ಬ್ರಿಟನ್‍ನಲ್ಲಿ ಭಯೋತ್ಪಾದಕರ ದಾಳಿ
ಲಂಡನ್ (ಬ್ರಿಟನ್) – ಬ್ರಿಟನ್‍ನ ಕನ್ಸರ್ವೇಟಿವ್ ಪಕ್ಷದ ಸಂಸದರಾದ ಡೇವಿಡ್ ಅಮೆಸ್ ಅವರನ್ನು ಅಕ್ಟೋಬರ್ 15 ರಂದು ಪೂರ್ವ ಲಂಡನ್‍ನ ಕಡಲತೀರದ ಪಟ್ಟಣವಾದ ಲೀಘ-ಆನ್-ಸೀ ಎಂಬ ನಗರದ ಬೆಲ್‍ಅರ್ಸ್ ಮೆಥೋಡಿಸ್ಟ್ ಚರ್ಚ್‍ನಲ್ಲಿ ಮತಾಂಧನು ಚಾಕುವಿನಿಂದ ಇರಿದು ಹತ್ಯೆ ಮಾಡಿದ್ದಾನೆ ಅವರು ಚರ್ಚ್‍ನಲ್ಲಿ ಮತದಾರರೊಂದಿಗೆ ಚರ್ಚಿಸುತ್ತಿದ್ದಾಗ ಈ ಘಟನೆಯು ಸಂಭವಿಸಿದೆ. ಪೊಲೀಸರು ಇದನ್ನು ಭಯೋತ್ಪಾದಕ ದಾಳಿ ಎಂದು ಘೋಷಿಸಿದ್ದಾರೆ. ಪೊಲೀಸರು ಹಲ್ಲೆ ಮಾಡಿದ ಮತಾಂಧನನ್ನು ಬಂಧಿಸಿದ್ದಾರೆ ಮತ್ತು ಆತನಿಂದ ಚಾಕುವನ್ನು ವಶಪಡಿಸಿಕೊಂಡಿದ್ದಾರೆ. ಈ ಪ್ರಕರಣದ ತನಿಖೆಯನ್ನು ಉಗ್ರ ನಿಗ್ರಹ ದಳಕ್ಕೆ ಒಪ್ಪಿಸಲಾಗಿದೆ. 69 ವರ್ಷದ ಅಮೆಸ್ ಇವರು 1997 ರಿಂದ ಸಂಸತ್ತಿನ ಸದಸ್ಯರಾಗಿದ್ದಾರೆ. ಬ್ರಿಟನ್‍ನಲ್ಲಿ 2016 ರಲ್ಲಿ ಕಾರ್ಮಿಕ ಪಕ್ಷದ ಸಂಸದ ಜೋ ಕಾಕ್ಸ್ ಅವರನ್ನೂ ಸಹ ಇರಿದು ಹತ್ಯೆಗೈಯ್ಯಲಾಗಿದೆ. ಜೊತೆಗೆ 2010 ಮತ್ತು 2000 ರಲ್ಲಿ ಸಂಸದರ ಮೇಲೆ ದಾಳಿ ನಡೆಸಲಾಗಿತ್ತು.
Scotland Yard probes Islamist terror link to British MP’s fatal stabbing https://t.co/BCfwysaFcU
— TOI World News (@TOIWorld) October 16, 2021