2050ರಲ್ಲಿ ಬಾಂಗ್ಲಾದೇಶದಲ್ಲಿ ಹಿಂದೂಗಳೇ ಇರುವುದಿಲ್ಲ ! – ಬಾಂಗ್ಲಾದೇಶಿ ಲೇಖಕನ ಪುಸ್ತಕದಲ್ಲಿ ಹೇಳಿಕೆ

* ಈ ಸ್ಥಿತಿ ಬರುವ ಮೊದಲು ಭಾರತದಲ್ಲಿ ಹಿಂದೂ ರಾಷ್ಟ್ರವನ್ನು ಸ್ಥಾಪಿಸಿರಿ, ಇದರಿಂದ ಜಗತ್ತಿನಾದ್ಯಂತ ಹಿಂದೂಗಳನ್ನು ರಕ್ಷಿಸಬಹುದು ! – ಸಂಪಾದಕರು 

* ಭಾರತದಲ್ಲಿನ ಅಲ್ಪಸಂಖ್ಯಾತರ ಮೇಲೆ ತಥಾಕಥಿತ ಅನ್ಯಾಯವಾದಾಗ ಆಕಾಶ-ಪಾತಾಳ ಒಂದು ಮಾಡುವ ಮಾನವ ಹಕ್ಕುಗಳ ಸಂಘಟನೆಗಳು ಬಾಂಗ್ಲಾದೇಶದಲ್ಲಿರುವ ಅಲ್ಪಸಂಖ್ಯಾತ ಹಿಂದೂಗಳ ಸಂಪೂರ್ಣ ನಾಶವಾಗುತ್ತಿರುವಾಗ ಚಕಾರವನ್ನು ಎತ್ತುವುದಿಲ್ಲ, ಎಂಬುದನ್ನು ಗಮನದಲ್ಲಿಟ್ಟುಕೊಳ್ಳಿರಿ ! -ಸಂಪಾದಕರು 

ಮೇಲಿನ ಚಿತ್ರ ಪ್ರಕಟಿಸುವುದರ ಉದ್ದೇಶ ಯಾರ ಭಾವನೆಗೆ ನೋವನುಂಟು ಮಾಡುವುದಾಗಿರದೆ, ಮಾಹಿತಿಯನ್ನು ನೀಡುವ ಉದ್ದೇಶದಿಂದ ಪ್ರಕಟಿಸಲಾಗಿದೆ – ಸಂಪಾದಕ

ಢಾಕಾ (ಬಾಂಗ್ಲಾದೇಶ) – ಪ್ರತಿದಿನ ಸರಾಸರಿ 632 ಹಿಂದೂಗಳು ಬಾಂಗ್ಲಾದೇಶವನ್ನು ತೊರೆದು ಬೇರೆ ದೇಶಗಳಲ್ಲಿ ಆಶ್ರಯ ಪಡೆದುಕೊಳ್ಳುತ್ತಿದ್ದಾರೆ. ಆದ್ದರಿಂದ ಮುಂಬರುವ 3 ದಶಕಗಳಲ್ಲಿ, ಅಂದರೆ 2050 ರ ವರೆಗೆ ಬಾಂಗ್ಲಾದೇಶದಲ್ಲಿ ಹಿಂದೂಗಳೇ ಉಳಿಯುವುದಿಲ್ಲ, ಎಂದು ಢಾಕಾ ವಿಶ್ವವಿದ್ಯಾಲಯದ ಪ್ರಾಧ್ಯಾಪಕರಾದ ಡಾ. ಅಬುಲ ಬರಕತರವರು ಬಾಂಗ್ಲಾದೇಶದಲ್ಲಿರುವ ಹಿಂದೂಗಳ ಸ್ಥಿತಿಯ ಬಗ್ಗೆ ಬರೆದಿರುವ `ಪಾಲಿಟಿಕಲ ಇಕಾನಾಮಿ ಆಫ ರಿಫಾರ್ಮಿಂಗ ಅಗ್ರಿಕಲ್ಚರ-ಲ್ಯಾಂಡ-ವಾಟರ ಬಾಡೀಸ ಇನ ಬಾಂಗ್ಲಾದೇಶ’ (‘Political Economy of Reforming Agriculture-Land-Water Bodies in Bangladesh’) ಎಂಬ ಪುಸ್ತಕದಲ್ಲಿ ತಿಳಿಸಿದ್ದಾರೆ. ಅಬುಲರವರು ಸಂಶೋಧನೆ ನಡೆಸಿ ಬರೆದಿರುವ ಪುಸ್ತಕವು 2016 ರಲ್ಲಿ ಪ್ರಕಾಶಿಸಲಾಗಿತ್ತು. ‘ಬಾಂಗ್ಲಾದೇಶದಲ್ಲಿ ಇಷ್ಟು ಭೀಕರ ಪರಿಸ್ಥಿತಿ ನಿರ್ಮಾಣವಾಗುವುದರ ಹಿಂದೆ ಕಟ್ಟರವಾದಿ ಮುಸಲ್ಮಾನರ ಪ್ರಭಾವ ಹೆಚ್ಚಾಗಿರುವುದೇ ಕಾರಣವಾಗಿದೆ. ಕಟ್ಟರ ಮುಸಲ್ಮಾನರು ಒಟ್ಟಾಗಿ ಅಲ್ಪಸಂಖ್ಯಾತ ಹಿಂದೂಗಳ ಮೇಲೆ ದಾಳಿ ನಡೆಸುತ್ತಾರೆ’, ಎಂದು ಈ ಪುಸ್ತಕದಲ್ಲಿ ನಮೂದಿಸಲಾಗಿದೆ.

ಬಾಂಗ್ಲಾದೇಶದಲ್ಲಿ ಕೇವಲ ಶೇ. 6.5 ರಷ್ಟು ಮಾತ್ರ ಹಿಂದೂಗಳು ಉಳಿದಿದ್ದಾರೆ !

ವಿಶ್ವದ ಅಂಕಿ ಅಂಶಗಳ ಪ್ರಕಾರ ಬಾಂಗ್ಲಾದೇಶದಲ್ಲಿ ಹಿಂದೂಗಳ ಜನಸಂಖ್ಯೆ ಒಟ್ಟು ಜನಸಂಖ್ಯೆಯ ಶೇ. 6.5 ರಷ್ಟಾಗಿದೆ. 1971 ರಲ್ಲಿ ಪಶ್ಚಿಮ ಪಾಕಿಸ್ತಾನದಿಂದ ಬಾಂಗ್ಲಾದೇಶಕ್ಕೆ ಸ್ವಾತಂತ್ರ್ಯ ದಕ್ಕಿಸಿಕೊಡುವುದರಲ್ಲಿ ಭಾರತದ ದೊಡ್ಡ ಪಾತ್ರವಿತ್ತು; ಆದರೆ ಅನಂತರ ಕೂಡಲೇ ಬಾಂಗ್ಲಾದೇಶದಲ್ಲಿರುವ ಹಿಂದೂಗಳ ಮೇಲೆ ಅತ್ಯಾಚಾರಗಳು ಪ್ರಾರಂಭವಾದವು. ಬಾಂಗ್ಲಾದೇಶವು ಸ್ವಾತಂತ್ರ್ಯವಾದಾಗಿನಿಂದ ಹಿಂದೂಗಳ ಮೇಲೆ ದಾಳಿಯಾಗದೇ ಇರುವ ಒಂದೇ ಒಂದು ವರ್ಷವಿಲ್ಲ.

‘ಬಾಂಗ್ಲಾದೇಶ ಬ್ಯೂರೋ ಆಫ ಸ್ಟಾಟಿಸ್ಟಿಕ್’ (ಬಾಂಗ್ಲಾದೇಶ ಅಂಕಿಅಂಶಗಳ ವಿಭಾಗ) ಎಂಬ ಸಂಸ್ಥೆಯ ಅನುಸಾರವಾಗಿ ಬಾಂಗ್ಲಾದೇಶದಲ್ಲಿ 1974 ರಿಂದ ಹಿಂದೂಗಳ ಇಳಿಕೆಯಾಗಿರುವ ಜನಸಂಖ್ಯೆ ಈ ಮುಂದಿನಂತಿದೆ

 

ಕ್ರ.ಸಂ. ವರ್ಷ ಹಿಂದೂಗಳ ಜನಸಂಖ್ಯೆ (ಶೇಕಡಾದಲ್ಲಿ)
1 1974 13.5
2 1989 12.1
3 1991 10.5
4 2001 9.3
5 2011 8.5

2021 ರಲ್ಲಿ ಬಾಂಗ್ಲಾದೇಶದಲ್ಲಿ ಹಿಂದೂಗಳು ಅಂದಾಜು ಕೇವಲ ಶೇ. 6.5 ರಷ್ಟು ಉಳಿದಿದ್ದಾರೆ

ಕಳೆದ 9 ವರ್ಷಗಳಲ್ಲಿ ಹಿಂದೂಗಳ ಮೇಲೆ 3 ಸಾವಿರ 600 ದಾಳಿಗಳು !

ಮಾನವ ಹಕ್ಕುಗಳ ಸಂಘಟನೆಯ ಅಂಕಿ ಅಂಶಗಳನುಸಾರವಾಗಿ ಕಳೆದ 9 ವರ್ಷಗಳಲ್ಲಿ ಹಿಂದೂಗಳ ಮೇಲೆ 3 ಸಾವಿರದ 600 ದಾಳಿಗಳು ನಡೆದಿವೆ. ಬಾಂಗ್ಲಾದೇಶದಲ್ಲಿ 1990, 1995, 1999 ಹಾಗೂ 2002 ಈ ವರ್ಷಗಳಲ್ಲಿ ದೊಡ್ಡ ಗಲಭೆಗಳು ನಡೆದವು. ಅದರಲ್ಲಿ ಹಿಂದೂಗಳನ್ನು ಗುರಿ ಮಾಡಲಾಗಿತ್ತು. ಬಾಂಗ್ಲಾದೇಶದಲ್ಲಿ ಹಿಂದೂಗಳ ದೇವಾಲಯಗಳನ್ನು ಧ್ವಂಸ ಮಾಡುವುದು, ಅವರ ಮನೆಗಳನ್ನು ಸುಡುವುದು, ಹಿಂದೂ ಹುಡುಗಿಯರು ಹಾಗೂ ಚಿಕ್ಕ ಮಕ್ಕಳನ್ನು ಅಪಹರಿಸುವುದು, ಹಿಂದು ಹುಡುಗಿಯರ ಹಾಗೂ ವಿವಾಹಿತ ಮಹಿಳೆಯರ ಮೇಲೆ ಬಲಾತ್ಕಾರ ನಡೆಸುವುದು, ಈ ರೀತಿ ಅತ್ಯಾಚಾರಗಳು ನಡೆಯುತ್ತಿವೆ.

1951 ರಲ್ಲಿ 30 ಲಕ್ಷ ಹಿಂದೂಗಳ ನರಮೇಧ !

ಬಾಂಗ್ಲಾದೇಶದ ಇಸತಿಹಾಸದಲ್ಲಿ 1951 ರಲ್ಲಿ ಹಿಂದೂಗಳ ಮೇಲೆ ಅತ್ಯಾಧಿಕ ಅತ್ಯಾಚಾರವಾಯಿತು. ಬಾಂಗ್ಲಾದೇಶ ಮುಕ್ತಿ ಸಂಗ್ರಾಮದ ಸಮಯದಲ್ಲಿ ಪಾಕಿಸ್ತಾನಿ ಸೈನಿಕರು ಹಿಂದೂಗಳ ಊರುಗಳನ್ನೇ ಧ್ವಂಸ ಮಾಡಿದ್ದರು. ಒಂದು ವರದಿಯ ಪ್ರಕಾರ ಆಗ 30 ಲಕ್ಷಕ್ಕಿಂತ ಹೆಚ್ಚು ಹಿಂದೂಗಳ ನರಮೇಧ ನಡೆದಿತ್ತು.

ಹಿಂದೂಗಳ ಭೂಮಿಯನ್ನು ಕಬಳಿಸಲು ಹಿಂದೂಗಳ ಮೇಲೆ ನಡೆಸಲಾಗುವ ದಾಳಿಗಳು !

ಬಾಂಗ್ಲಾದೇಶದಲ್ಲಿ ಹಿಂದೂಗಳ ವಿರುದ್ಧ ಹಿಂಸಾಚಾರವಾಗುವುದರ ಹಿಂದಿನ ಮುಖ್ಯಕಾರಣವೆಂದರೆ ಅವರ ಬಳಿಯಿರುವ ಭೂಮಿಯನ್ನು ಕಬಳಿಸುವುದಾಗಿದೆ. `ಢಾಕಾ ಟೈಮ್ಸ’ ನೀಡಿರುವ ವಾರ್ತೆಯನುಸಾರ ಬಹುಸಂಖ್ಯಾತ ಮುಸಲ್ಮಾನರು ಬಡ ಹಿಂದೂಗಳ ಮೇಲೆ ದಾಳಿ ನಡೆಸುತ್ತಾರೆ, ಅವರ ಮಹಿಳೆಯರ ಮೇಲೆ ಅತ್ಯಾಚಾರ ನಡೆಸುತ್ತಾರೆ, ಹಾಗೂ ಅವರ ಮನೆಗಳನ್ನು ಸುಡುತ್ತಾರೆ. ಇದರಿಂದ ಹಿಂದೂ ಕುಟುಂಬವು ತಮ್ಮ ಮನೆಗಳನ್ನು ತೊರೆದು ಸುರಕ್ಷಿತ ಸ್ಥಳಕ್ಕೆ ಹೋಗಲೇಬೇಕಾಗುತ್ತದೆ. ಅನಂತರ ಮುಸಲ್ಮಾನರು ಹಿಂದೂಗಳ ಭೂಮಿಯನ್ನು ಕಬಳಿಸುತ್ತಾರೆ, ಇದು ಇಲ್ಲಿನ ಅಲ್ಪಸಂಖ್ಯಾತ ಹಿಂದೂಗಳ ಮೇಲೆ ನಡೆಸುವ ದಾಳಿಯ ಪದ್ಧತಿಯಾಗಿದೆ.

ಬಾಂಗ್ಲಾದೇಶದಲ್ಲಿ 2011 ರಲ್ಲಿ ನಡೆದ ಜನಗಣತಿಗನುಸಾರ ಮುಸಲ್ಮಾನರ ಜನಸಂಖ್ಯೆ 13 ಕೋಟಿಗಿಂತಲೂ ಹೆಚ್ಚು, ಹಾಗೂ ಹಿಂದೂಗಳ ಜನಸಂಖ್ಯೆ ಕೇವಲ 1 ಕೋಟಿ 27 ಲಕ್ಷದ 20 ಸಾವಿರ ದಷ್ಟಿತ್ತು. ‘ಕಳೆದ 10 ವರ್ಷಗಳ ಕಾಲಾವಧಿಯಲ್ಲಿ ಬಾಂಗ್ಲಾದೇಶಿ ಮತಾಂಧರಿಂದ ಹಿಂದೂಗಳ ಮೇಲಿನ ದಾಳಿಯ ಪ್ರಮಾಣ ಪ್ರಚಂಡವಾಗಿ ಹೆಚ್ಚಾಗಿದೆ’, ಎಂದು ‘ಬಾಂಗ್ಲಾದೇಶಿ ಮೈನಾರಟಿ ವಾಚ್’ನ ಬಾಂಗ್ಲಾದೇಶದಲ್ಲಿನ ಅಲ್ಪಸಂಖ್ಯಾತ ಹಿಂದೂಗಳ ಹಿತಕ್ಕಾಗಿ ಕಾರ್ಯ ಮಾಡುವ ಸಂಘಟನೆಯ ಅಧ್ಯಕ್ಷ ಪೂ. ರವಿಂದ್ರ ಘೋಷ ಇವರು ‘ಸನಾತನ ಪ್ರಭಾತ’ನ ಪ್ರತಿನಿಧಿಯವರೊಂದಿಗೆ ಮಾತನಾಡುತ್ತಿರುವಾಗ ಮಾಹಿತಿ ನೀಡಿದರು.