ಜಾಹೀರಾತಿನ ಮೂಲಕ ಕರ್ವಾ ಚೌಥ ವ್ರತದ ಅವಹೇಳನೆ ಮಾಡಿದ ಡಾಬರ್ ಸಂಸ್ಥೆ

ಸಲಿಂಗಕಾಮಿ ಮಹಿಳೆಯರಿಂದ ಕರ್ವಾ ಚೌಥ ಆಚರಣೆ !

ಹಿಂದೂಗಳ ಧಾರ್ಮಿಕ ವ್ರತಗಳನ್ನು ಈ ರೀತಿ ಅವಮಾನಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತಹ ಕಾನೂನು ಇಲ್ಲದಿರುವುದು ಎಲ್ಲರಿಗೂ ಅನುಕೂಲಕರವಾಗಿಬಿಟ್ಟಿದೆ. ಈ ಬಗ್ಗೆ ಕೇಂದ್ರ ಸರಕಾರವು ಯಾವಾಗ ಗಮನ ಹರಿಸಲಿದೆ, ಎಂಬ ಪ್ರಶ್ನೆ ಹಿಂದೂಗಳ ಮನಸ್ಸಿನಲ್ಲಿ ಮೂಡುತ್ತದೆ ! – ಸಂಪಾದಕರು 

ನವದೆಹಲಿ – ‘ಡಾಬರ್’ ಸಂಸ್ಥೆಯು ತನ್ನ ಉತ್ಪನ್ನವಾದ ‘ಗೋಲ್ಡ್ ಬ್ಲೀಚ್’ಗಾಗಿ (ಮುಖವನ್ನು ಕಾಂತಿಯುತವಾಗಿಸಲು ಉಪಾಯ) ಪ್ರಸಾರ ಮಾಡಿದ ಜಾಹೀರಾತಿನಲ್ಲಿ ಸಲಿಂಗಕಾಮಿ ದಂಪತಿಗಳು ತಮ್ಮ ಮೊದಲ `ಕರ್ವಾ ಚೌಥ’ ಈ ವ್ರತವನ್ನು ಆಚರಿಸುತ್ತಿರುವಂತೆ ತೋರಿಸಲಾಗಿದೆ. ಇದರಲ್ಲಿ, ಯುವತಿಯೊಬ್ಬಳು ಮತ್ತೊಬ್ಬ ಯುವತಿಯ ಮುಖದ ಮೇಲೆ `ಬ್ಲೀಚ್’ ಹಾಕುತ್ತಿದ್ದಾಳೆ. ಅದೇ ರೀತಿ ಇಬ್ಬರೂ ಹಬ್ಬದ ಮಹತ್ವ ಮತ್ತು ಅದರ ಹಿಂದಿನ ಕಾರಣಗಳ ಬಗ್ಗೆ ಚರ್ಚಿಸುತ್ತಿರುವುದನ್ನು ತೋರಿಸಲಾಗಿದೆ. ಈ ಜಾಹೀರಾತಿನ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಟೀಕೆ ವ್ಯಕ್ತವಾಗುತ್ತಿದೆ.

‘ಕರ್ವಾ ಚೌಥ’ ವ್ರತ ಎಂದರೇನು ?

ಆಶ್ವಯುಜ ಮಾಸದಲ್ಲಿ, ಕೃಷ್ಣ ಪಕ್ಷದಲ್ಲಿ ಬರುವ ಚತುರ್ಥಿಯಂದು `ಕರ್ವಾ ಚೌಥ’ ಆಚರಿಸಲಾಗುತ್ತದೆ. `ಕರ್ವಾ’ ಎಂದರೆ ಮಣ್ಣಿನ ದೀವಟಿಗೆ ಮತ್ತು `ಚೌಥ್’ ಅಂದರೆ ಚತುರ್ಥಿ. ಈ ದಿನ ಹೊಸ ಕರ್ವಾ ತಂದು ಅಲಂಕರಿಸಲಾಗುತ್ತದೆ. ಇದಾದ ಬಳಿಕ ಪೂಜೆಯನ್ನು ಮಾಡಿ ಅದೇ ಕರ್ವಾದಿಂದ ಚಂದ್ರನಿಗೆ ಅಘ್ರ್ಯ ಸಲ್ಲಿಸಲಾಗುತ್ತದೆ. ಕರ್ವಾ ಚೌಥ ವ್ರತವು ಮುಖ್ಯವಾಗಿ ಸೌಭಾಗ್ಯವತಿ ಸ್ತೀಯರು ಮಾಡುವ ವ್ರತವಾಗಿದೆ. ಒಳ್ಳೆಯ ಪತಿ ಸಿಗಬೇಕು ಎಂದು ಕೆಲವು ಕಡೆಗಳಲ್ಲಿ ಕುಮಾರಿಯರು ಸಹ ಈ ವ್ರತವನ್ನು ಆಚರಿಸುತ್ತಾರೆ. ಕರ್ವಾ ಚೌಥ ಅನ್ನು ಮುಖ್ಯವಾಗಿ ಉತ್ತರ ಭಾರತದಲ್ಲಿ ದೊಡ್ಡ ಪ್ರಮಾಣದಲ್ಲಿ ಆಚರಿಸಲಾಗುತ್ತದೆ. ಈ ದಿನ ಮಹಿಳೆಯರು ಮುಂಜಾನೆ ಎದ್ದು ವ್ರತದ ಸಂಕಲ್ಪ ಮಾಡುತ್ತಾರೆ. ಇಡೀ ದಿನ ನಿರ್ಜಲ ವ್ರತ (ನೀರು ಸಹ ಕುಡಿಯದೆ ಮಾಡುವ ವ್ರತ)ವನ್ನು ಮಾಡಿ, ರಾತ್ರಿ ಚಂದ್ರನ ದರ್ಶನ ಮಾಡಿ, ಅವನಿಗೆ ಪೂಜೆ ಸಲ್ಲಿಸಿ ಅಘ್ರ್ಯವನ್ನು ನೀಡುತ್ತಾರೆ ಮತ್ತು ತದನಂತರವೇ ಯಜಮಾನರ(ಪತಿಯ) ಕೈಯಿಂದ ನೀರು ಸೇವಿಸಿ ವ್ರತವನ್ನು ಸಮಾಪ್ತಿಗೊಳಿಸಲಾಗುತ್ತದೆ. ಈ ವ್ರತಾಚರಣೆಯಲ್ಲಿ ಬೆಳಿಗ್ಗೆ ಮಹಾದೇವ ಶಿವಶಂಕರ, ಶ್ರೀ ಪಾರ್ವತಿ ದೇವಿ, ಗಣಪತಿ ಮತ್ತು ಕಾರ್ತಿಕೇಯರನ್ನು ಪೂಜಿಸಲಾಗುತ್ತದೆ. ಇದೇ ದಿನ ಸಂಕಷ್ಟ ಚತುರ್ಥಿ ಇರುವುದರಿಂದ ಈ ವ್ರತದಲ್ಲಿ ಗಣಪತಿ ಪೂಜೆಗೆ ವಿಶೇಷ ಮಹತ್ವವಿದೆ, ಎಂದು ಹೇಳಲಾಗುತ್ತದೆ.