ಇಸ್ಲಾಮನ್ನು ಸ್ವೀಕರಿಸಿ ಇಲ್ಲವಾದರೆ ಅಫಘಾನಿಸ್ತಾನವನ್ನು ತ್ಯಜಿಸಿ ! – ತಾಲಿಬಾನ್ ನಿಂದ ಸಿಖ್ಕರಿಗೆ ಬೆದರಿಕೆ

ಖಲಿಸ್ತಾನವಾದಿಗಳು ಈ ಬಗ್ಗೆ ಏಕೆ ಮಾತನಾಡುವುದಿಲ್ಲ ? ಅಥವಾ ಅವರಿಗೆ ಪಾಕಿಸ್ತಾನ ಮತ್ತು ಅಪಘಾನಿಸ್ತಾನದಲ್ಲಿ ಸಿಖ್ಕರ ಮೇಲೆ ನಡೆಯುವ ದೌರ್ಜನ್ಯಗಳು ಒಪ್ಪಿಗೆ ಇದೆಯೇ ?

ಕಾಬುಲ್ (ಅಪಘಾನಿಸ್ತಾನ) – ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಅಧಿಕಾರಕ್ಕೆ ಬಂದ ನಂತರ ಅಲ್ಲಿಯ ಉಳಿದಿರುವ ಸಿಖ್ಕರನ್ನು ಅಪಘಾನಿಸ್ತಾನ ತ್ಯಜಿಸಿ ಇಲ್ಲವಾದರೆ ಇಸ್ಲಾಮನ್ನು ಸ್ವೀಕಾರ ಮಾಡಿ, ಎಂದು ಬೆದರಿಕೆ ನೀಡಿದ್ದಾರೆಂದು ‘ಇಂಟರ್ನ್ಯಾಷನಲ್ ಫೋರಂ ಫಾರ್ ರೈಟ್ಸ್ ಅಂಡ್ ಸೆಕ್ಯೂರಿಟಿ’ಯ ವರದಿಯಿಂದ ತಿಳಿದುಬಂದಿದೆ.