ಭಾರತದ ಪ್ರಧಾನಮಂತ್ರಿಗಳು ಮನಸ್ಸು ಮಾಡಿದರೆ ಪಾಕಿಸ್ತಾನ ಕ್ರಿಕೆಟ್‌ ಮಂಡಳಿ (ಪಿಸಿಬಿ)ಯನ್ನೇ ಮುಚ್ಚಿಸಬಹುದು ! – ಪಿಸಿಬಿ ಅಧ್ಯಕ್ಷ ರಮೀಝ ರಾಜಾ

ಅದು ಹೌದು ಎಂದಾದಲ್ಲಿ ಭಾರತದ ಪ್ರಧಾನಮಂತ್ರಿಗಳು ಆ ಕೆಲಸ ಮಾಡಲಿ ಎಂದು ಭಾರತೀಯರಿಗೆ ಅನಿಸುತ್ತದೆ !- ಸಂಪಾದಕರು

ಇಸ್ಲಾಮಾಬಾದ್‌ (ಪಾಕಿಸ್ತಾನ) – ಪಾಕಿಸ್ತಾನ ಕ್ರಿಕೆಟ್‌ ಮಂಡಳಿಯ (‘ಪಿಸಿಬಿ’ಯ) ೫೦ % ದಷ್ಟು ಕಾರ್ಯಕಲಾಪಗಳು ಅಂತರರಾಷ್ಟ್ರೀಯ ಕ್ರಿಕೆಟ್‌ ಮಂಡಳಿಯ (‘ಐಸಿಸಿಯ) ನಿಧಿಯಿಂದ ನಡೆಯುತ್ತದೆ. ‘ಐಸಿಸಿ’ಯ ನಿಧಿ ಅಂದರೆ ಅದು ಆಯೋಜಿಸುವ ಸ್ಪರ್ಧೆ ಹಾಗೂ ಆ ಸ್ಪರ್ಧೆಗಳಿಂದ ಸಿಗುವ ಹಣವನ್ನು ಅದರ ಸದಸ್ಯ ದೇಶಗಳ ಕ್ರಿಕೆಟ್ ಮಂಡಲಿಗಳಿಗೆ ಹಂಚಲಾಗುತ್ತದೆ. ಐಸಿಸಿಗೆ ಸಿಗುವ ೯೦ % ದಷ್ಟು ನಿಧಿಯು ಕೇವಲ ಭಾರತೀಯ ಕ್ರಿಕೆಟ್‌ ನಿಯಾಮಕ ಮಂಡಳಿಯಿಂದ (‘ಬಿಸಿಸಿಐ‌’ನಿಂದ) ಬರುತ್ತದೆ. ಒಂದು ರೀತಿಯಲ್ಲಿ ಭಾರತದ ಹಣದಿಂದ ಪಾಕಿಸ್ತಾನವು ಕ್ರಿಕೆಟ್‌ ಪಂದ್ಯಗಳನ್ನು ನಡೆಸುತ್ತಿದೆ. ನಾಳೆ ಏನಾದರೂ ಒಂದು ವೇಳೆ ಭಾರತದ ಪ್ರಧಾನಮಂತ್ರಿಗಳಿಗೆ ‘ನಾವು ಪಾಕಿಸ್ತಾನಕ್ಕೆ ನಿಧಿ ನೀಡಬಾರದು’ ಎಂದು ಅನಿಸಿದರೆ’, ಆಗ ಪಿಸಿಬಿ ಕುಸಿಯಬಹುದು, ಎಂದು ಪಿಸಿಬಿಯ ಅಧ್ಯಕ್ಷ ರಮೀಝ ರಾಜಾರವರು ಹೇಳಿಕೆ ನೀಡಿದ್ದಾರೆ. ರಮೀಝ ರಾಜಾರವರು ಸ್ಥಾಯಿ ಸಿನೆಟ್‌ ಸಮಿತಿ ಸಭೆಯಲ್ಲಿ ಈ ಹೇಳಿಕೆಯನ್ನು ನೀಡಿದ್ದರು.