‘ಬಾಂಗ್ಲಾದೇಶದಲ್ಲಿ ಕುರಾನ ಅನ್ನು ಅವಮಾನಿಸುವವರ ರುಂಡ ಕತ್ತರಿಸಿ !’

ಬಂಗಾಲದಲ್ಲಿನ ವಿವಾದಿತ ಫುರಫುರಾ ಮಸೀದಿಯ ಮೌಲ್ವಿ ಪೀರಜಾದಾ ಅಬ್ಬಾಸ ಸಿದ್ದಿಕಿಯವರ ಫತ್ವಾ

ಬಂಗಾಲದಲ್ಲಿನ ತೃಣಮೂಲ ಕಾಂಗ್ರೆಸ್ ಸರಕಾರವು ಇಂತಹ ಮೌಲ್ವಿಯವರ ಮೇಲೆ ಎಂದಿಗೂ ಕ್ರಮ ಕೈಗೊಳ್ಳುವುದಿಲ್ಲ, ಎಂಬುದನ್ನು ತಿಳಿಯಿರಿ ! ಬಂಗಾಲವು ಮತ್ತೊಂದು ಬಾಂಗ್ಲಾದೇಶದವಾಗಿರುವುದರಿಂದ ನಾಳೆ ಅಲ್ಲಿರುವ ಹಿಂದೂಗಳು ಹಾಗೂ ಅವರ ದೇವಾಲಯಗಳ ಮೇಲೆ ದಾಳಿಯಾದರೆ, ಆಶ್ಚರ್ಯ ಪಡಬೇಕಿಲ್ಲ ! – ಸಂಪಾದಕರು 

ಫುರಫುರಾ ಮಸೀದಿಯ ಮೌಲ್ವಿ ಪೀರಜಾದಾ ಅಬ್ಬಾಸ ಸಿದ್ದಿಕಿ

ಕೊಲಕಾತಾ (ಬಂಗಾಲ) – ಬಾಂಗ್ಲಾದೇಶದಲ್ಲಿ ಶ್ರೀ ದುರ್ಗಾದೇವಿ ಪೂಜಾ ಮಂಟಪದಲ್ಲಿನ ಶ್ರೀ ಹನುಮಂತನ ಮೂರ್ತಿಯ ಕಾಲ ಕೆಳಗೆ ಯಾರು ಕುರಾನ ಇಟ್ಟರೋ ಮತ್ತು ಅಲ್ಲಿ ಹನುಮಾನ ಚಾಲೀಸಾವನ್ನು ಪಠಿಸಿದರೋ ಅವರ ರುಂಡ ಕತ್ತರಿಸಬೇಕು, ಎಂಬ ಫತ್ವಾವನ್ನು ಬಂಗಾಲದಲ್ಲಿನ ಫುರಫುರಾ ಶರೀಫ ಎಂಬ ಮಸೀದಿಯ ಮೌಲ್ವಿಯವರು ‘ಇಂಡಿಯನ ಸೆಕ್ಯೂಲರ ಫ್ರಂಟ್’ನ ಸಂಸ್ಥಾಪಕರಾದ ಪೀರಜಾದಾ ಅಬ್ಬಾಸ ಸಿದ್ದೀಕಿಯವರು ಹೇಳಿದರು. 24 ಪರಗಣಾ ಜಿಲ್ಲೆಯಲ್ಲಿನ ಒಂದು ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು. ಈ ಹೇಳಿಕೆಯ ಒಂದು ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಾರವಾಗಿದೆ. ಈ ಬಗ್ಗೆ ಭಾಜಪದ ಮುಖಂಡರಾದ ತರುಣ ಜ್ಯೋತಿ ತಿವಾರಿಯವರು ಕೊಲಕಾತಾದಲ್ಲಿನ ಪೊಲೀಸರಲ್ಲಿ ದೂರನ್ನು ದಾಖಲಿಸಿದ್ದಾರೆ.

ಅಬ್ಬಾಸ ಸಿದ್ದಿಕಿಯವರು ಮಾತನಾಡುತ್ತಾ,

1. ಒಂದು ವೇಳೆ ಜನರಿಗೆ, ಕುರಾನನನ್ನು ಅವಮಾನಿಸುವ ಅಧಿಕಾರವಿದೆ, ಎಂದು ಅನಿಸಿದರೆ, ಆಗ ನಾನು ಕೂಡ ನನಗೂ ಅವರ ರುಂಡ ಕತ್ತರಿಸುವ ಅಧಿಕಾರವಿದೆ ಎಂದು ಹೇಳುವೆನು ಎಂದರು

2. ಮುಸಲ್ಮಾನ ಯುವಕರು ದುರ್ಗಾಪೂಜೆಯಲ್ಲಿ ಭಾಗವಹಿಸುತ್ತಾರೆ, ಅದು ಅಯೋಗ್ಯವಾಗಿದೆ. ಕೆಲವು ವರ್ಷಗಳ ಹಿಂದೆ ದುರ್ಗಾಪೂಜೆಯ ಮಂಟಪದಲ್ಲಿ ಕಾಬಾ (ಮುಸಲ್ಮಾನರ ಧಾರ್ಮಿಕ ಕ್ಷೇತ್ರ) ದಂತಹ ದೃಶ್ಯವಾಳಿಯನ್ನು ನಿರ್ಮಿಸಲಾಗಿರುವುದು ನನಗೆ ನೆನಪಿದೆ. ಅವರಿಗೇನಾದರೂ ಕಾಬಾ ಅಷ್ಟು ಇಷ್ಟವಿದ್ದರೆ ಅವರು ಇಸ್ಲಾಮ್ ಅನ್ನು ಏಕೆ ಸ್ವೀಕರಿಸುವುದಿಲ್ಲ ? ಎಂದು ಹೇಳಿದರು. (ಹಿಂದೂಗಳು ತಮ್ಮ ಧಾರ್ಮಿಕ ಉತ್ಸವಗಳಲ್ಲಿ ಸರ್ವಧರ್ಮಸಮಭಾವವನ್ನು ತೋರಿಸಲು ಮಾಡುವಂತಹ ಹಾಸ್ಯಾಸ್ಪದ ಪ್ರಯತ್ನಗಳನ್ನು ಮತಾಂಧರು ಯಾವ ಭಾವನೆಯಿಂದ ನೋಡುತ್ತಾರೆ ?, ಇದನ್ನು ಹಿಂದೂಗಳು ಈಗಲಾದರೂ ಗಮನಕ್ಕೆ ತಂದುಕೊಂಡು ಈ ರೀತಿಯ ಪ್ರಯತ್ನಿಸುವುದನ್ನು ನಿಲ್ಲಿಸುವರೇ ? – ಸಂಪದಾಕರು)

ಇದೇ ಸಿದ್ದಿಕಿಯವರು ಈ ಹಿಂದೆ ‘ಭಾರತದಲ್ಲಿ ರೋಗಾಣುವಿನಿಂದ 50 ಕೋಟಿ ಜನರು ಸಾಯಲಿ’, ಎಂಬ ಹೇಳಿಕೆ ನೀಡಿದ್ದರು !

ಅಬ್ಬಾಸ ಸಿದ್ದಿಕಿಯವರು ಕೊರೊನಾ ಕಾಲದಲ್ಲಿಯೂ ಆಕ್ಷೇಪಾರ್ಹ ಹೇಳಿಕೆಯನ್ನು ನೀಡಿದ್ದರು. ಅವರು, “ಅಲ್ಲಾನು ನನ್ನ ಪ್ರಾರ್ಥನೆಯನ್ನು ಸ್ವೀಕರಿಸಲಿ ಹಾಗೂ ಭಾರತದಲ್ಲಿ ರೋಗಾಣು ಹರಡಲಿ, ಅದರಿಂದ 50 ಕೋಟಿ ಜನರು ಸಾಯಲಿ” ಎಂದು ಹೇಳಿದ್ದರು.(ಈ ಹೇಳಿಕೆಗಾಗಿ ಒಂದು ವೇಳೆ ಅಬ್ಬಾಸರವರ ಮೇಲೆ ಆಗಲೇ ಕಠಿಣ ಕ್ರಮ ಜರುಗಿಸಿದ್ದರೆ, ಈಗ ಅವರು ಈ ರೀತಿಯ ಹೇಳಿಕೆಯನ್ನು ನೀಡುವ ಧೈರ್ಯ ಮಾಡಿರುತ್ತಿರಲಿಲ್ಲ. ಈಗಲೂ ತೃಣಮೂಲ ಕಾಂಗ್ರೆಸನ ರಾಜ್ಯದಲ್ಲಿ ಪೊಲೀಸರು ಅವರ ಮೇಲೆ ಕ್ರಮ ಜರುಗಿಸುವ ಸಾಧ್ಯತೆ ಕಡಿಮೆಯೇ ಇದೆ. ಈ ಸ್ಥಿತಿಯು ಹಿಂದೂ ರಾಷ್ಟ್ರವನ್ನು ಅನಿವಾರ್ಯಗೊಳಿಸುತ್ತದೆ ! – ಸಂಪಾದಕರು)