ಶೇಖ ಹಸೀನಾ ಅವರು 2016 ರಲ್ಲಿ ಹಿಂದೂಗಳ ಮೇಲೆ ದಾಳಿ ಮಾಡಿದ ಸೂತ್ರಧಾರನಿಗೆ ಚುನಾವಣೆಯ ಉಮೇದ್ವಾರಿಕೆಯನ್ನು ನೀಡಿದ್ದರು ! – ಬಾಂಗ್ಲಾದೇಶದ ಲೇಖಕಿ ತಸ್ಲೀಮಾ ನಸ್ರೀನ್

ಇದರಿಂದ ಹಸೀನಾ ಇವರ ಹಿಂದೂದ್ವೇಷಿ ಚಹರೆಯನ್ನೇ ತೆರೆದಿಟ್ಟಿದೆ. ಇಂತಹವರ ಆಡಳಿತದಲ್ಲಿ ಹಿಂದೂಗಳ ರಕ್ಷಣೆಯಾಗುವುದು ಅಸಾಧ್ಯವೇ ಆಗಿದೆ. ಇದನ್ನೆಲ್ಲ ನೋಡುವಾಗ ಭಾರತವೇ ಮುಂದಾಳತ್ವ ವಹಿಸಿ ಕಠಿಣ ಕ್ರಮವನ್ನು ತೆಗೆದುಕೊಳ್ಳುವುದು ಅನಿವಾರ್ಯವಾಗಿದೆ !- ಸಂಪಾದಕರು

(ಎಡದಿಂದ ) ಬಾಂಗ್ಲಾದೇಶದ ಪ್ರಧಾನಮಂತ್ರಿ ಶೇಕ್ ಹಸೀನಾ ಮತ್ತು ಲೇಖಕಿ ತಸ್ಲೀಮಾ ನಸ್ರೀನ್

ನವದೆಹಲಿ – ಬಾಂಗ್ಲಾದೇಶದಲ್ಲಿ ಏನು ಆಗಲಿದೆ ? ಬಾಂಗ್ಲಾದೇಶದ ಪ್ರಧಾನಮಂತ್ರಿ ಶೇಕ್ ಹಸೀನಾರವರು ಹಿಂದೂಗಳ ಆಸ್ತಿಯನ್ನು ಧ್ವಂಸಮಾಡುವ ಜಿಹಾದಿಗಳ ಮೇಲೆ ಕ್ರಮಕೈಗೊಂಡು ಹಿಂದೂಗಳಿಗೆ ನ್ಯಾಯ ನೀಡುವರೆ ? ಚುನಾವಣೆಯಲ್ಲಿ ಸ್ಪರ್ಧಿಸಲು ಶೇಖ ಹಸಿನಾ ಇವರ ಪಕ್ಷವು 2016 ರಲ್ಲಿ ನಸಿರನಗರದಲ್ಲಿ ಹಿಂದೂಗಳ ಮನೆ ಮತ್ತು ದೇವಸ್ಥಾನಗಳನ್ನು ಧ್ವಂಸ ಮಾಡಿರುವ ಸೂತ್ರಧಾರನಿಗೆ ಉಮೇದ್ವಾರಿಕೆಯನ್ನು ನೀಡಿತ್ತು, ನಾವು ಇದನ್ನು ಮರೆಯಬಾರದು, ಎಂಬ ಮಾಹಿತಿಯನ್ನು ಬಾಂಗ್ಲಾದೇಶಿ ಲೇಖಕಿ ತಸ್ಲೀಮಾ ನಸ್ರೀನ್ ಇವರು ಟ್ವೀಟ್ ಮಾಡಿ ತಿಳಿಸಿದ್ದಾರೆ.