ಮುಸಲ್ಮಾನರ ನಿಕಾಹ ಹಿಂದೂಗಳ ವಿವಾಹದಂತೆ ಸಂಸ್ಕಾರವಲ್ಲ ಕೇವಲ ಒಂದು ಒಪ್ಪಂದ ! – ಕರ್ನಾಟಕ ಉಚ್ಚ ನ್ಯಾಯಾಲಯ

ಹಿಂದೂ ಧರ್ಮಶಾಸ್ತ್ರವು ಎಷ್ಟು ಮುಂದುವರೆದಿದೆ ?, ಎಂಬುದು ಇದರಿಂದ ಗಮನಕ್ಕೆ ಬರುತ್ತದೆ ! – ಸಂಪಾದಕರು

ಬೆಂಗಳೂರು – ಮುಸಲ್ಮಾನರಲ್ಲಿನ ನಿಕಾಹ ಒಂದು ಒಪ್ಪಂದವಾಗಿದೆ. ಅದಕ್ಕೆ ವಿವಿಧ ಆಯಾಮಗಳಿವೆ. ಅದು ಹಿಂದೂ ವಿವಾಹ ಪದ್ದತಿಯಂತೆ ಸಂಸ್ಕಾರವಲ್ಲ. ಮುಸಲ್ಮಾನರ ನಿಕಾಹ ಪದ್ದತಿಯು ವಿಚ್ಛೇದನೆಯ ನಂತರ ಉದ್ಭವಿಸುವ ಕೆಲವು ಹಕ್ಕುಗಳು ಮತ್ತು ಕರ್ತವ್ಯಗಳನ್ನು ಪೂರ್ಣಗೊಳಿಸುವುದಿಲ್ಲ. ಇಂತಹ ನಿಕಾಹಗಳು ವಿಚ್ಛೇದನೆದಿಂದ ಮುಗಿದು ಹೋಗುತ್ತವೆ. ಮುಸಲ್ಮಾನರ ನಿಕಾಹವು ಸುಶಿಕ್ಷಿತ ಪದವಿಯನ್ನು ಹೊಂದಿದ ವ್ಯಕ್ತಿಯಾಗಿರಲಿ ಅಥವಾ ಸಾಮಾನ್ಯ ನಾಗರಿಕರಾಗಿರಲಿ ಅದು ಒಂದು ರೀತಿಯ ಒಪ್ಪಂದದಿಂದಲೇ ಆರಂಭವಾಗುತ್ತದೆ. ಎಂದು ಕರ್ನಾಟಕ ಉಚ್ಚ ನ್ಯಾಯಾಲಯವು ಸಾಯರಾ ಬಾನು ಇವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆಯ ಸಮಯದಲ್ಲಿ ಈ ಅಭಿಪ್ರಾಯವನ್ನು ವ್ಯಕ್ತಪಡಿಸಿತು.

1. ಬೆಂಗಳೂರಿನ ಭುವನೇಶ್ವರಿ ನಗರದಲ್ಲಿನ 52 ವರ್ಷದ ಎಜಾಜೂರ ರೆಹಮಾನ ಇವರು ವಿವಾವಹಾಗಿ ಕೆಲವೇ ತಿಂಗಳಲ್ಲಿ 5 ಸಾವಿರ ‘ಮೇಹರ’ ನೀಡಿ ಹೆಂಡತಿ ಸಾಯರಾ ಬಾನೂ ಇವರಿಗೆ ನವೆಂಬರ 5, 1991 ರಂದು ತಲಾಕ್ ನೀಡಿದ್ದ. ಮುಸಲ್ಮಾನರಲ್ಲಿ ವಿವಾಹದ ಸಮಯದಲ್ಲಿ ವರ ತನ್ನ ಪತ್ನಿಗೆ ನಿರ್ಧರಿತವಾದ ಮೊತ್ತವನ್ನು ನೀಡುತ್ತಾನೆ, ಅದಕ್ಕೆ ‘ಮೆಹರ’ ಎಂದು ಹೇಳುತ್ತಾರೆ.

2. ವಿಚ್ಛೇದನದ ನಂತರ ರೆಹಮಾನ ಇನ್ನೊಂದು ವಿವಾಹ ಮಾಡಿಕೊಂಡನು. 2002 ರಲ್ಲಿ ಸಾಯರಾ ಬಾನೂ ಇವರು ಜೀವನಾಂಶ ಕೋರಿ ನ್ಯಾಯಾಲಯದಲ್ಲಿ ಸಿವಿಲ್ ಮೊಕದ್ದಮೆಯನ್ನು ಹೂಡಿದರು. ಈ ಬಗ್ಗೆ ಕೌಟುಂಬಿಕ ನ್ಯಾಯಾಲಯವು ಸಾಯರಾ ಬಾನೂ ಇವರಿಗೆ ಮೊಕದ್ದಮೆಯ ದಿನಾಂಕದಿಂದ ಆಕೆಯ ಸಾವು ಆಗುವವರೆಗೆ ಅಥವಾ ಮರುಮದುವೆಯಾಗುವ ತನಕ ಅಥವಾ ಆಕೆಯ ವಿಚ್ಛೇದನ ಆಗಿರುವ ಗಂಡನು ತೀರಿಕೊಳ್ಳುವ ತನಕ ಪ್ರತಿ ತಿಂಗಳು ಖರ್ಚಿಗಾಗಿ 3 ಸಾವಿರ ನೀಡುವಂತೆ ಆದೇಶ ನೀಡಿತ್ತು.

3. 2011 ರಲ್ಲಿ ಸಾಯರಾ ಬಾನೂ ಮತ್ತೊಮ್ಮೆ ನ್ಯಾಯಾಲಯದಲ್ಲಿ ಅರ್ಜಿಯನ್ನು ಸಲ್ಲಿಸಿ ‘ಖರ್ಚಿಗಾಗಿ ಪ್ರತಿ ತಿಂಗಳು 25 ಸಾವಿರ ನೀಡಬೇಕು’, ಎಂದು ಒತ್ತಾಯಿಸಿದ್ದರು. ನ್ಯಾಯಾಲಯವು ಈ ಅರ್ಜಿಯನ್ನು ತಿರಸ್ಕರಿಸಿದೆ.