾಯಗಳನ್ನು ವೇದ ಮತ್ತು ಧರ್ಮಗ್ರಂಥಗಳಲ್ಲಿ ಹೇಳಲಾಗಿದೆ.