ಮತಾಂಧರು ತೆಗೆದ ಕೇಸರೀ ಧ್ವಜವನ್ನು ಹಿಂದೂಗಳು ಒಟ್ಟಾಗಿ ಸೇರಿ ಮತ್ತೆ ಅದೇ ಸ್ಥಳದಲ್ಲಿ ಹಾರಿಸಿದರು !

ಛತ್ತೀಸಗಡದ ಕವರ್ಧಾದಲ್ಲಿ ಮತಾಂಧರು ಕೇಸರೀ ಧ್ವಜ ತೆಗೆದ ಪ್ರಕರಣ

ಮತಾಂಧರು ತೆಗೆದು ಹಾಕಿದ್ದ ಕೇಸರೀ ಧ್ವಜವನ್ನು ಹಿಂದೂಗಳ ಸಂಘಟಿತರಾಗಿ ಮತ್ತೆ ಅದೇ ಸ್ಥಳದಲ್ಲಿ ಹಾರಿಸಿದ ಹಿಂದೂಗಳಿಗೆ ಅಭಿನಂದನೆಗಳು ! -ಸಂಪಾದಕರು 

(ಕವರ್ಧಾ) ಛತ್ತೀಸಗಡ – ಮತಾಂಧರ ಗುಂಪೊಂದು ನಗರದ ಮುಖ್ಯ ಚೌಕದಲ್ಲಿದ್ದ ಕೇಸರಿ ಧ್ವಜವನ್ನು ತೆಗೆದು ಅದನ್ನು ಅವಮಾನಿಸಿದರು. ಈ ಘಟನೆಯ ವಾರ್ತೆ ತಿಳಿಯುತ್ತಿದ್ದಂತೆ ನಗರದ ನೂರಾರು ಹಿಂದೂಗಳು ಒಟ್ಟಾಗಿ ಬಂದು ಅದೇ ಸ್ಥಳದಲ್ಲಿ ಕೇಸರಿ ಧ್ವಜವನ್ನು ಮತ್ತೆ ಹಾರಿಸಿದರು. ಈ ಸಮಯದಲ್ಲಿ ಹಿಂದೂಗಳು ಕೇಸರಿ ಧ್ವಜವನ್ನು ಕೈಯಲ್ಲಿ ಹಿಡಿದುಕೊಂಡು ‘ಜೈ ಶ್ರೀರಾಮ’, ‘ಭಾರತ ಮಾತಾ ಕೀ ಜೈ’ ಎಂಬ ಘೋಷಣೆಗಳನ್ನು ನೀಡಿದರು.

1. ಮತಾಂಧರು ಕೇಸರಿ ಧ್ವಜವನ್ನು ತೆಗೆದ ನಂತರ ಪಟ್ಟಣದಲ್ಲಿ ಹಿಂಸಾಚಾರ ಆಗಿತ್ತು. ‘ಹಿಂಸಾಚಾರ ನಡೆಸಿದ ಮತಾಂಧರ ಮೇಲೆ ಪೊಲೀಸರು ಯಾವುದೇ ಕ್ರಮವನ್ನು ಕೈಗೊಂಡಿಲ್ಲ, ತದ್ವಿರುದ್ಧವಾಗಿ ಹಿಂದೂಗಳ ಮೇಲೆ ದಬ್ಬಾಳಿಕೆ ಮಾಡಿದರು’, ಎಂದು ಹಿಂದುತ್ವನಿಷ್ಠ ಸಂಘಟನೆಗಳು ಮಾಹಿತಿ ನೀಡಿವೆ.

2. ಧ್ವಜವನ್ನು ತೆಗೆದು ಹಾಕಿದ್ದ ಘಟನೆಯ ನಂತರ ಕವರ್ಧಾದಲ್ಲಿಯ ಹಿಂದೂಗಳು ವಿಂಧ್ಯವಾಸಿನಿ ದೇವಿಯ ದೇವಾಲಯದಲ್ಲಿ ಪೂಜಾರ್ಚನೆ ಮಾಡಿ ರಾಜ್ಯದಲ್ಲಿನ ಕಾಂಗ್ರೆಸ್ ಸರಕಾರವನ್ನು ನಿಷೇಧಿಸಿದರು. ಅದೇ ರೀತಿ ಗಸ್ತು ಹಾಕುತ್ತಿದ್ದ ಪೊಲೀಸರ ಮುಂದೆ ಕೈಯಲ್ಲಿ ಕೇಸರಿ ಧ್ವಜವನ್ನು ಹಿಡಿದು ನಿಷೇಧವನ್ನು ವ್ಯಕ್ತಪಡಿಸಿದರು.

3. ರಾಜ್ಯದಲ್ಲಿ ಹಿಂಸಾಚಾರ ಆಗುತ್ತಿರುವಾಗ ಮುಖ್ಯಮಂತ್ರಿ ಭುಪೇಶ ಬಘೆಲ್ ಉತ್ತರಪ್ರದೇಶದ ಲಖೀಮಪುರದಲ್ಲಿ ರೈತರ ಕುಟುಂಬದವರನ್ನು ಭೇಟಿಯಾಗಲು ಹೋಗಿದ್ದರು. ‘ಇದು ರಾಜಕೀಯ ‘ಸ್ಟಂಟ್’, ಆಗಿದೆ’ ಎಂದು ಸ್ಥಳೀಯ ಹಿಂದೂಗಳು ತಮ್ಮ ಅಭಿಪ್ರಾಯವನ್ನು ನೊಂದಾಯಿಸಿ ನಿಷೇಧವನ್ನು ವ್ಯಕ್ತಪಡಿಸಿದ್ದಾರೆ.