‘ಭಾರತ ಮತ್ತು ಚೀನಾದ ನಡುವೆ ಯುದ್ಧ ನಡೆದರೆ, ಭಾರತದ ಸೋಲು ನಿಶ್ಚಿತ !’ (ಅಂತೆ) – ಚೀನಾದ ಸರಕಾರದ ದೈನಿಕದ ಉದ್ಧಟತನ

ರಾವಣನಲ್ಲಿಯೂ ಇದೇ ರೀತಿಯ ಅಹಂಕಾರ ಇತ್ತು ಮತ್ತು ನಂತರ ಅವನ ನಾಶವಾಯಿತು. ಚೀನಾದ ಈ ಅಹಂಕಾರವನ್ನು ಭಾರತವು ಶೀಘ್ರದಲ್ಲಿಯೇ ಆಕ್ರಮಣಕಾರಿ ಭೂಮಿಕೆಯನ್ನು ತೆಗೆದುಕೊಂಡು ನಾಶ ಮಾಡುವುದು ಅವಶ್ಯಕವಾಗಿದೆ. ಚೀನಾ ಒಂದು ಗಾಳಿ ತುಂಬಿದ ಬಲೂನು ಆಗಿದೆ ಅದಕ್ಕೆ ಸೂಜಿ ಚುಚ್ಚುವ ಕೆಲಸವನ್ನು ಭಾರತವೇ ಮಾಡಬೇಕಿದೆ !- ಸಂಪಾದಕರು 

ಬೀಜಿಂಗ್ (ಚೀನಾ) – ಯಾವ ಪದ್ದತಿಯಲ್ಲಿ ಅವರು ಗಡಿಯನ್ನು ಅತಿಕ್ರಮಣ ಮಾಡಲು ಇಚ್ಛಿಸುತ್ತಿದ್ದಾರೆಯೋ, ಅದು ಪ್ರತ್ಯಕ್ಷದಲ್ಲಿ ಸಾಧ್ಯವಿಲ್ಲ. (ಕಳ್ಳನಿಗೊಂದು ಪಿಳ್ಳೆ ನೆವ ! – ಸಂಪಾದಕರು) ಒಂದು ವೇಳೆ ಯುದ್ಧದ ಪರಿಸ್ಥಿತಿ ನಿರ್ಮಾಣವಾದರೆ, ಭಾರತವು ಸೋಲಲು ಸಿದ್ಧ ಇರಬೇಕು. ಮತ್ತು ಈ ವಿಷಯವನ್ನು ಭಾರತವು ಸ್ಪಷ್ಟವಾಗಿ ತಿಳಿದುಕೊಳ್ಳಬೇಕು ಎಂದು ಅಹಂಕಾರದಿಂದ ಚೀನಾದ ಸರಕಾರಿ ದೈನಿಕ ‘ಗ್ಲೋಬಲ್ ಟೈಮ್ಸ್’ನ ಸಂಪಾದಕೀಯ ಲೇಖನದಲ್ಲಿ ಬರೆಯಲಾಗಿದೆ.

‘ಭಾರತ ಮತ್ತು ಚೀನಾ ಇವುಗಳಲ್ಲಿನ ಗಡಿವಿವಾದ ಇನ್ನು ಹಾಗೆ ಇದೆ. ಅದಕ್ಕೆ ಭಾರತದಿಂದ ಚರ್ಚೆಯಲ್ಲಿ ತೆಗೆದುಕೊಳ್ಳುವ ತಪ್ಪಾದ ನಿಲುವೇ ಕಾರಣವಾಗಿದೆ. (‘ಒಂದು ಕಡೆ ಚರ್ಚೆ ಮಾಡುವುದು ಮತ್ತು ಇನ್ನೊಂದೆಡೆಗೆ ಸೈನ್ಯದ ಮೂಲಕ ನುಸುಳುವಿಕೆ ಮಾಡುವುದು, ಇದು ಚೀನಾದ ನಿತ್ಯದ ನಿಲುವು ಆಗಿದೆ. ಅದರಲ್ಲಿ ಅದು ಯಾವುದೇ ಬದಲಾವಣೆ ಮಾಡದೇ ಇದ್ದರೆ, ಅದರ ಪರಿಣಾಮ ಅನುಭವಿಸಲು ಸಿದ್ಧರಾಗಿ’, ಎಂದು ಎಚ್ಚರಿಕೆಯನ್ನು ವಾಸ್ತವದಲ್ಲಿ ಭಾರತವು ಚೀನಾಗೆ ನೀಡಬೇಕು ! – ಸಂಪಾದಕರು) ಭಾರತದ ಬೇಡಿಕೆ ವಾಸ್ತವದಲ್ಲಿ ಅವ್ಯವಹಾರ ಆಗಿದೆ’, ಎಂದೂ ಆ ಲೇಖನದಲ್ಲಿ ಹೇಳಲಾಗಿದೆ.