ಫ್ರಾನ್ಸ ನಂತೆ ಚರ್ಚ್ ಗಳ ಮೇಲೆ ಕ್ರಮಕೈಗೊಳ್ಳಲು ಭಾರತದಲ್ಲಿಯೂ ವಿಚಾರಣಾ ಆಯೋಗವನ್ನು ನೇಮಿಸಬೇಕು! – ಡಾ. ಸುರೇಂದ್ರ ಜೈನ, ಸಂಯುಕ್ತ ಮಹಾಮಂತ್ರಿ, ವಿಶ್ವ ಹಿಂದೂ ಪರಿಷತ್ತು

ಅಂತಹ ಬೇಡಿಕೆಗಳನ್ನು ಯಾಕೆ ಮಾಡಬೇಕಾಗುತ್ತದೆ ? ಸರಕಾರಿ ವ್ಯವಸ್ಥೆಗೆ ಇದು ಅರಿವಾಗುವುದಿಲ್ಲ ವೇ?

ಸಾಂದರ್ಭಿಕ ಛಾಯಾಚಿತ್ರ

ನವದೆಹಲಿ – ಫ್ರಾನ್ಸ ನಲ್ಲಿ ಚರ್ಚ್ ಮತ್ತು ವಾಸನಾಂಧ ಪಾದ್ರಿಗಳ ಕರ್ಮಕಾಂಡಗಳ ವಿಚಾರಣೆಯು ನಡೆಯುತ್ತಿದೆ. ಭಾರತದಲ್ಲಿಯೂ ಪಾದ್ರಿ ಮತ್ತು ಮತಾಂತರದ ಚಟುವಟಿಕೆಗಳಲ್ಲಿ ಸಹಭಾಗಿಯಾಗಿರುವ ಕ್ರೈಸ್ತ ಪ್ರಚಾರಕರ ದುಷ್ಕೃತ್ಯಗಳನ್ನು ಬಹಿರಂಗಪಡಿಸುವುದು ಮತ್ತು ಅವರ ಅಂತಹ ಹೇಯ ಕೃತ್ಯಗಳ ಷಡ್ಯಂತ್ರದಿಂದ ದೇಶವನ್ನು ಮುಕ್ತಗೊಳಿಸಲು ರಾಷ್ಟ್ರೀಯ ಸ್ತರದಲ್ಲಿ ವಿಚಾರಣೆ ಆಯೋಗವನ್ನು ನೇಮಿಸಬೇಕು. ಹಾಗೂ ಕೇಂದ್ರ ಸರಕಾರವು ತಕ್ಷಣದಿಂದಲೇ ಮತಾಂತರ ವಿರೋಧಿ ಕಾನೂನನ್ನು ತರಬೇಕು. ಇಲ್ಲವಾದರೆ ವಿಶ್ವ ಹಿಂದೂ ಪರಿಷತ್ತು ಒಂದು ವ್ಯಾಪಕ ಆಂದೋಲನವನ್ನು ಮಾಡಲಿದೆ ಮತ್ತು ಕ್ರೈಸ್ತ ಪಾದ್ರಿಗಳ ಅನೇಕ ಷಡ್ಯಂತ್ರಗಳನ್ನು ಸಮಾಜದ ಮುಂದೆ ತೆರೆದಿಡುವುದು ಮತ್ತು, ಮತಾಂತರವನ್ನು ತಡೆಗಟ್ಟಲಿದೆ ಎಂಬ ಎಚ್ಚರಿಕೆಯನ್ನು ವಿಶ್ವ ಹಿಂದೂ ಪರಿಷತ್ತಿನ ಸಂಯುಕ್ತ ಮಹಾಮಂತ್ರಿ ಡಾಕ್ಟರ್ ಸುರೇಂದ್ರ ಜೈನ ಇವರು ಒಂದು ಪತ್ರಿಕಾ ಪ್ರಕಟಣೆಯ ಮೂಲಕ ನೀಡಿದ್ದಾರೆ.

ಡಾಕ್ಟರ್ ಜೈನರು ಮುಂದೆ ಹೀಗೇ ಹೇಳಿದರು ; ಚರ್ಚಗಳ ಹೇಯ ಕೃತ್ಯಗಳನ್ನು ಮುಚ್ಚಿಡಲು ಯಾರಿಂದಲೂ ಸಾಧ್ಯವಿಲ್ಲ. ಕೇವಲ ಫ್ರಾನ್ಸ್ ಒಂದರಲ್ಲಿಯೇ ಕಳೆದ ೭೦ ವರ್ಷದಿಂದ ಪಾದ್ರಿಗಳಿಂದ ನಡೆದಿರುವ ಲೈಂಗಿಕ ಶೋಷಣೆಯಲ್ಲಿ ೩ ಲಕ್ಷ ೩೦ ಸಾವಿರ ಚಿಕ್ಕ ಮಕ್ಕಳು ಬಲಿಯಾಗಿದ್ದಾರೆ. ಈ ಮೊದಲು ಫ್ರಾನ್ಸ್ ನಲ್ಲಿ ಇಂತಹ ಆರೋಪಗಳನ್ನು ಚರ್ಚ್ ಸ್ವೀಕಾರ ಮಾಡುತ್ತಿರಲಿಲ್ಲ, ಆದರೆ ಈ ಸಂದರ್ಭದಲ್ಲಿ ಒಂದು ಆಯೋಗವು ಎರಡುವರೆ ವರ್ಷಗಳಿಂದ ಆಳವಾದ ಅಧ್ಯಯನ ನಡೆಸಿ ಒಂದು ವರದಿಯನ್ನು ತಯಾರಿಸಿದೆ. ಅದರ ನಂತರ ಪಾದ್ರಿಗಳ ಕುಕೃತ್ಯಗಳ ವಿಷಯವಾಗಿ ಬಿಷಪರು ಕ್ಷಮೆಯಾಚಿಸಬೇಕಾಯಿತು. ಇಂದು ಪ್ರಪಂಚದಲ್ಲಿನ ಚರ್ಚುಗಳು ಲೈಂಗಿಕ ಶೋಷಣೆ ಮತ್ತು ವ್ಯಭಿಚಾರದ ಆರೋಪದಲ್ಲಿ ಸಿಲುಕಿವೆ. ಭಾರತದಲ್ಲಿ ಚರ್ಚುಗಳಿಂದ ನಡೆಸಲಾಗುವ ಅನೇಕ ಅನಾಥಾಲಯಗಳಲ್ಲಿನ ನೂರಾರು ಅನಾಥ ಮಕ್ಕಳನ್ನು ವಿದೇಶದಲ್ಲಿ ಮಾರಾಟ ಮಾಡಲಾಗುವಂತಹ ಘಟನೆಗಳು ಬೆಳಕಿಗೆ ಬಂದಿವೆ. ನಕ್ಸಲ್ ವಾದಿ ಮತ್ತು ಪೂರ್ವೋತ್ತರ ಭಾರತದಲ್ಲಿ ಭಯೋತ್ಪಾದಕ ಸಂಘಟನೆಗಳ ಜೊತೆ ಅವರ ಸಂಬಂಧವಿದೆ ಎಂದು ಸಹ ಆರೋಪ ಮಾಡಲಾಗಿದೆ.