ಉತ್ತರಪ್ರದೇಶದಲ್ಲಿನ `ಫೈಜಾಬಾದ್ ರೈಲ್ವೆ ಜಂಕ್ಷನ’ನ ಇನ್ನುಮುಂದೆ ‘ಅಯೋಧ್ಯಾ ಕ್ಯಾಂಟ್’ ಆಗಲಿದೆ!

ಹೇಗೆ ಉತ್ತರಪ್ರದೇಶ ಸರಕಾರವು ರಾಜ್ಯದಲ್ಲಿನ ಮೊಗಲರ ಕಾಲದ ಹೆಸರುಗಳನ್ನು ಬದಲಾಯಿಸುತ್ತಿದೆಯೋ, ಅಷ್ಟು ಪ್ರಮಾಣದಲ್ಲಿ ಇತರ ಯಾವುದೇ ರಾಜ್ಯದಲ್ಲಿ ಹೀಗೆ ಆಗುತ್ತಿರುವುದು ಕಂಡು ಬರುತ್ತಿಲ್ಲ. ಕೇಂದ್ರ ಸರಕಾರವು ಇನ್ನು ದೇಶಾದ್ಯಂತದ ಮೊಘಲರ ಮತ್ತು ಬ್ರಿಟಿಷರ ಕಾಲದ ಹೆಸರುಗಳನ್ನು ಬದಲಾಯಿಸುವ ನಿರ್ಣಯ ತೆಗೆದುಕೊಳ್ಳಬೇಕು !- ಸಂಪಾದಕರು 

ಲಕ್ಷ್ಮಣಪುರಿ (ಉತ್ತರಪ್ರದೇಶ) – ಉತ್ತರಪ್ರದೇಶ ಸರಕಾರವು `ಫೈಜಾಬಾದ್ ರೈಲ್ವೆ ಜಂಕ್ಷನ್’ನ ಹೆಸರನ್ನು ಬದಲಾಯಿಸಿ ‘ಅಯೋಧ್ಯಾ ಕ್ಯಾಂಟ್’ ಎಂದು ಇಡುವ ನಿರ್ಧಾರ ಕೈಗೊಂಡಿದೆ. ಶೀಘ್ರವಾಗಿ ಕೇಂದ್ರ ಸರಕಾರ ಮತ್ತು ಮುಖ್ಯಮಂತ್ರಿ ಕಾರ್ಯಾಲಯದಿಂದ ಇದನ್ನು ಅಧಿಕೃತವಾಗಿ ಘೋಷಿಸಲಾಗುವುದು. ಎಂ.ಐ.ಎಂ.ನ ಅಧ್ಯಕ್ಷ ಮತ್ತು ಸಂಸದ ಅಸದುದ್ದಿನ್ ಓವೈಸಿ ಇವರು ಕಳೆದ ವಾರದಲ್ಲಾದ ರಾಜ್ಯದ ಪ್ರವಾಸದ ಮುನ್ನ ಅಯೋಧ್ಯೆಯನ್ನು `ಫೈಜಾಬಾದ್’ ಎಂದೆನ್ನುವ ಭಿತ್ತಿಪತ್ರಗಳನ್ನು ಜಿಲ್ಲೆಗಳಲ್ಲಿ ಅಂಟಿಸಲಾಗಿತ್ತು. ಅದನ್ನು ವಿರೋಧಿಸಲಾಗಿತ್ತು.