ದೆಹಲಿಯಲ್ಲಿ ಗಡಿಯಲ್ಲಿನ ರೈತರ ಆಂದೋಲನದ ಸ್ಥಳದಲ್ಲಿ ಓರ್ವ ಯುವಕನ ಬರ್ಬರ ಹತ್ಯೆ !

ಸಿಖ್ಕರ ಧರ್ಮಗ್ರಂಥ ‘ಶ್ರೀ ಗುರು ಗ್ರಂಥ ಸಾಹಿಬ್’ನ ವಿಡಂಬನೆ ಮಾಡಿದನೆಂಬ ಆರೋಪಿಸಿ ಹತ್ಯೆ

ಕುರಾನ್, ಶ್ರೀ ಗುರು ಗ್ರಂಥ ಸಾಹಿಬ್ ಇತ್ಯಾದಿಗಳ ವಿಡಂಬನೆಯಾದಾಗ ನೇರವಾಗಿ ಕಾನೂನನ್ನು ಕೈಗೆತ್ತಿಕೊಳ್ಳಲಾಗುತ್ತದೆ, ಆದರೆ ಹಿಂದೂಗಳ ಧರ್ಮಗ್ರಂಥಗಳು ಮತ್ತು ದೇವತೆಗಳಿಗೆ ಅವಮಾನ ಮಾಡಿದರೂ ಎಲ್ಲರೂ ಹೇಗೆ ಶಾಂತವಾಗಿರುತ್ತಾರೆ ! ಹಿಂದೂಗಳು ಕಾನೂನು ರೀತಿಯಲ್ಲಾದರೂ ವಿರೋಧಿಸಲು ಪ್ರಯತ್ನಿಸಿದರೆ, ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಿನಲ್ಲಿ ಈ ವಿರೋಧವನ್ನು ಹತ್ತಿಕ್ಕಲಾಗುತ್ತದೆ ! ಈಗ ಈ ಘಟನೆಯ ಬಗ್ಗೆ ಎಲ್ಲಾ ಜಾತ್ಯತೀತವಾದಿಗಳು ಮತ್ತು ಪ್ರಗತಿ(ಅಧೋಗತಿ)ಪರರು ಶಾಂತವಾಗಿದ್ದಾರೆ, ಎಂಬುದನ್ನು ಗಮನದಲ್ಲಿಟ್ಟುಕೊಳ್ಳಿ !

ನವ ದೆಹಲಿ : ಕಳೆದ ಕೆಲವು ತಿಂಗಳುಗಳಿಂದ ದೆಹಲಿಯ ಸಿಂಘೂ ಗಡಿಯಲ್ಲಿ ರೈತರು ಕೇಂದ್ರ ಸರಕಾರದ ಕೃಷಿ ಕಾನೂನುಗಳ ವಿರುದ್ಧ ಆಂದೋಲನ ನಡೆಸುತ್ತಿದ್ದಾರೆ. ಇಲ್ಲಿ, ಸಿಖ್ಕರ ಪವಿತ್ರ ಗ್ರಂಥ ‘ಶ್ರೀ ಗುರು ಗ್ರಂಥ ಸಾಹಿಬ್’ನ ವಿಡಂಬನೆ ಮಾಡಿದ ಆರೋಪದ ಮೇಲೆ ಓರ್ವ ಸಿಕ್ಖ್‌ನು ಒಬ್ಬ ವ್ಯಕ್ತಿಯ ಕೈ ಮತ್ತು ಕಾಲನ್ನು ಕತ್ತರಿಸಿ ಆತನ ಹತ್ಯೆ ಮಾಡಿದನು. ರೈತರ ಆಂದೋಲನದ ಮುಖ್ಯ ಸ್ಥಳದ ಬ್ಯಾರಿಕೇಡ್ ಮೇಲೆ ಯುವಕನ ಶವ ನೇತಾಡುತ್ತಿರುವ ಸ್ಥಿತಿಯಲ್ಲಿ ಪತ್ತೆಯಾಗಿದೆ. ಮೃತ ಯುವಕನು ಅಮೃತಸರದ ತರಣ ತಾರಣ ಮೂಲದವನು ಎಂದು ಹೇಳಲಾಗಿದೆ. ಸಿಕ್ಖ್ ಯೋಧರ ಸಮೂಹವೆಂದೂ ಕರೆಯಲ್ಪಡುವ ‘ನಿಹಂಗಾ’ ಸಮೂಹದ ಮೇಲೆ ಈ ಯುವಕನನ್ನು ಹತ್ಯೆಗೈದ ಆರೋಪವಿದೆ. ಈ ಹತ್ಯೆಯ ಕೆಲವು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.
ಈ ಘಟನೆಯ ಬಗ್ಗೆ ಮಾಹಿತಿ ಸಿಕ್ಕಿದ ನಂತರ ಪೊಲೀಸರು ಘಟನಾಸ್ಥಳಕ್ಕೆ ತಲುಪಿದರು. ಅವರಿಗೆ ವಿರೋಧವನ್ನೂ ಎದುರಿಸಬೇಕಾಯಿತು; ಆದರೆ ಈ ಪರಿಸ್ಥಿತಿಯಲ್ಲಿಯೂ ಪ್ರಸಂಗಾವಧಾನದಿಂದ ಪೊಲೀಸರು ಮೃತದೇಹವನ್ನು ವಶಕ್ಕೆ ತೆಗೆದುಕೊಂಡರು, ಹಾಗೆಯೇ ಅಪರಿಚಿತ ಕೊಲೆಗಾರರ ವಿರುದ್ಧ ಅಪರಾಧವನ್ನು ದಾಖಲಿಸಿದ್ದಾರೆ.