ಭಾರತದ ಬೇಡಿಕೆ ಅವಾಸ್ತವವಾಗಿದೆ ಎಂದು ಚೀನಾದ ಭೂಮಿಕೆ.
ಭಾರತದ ಭೂಮಿಯಲ್ಲಿ ನುಸುಳುವುದು ಮತ್ತು ಭಾರತಕ್ಕೆ ಬೋಧನೆ ಮಾಡುವುದು, ಇದು ಚೀನಿಯರ ಉದ್ಧಟತನವಗಿದ್ದು ಇದಕ್ಕೆ ಭಾರತವು ಸೇರಿಗೆ ಸವ್ವಾಸೇರು ಎಂಬಂತೆ ಉತ್ತರ ನೀಡುವುದು ಅವಶ್ಯಕವಾಗಿದೆ. – ಸಂಪಾದಕರು
ನವದೆಹಲಿ – ಭಾರತ ಮತ್ತು ಚೀನಾ ಇವರ ಸೈನ್ಯದ ಮಧ್ಯೆ ಲಡಾಕನಿಂದ ತಮ್ಮ ತಮ್ಮ ಸೈನ್ಯ ಹಿಂಪಡೆಯುವ ವಿಷಯವಾಗಿ ಅಕ್ಟೋಬರ್ ೧೦ ರಂದು ನಡೆದಿರುವ ಸಭೆಯಲ್ಲಿ ಚೀನಾ ತನ್ನ ಸೈನ್ಯ ಹಿಂಪಡೆಯಲು ನಿರಾಕರಿಸಿದೆ. ಚೀನಾ ಸರಕಾರದ ಮುಖ ಪತ್ರಿಕೆ ಗ್ಲೋಬಲ್ ಟೈಂಸ್ ನಲ್ಲಿ ಈ ವಿಷಯವಾಗಿ ಚೀನಾವು ಸೈನ್ಯದ ವಿಷಯದಲ್ಲಿ ಭಾರತವು ಅವಾಸ್ತವ ಬೇಡಿಕೆ ಇಡುತ್ತಿದೆ ಎಂದಿದೆ.
PLA rejects Indian proposals to cool LAC tensions, no breakthrough in talks https://t.co/24tNDvi9oN
— Hindustan Times (@HindustanTimes) October 11, 2021
ಭಾರತೀಯ ಸೈನ್ಯದ ನಿವೇದನೆಯಲ್ಲಿ ಹೇಳಲಾಗಿದೆ ಏನೆಂದರೆ ಸಭೆಯಲ್ಲಿ ಭಾರತದ ಉಳಿದಿರುವ ಕ್ಷೇತ್ರದ ಸಮಸ್ಯೆ ಬಗೆಹರಿಯುವ ಅವಶ್ಯಕ ಸೂಚನೆ ನೀಡಲಾಗಿದೆ; ಆದರೆ ಚೀನಾ ಇದಕ್ಕೆ ಸಹಮತ ತೋರುತ್ತಿಲ್ಲ. ಹಾಗೂ ಚೀನಾಕ್ಕೆ ಯಾವುದೇ ದೂರಗಾಮಿ ಪ್ರಸ್ತಾವ ನೀಡಲು ಸಹ ಸಾಧ್ಯವಾಗಿಲ್ಲ ಆದಕಾರಣ ಸಭೆಯಲ್ಲಿ ಉಳಿದಿರುವ ಭಾಗದ ಮೇಲೆ ಯೋಗ್ಯ ಚರ್ಚೆ ನಡೆಸಲು ಸಾಧ್ಯವಾಗಿಲ್ಲ. ಎರಡು ಕಡೆಯಿಂದ ಸಂವಾದ ಮತ್ತು ಭೂಮಿಯ ಮೇಲೆ ಸ್ಥಿರತೆ ಕಾಪಾಡುವ ಬಗ್ಗೆ ಸಹಮತ ವ್ಯಕ್ತವಾಗಿದೆ.
ನಿವೇದನೆಯಲ್ಲಿ ಮುಂದೆ ಹೇಳಲಾಗಿದೆ ಏನೆಂದರೆ, ಚೀನಾವು ದ್ವಿಪಕ್ಷೀಯ ಸಂಬಂಧದ ಒಟ್ಟಾರೆ ದೃಷ್ಟಿಕೋನ ದ ಬಗ್ಗೆ ವಿಚಾರವನ್ನು ಮಾಡುವುದು ಮತ್ತು ದ್ವಿಪಕ್ಷೀಯ ಕರಾರು ಮತ್ತು ಶಿಷ್ಟಾಚಾರದ ಪೂರ್ಣ ಪಾಲನೆ ಮಾಡಿ ಉಳಿದಿರುವ ಸಮಸ್ಯೆಯ ಬಗ್ಗೆ ಶೀಘ್ರವಾಗಿ ಪರಿಹರಿಸುವ ದಿಕ್ಕಿನಲ್ಲಿ ಕಾರ್ಯ ಮಾಡುವುದು ಎಂಬುದು ನಮ್ಮ ಅಪೇಕ್ಷೆ ಇದೆ. (ಚೀನಾದಿಂದ ಇಂತಹ ಅಪೇಕ್ಷೆ ಪಡುವುದು ಹಾಸ್ಯಾಸ್ಪದವಾಗಿದೆ !- ಸಂಪಾದಕೀಯ)