|
ಕುಶ್ತಿಯಾ (ಬಾಂಗ್ಲಾದೇಶ) – ಕುಶ್ತಿಯಾ ನಗರದಲ್ಲಿ ಶ್ರೀ ದುರ್ಗಾದೇವಿಯ ಪೂಜೆಗೋಸ್ಕರ ತಯಾರಿಸಲಾದ ಮೂರ್ತಿಗಳನ್ನು ಹೊಡೆದು ಹಾಕಿದ ಸುದ್ದಿಯು ಬಾಂಗ್ಲಾದೇಶದ ‘ಢಾಕಾ ಟ್ರಿಬ್ಯೂನ್’ ಎಂಬ ದೈನಿಕವು ಮುದ್ರಿಸಿದೆ. ಜಿಲ್ಲೆಯಲ್ಲಿ ಪೂಜಾ ಉತ್ಸವ ಸಮಿತಿಯ ಅಧ್ಯಕ್ಷರಾದ ನ್ಯಾಯವಾದಿ ಅನುಪ ಕುಮಾರ ನಂದಿಯವರು ಘಟನೆಯ ಬಗ್ಗೆ ಹೀಗೇಂದರು, ನಮಗೆ ಅಕ್ಟೋಬರ್ ೬ರಂದು ಬೆಳಿಗ್ಗೆ ಆ ಮೂರ್ತಿಗಳು ಹೊಡೆದು ಹೋಗಿರುವ ಸ್ಥಿತಿಯಲ್ಲಿ ಕಂಡು ಬಂದವು ಮತ್ತು ತಕ್ಷಣ ನಾವು ಪೋಲಿಸರಿಗೆ ತಿಳಿಸಿದೆವು. ಪೊಲೀಸರು ಘಟನಾಸ್ಥಳಕ್ಕೆ ಭೇಟಿ ನೀಡಿದರು. ‘ನಾವು ಈ ಪ್ರಕರಣದಲ್ಲಿ ವಿಚಾರಣೆ ಮಾಡುತ್ತಿದ್ದೇವೆ’, ಎಂಬ ಮಾಹಿತಿಯನ್ನು ಕುಶ್ತಿಯಾ ಮಾಡೆಲ್ ಪೊಲೀಸು ಠಾಣೆಯ ಉಸ್ತುವಾರಿ ಅಧಿಕಾರಿಗಳಾದ ಸಬ್ಬೀರುಲ ಇಸ್ಲಾಮ ಇವರು ನೀಡಿದರು.
Murtis vandalized ahead of Durga Puja in Kushtia, Bangladesh https://t.co/q2fe5gOXr1
— HinduPost (@hindupost) October 8, 2021
೧. ಆಯಕಾ ಜುಬಸಂಘಚ್ಯಾ ಅರೂಪಾ ಪರಿಸರದಲ್ಲಿನ ತಾತ್ಕಾಲಿಕ ಮಂಟಪದಲ್ಲಿ ಈ ಘಟನೆ ನಡೆದಿದೆ. ಸಪ್ಟೆಂಬರ್ ೨೦ರಂದು ರಾತ್ರಿ ಮೂರ್ತಿಕಾರರು ಮೂರ್ತಿಗಳಿಗೆ ಮಣ್ಣಿನ ಲೇಪವನ್ನು ಹಚ್ಚಿದ ಬಳಿಕ ಒಣಗಿಸಲೆಂದು ಅವುಗಳನ್ನು ಹೊರಗೆ ಇಟ್ಟಿದ್ದರು.
೨. ಬಾಂಗ್ಲಾ ದೇಶದಲ್ಲಿ ದೇವಾಲಯಗಳು ಹಾಗೂ ದೇವರ ಮೂರ್ತಿಗಳ ವಿಧ್ವಂಸಕ ಕೃತ್ಯಗಳು ಈಗ ನಿಯಮಿತವಾಗಿದೆ. ನವರಾತ್ರೋತ್ಸವದಲ್ಲಿ ಕೂಡ ಶ್ರೀ ದುರ್ಗಾದೇವಿಯ ಮೂರ್ತಿಯ ಧ್ವಂಸವಾಗುವ ಘಟನೆಗಳು ನಡೆಯುತ್ತಿರುತ್ತದೆ.
ಮೇಲಿನ ಚಿತ್ರವನ್ನು ಪ್ರಕಟಿಸುವ ಉದ್ದೇಶ ಯಾರ ಧಾರ್ಮಿಕ ಭಾವನೆಗಳಿಗೆ ನೋವನ್ನು ತರುವ ಉದ್ದೇಶವಾಗಿರದೇ ನಿಜವಾದ ಸ್ಥಿತಿ ತೋರಿಸುವ ಉದ್ದೇಶವಾಗಿದೆ |