ಜಮ್ಮು-ಕಾಶ್ಮೀರ ಮತ್ತು ಕರ್ನಾಟಕದಲ್ಲಿನ ಇಸ್ಲಾಮಿಕ್ ಸ್ಟೇಟ್‍ನ 18 ಸ್ಥಳಗಳ ಮೇಲೆ ಎನ್.ಐ.ಎ.ಯಿಂದ ದಾಳಿ

ನವದೆಹಲಿ – ರಾಷ್ಟ್ರೀಯ ತನಿಖಾ ದಳ (‘ಎನ್.ಐ.ಎ.’ಯು) ಜಮ್ಮು-ಕಾಶ್ಮೀರದಲ್ಲಿಯ 16 ಸ್ಥಳಗಳಲ್ಲಿ ಹಾಗೂ ಕರ್ನಾಟಕದ ಭಟ್ಕಳದ 2 ಸ್ಥಳಗಳಲ್ಲಿ ದಾಳಿ ಮಾಡಲಾಯಿತು. ಇದರಲ್ಲಿ ಇಸ್ಲಾಮಿಕ್ ಸ್ಟೇಟ್‍ನ ‘ವಾಯಿಸ್ ಆಫ್ ಹಿಂದ್’ ಈ ಆನ್‍ಲೈನ್ ನಿಯತಕಾಲಿಕೆಯ ಜುಫರಿ ಜವಾಹರ ದಾಮುಡಿಯನ್ನು ಬಂಧಿಸಲಾಗಿದೆ. ಕೇಂದ್ರೀಯ ಮೀಸಲು ಪೊಲೀಸ್ ಪಡೆ ಮತ್ತು ಜಮ್ಮು-ಕಾಶ್ಮೀರ ಪೊಲೀಸರ ಸಹಾಯದಿಂದ ಈ ದಾಳಿಯನ್ನು ಮಾಡಲಾಯಿತು.

ಎನ್.ಐ.ಎ.ಯು, ಭಾರತದಲ್ಲಿ ವಿವಿಧ ಭಾಗಗಳಲ್ಲಿ ಕಾರ್ಯನಿರತವಾಗಿರುವ ಇಸ್ಲಾಮಿಕ್ ಸ್ಟೇಟ್‍ನ ಭಯೋತ್ಪಾದಕರು ‘ವಾಯಿಸ್ ಆಫ್ ಹಿಂದ್’ ಈ ನಿಯತಕಾಲಿಕೆಯ ಮೂಲಕ ಆನ್‍ಲೈನ್ ನೆಟ್‍ವರ್ಕ್ ತಯಾರಿಸಿದ್ದಾರೆ. ಇದರಲ್ಲಿ ಇಸ್ಲಾಮಿಕ್ ಸ್ಟೇಟ್‍ನೊಂದಿಗೆ ಸಂಬಂಧಿಸಿದ ಪ್ರಸಾರ ಸಾಮಗ್ರಿಗಳ ಪ್ರಸಾರ ಮಾಡಿ ಸದಸ್ಯರನ್ನು ಭರ್ತಿ ಮಾಡಲಾಗುತ್ತಿದೆ. ಅಬೂ ಹಾಜಿರ ಅಲ್-ಬದ್ರಿ ಈತ ಇಸ್ಲಾಮಿಕ್ ಸ್ಟೇಟ್‍ನ ಸೈಬರ ಯುನಿಟನ ಓರ್ವ ಮುಖ್ಯ ಆಪರೇಟರ್ ಆಗಿದ್ದಾನೆ. ಆತ ‘ವಾಯಿಸ್ ಆಫ್ ಹಿಂದ್’ನ ದಕ್ಷಿಣ ಭಾರತೀಯ ಭಾಷೆಗಳಲ್ಲಿ ಅನುವಾದ ಮಾಡುವುದು ಮತ್ತು ಅದರ ಪ್ರಸಾರದಲ್ಲಿ ಸಹಭಾಗಿಯಾಗಿದ್ದಾನೆ ಎಂದು ಹೇಳಿದೆ.