ಮತಾಂತರ ಹಾಗೂ ನಿಕಾಹಕ್ಕಾಗಿ 10 ನೆಯ ತರಗತಿಯ ವಿದ್ಯಾರ್ಥಿಯನ್ನು ‘ಬ್ಲಾಕ್‍ಮೇಲ್’ ಮಾಡುತ್ತಿದ್ದ ಯುವತಿಯ ಬಂಧನ

* ಇಲ್ಲಿಯವರೆಗೆ ‘ಲವ್ ಜಿಹಾದ್’ನ ಮಾಧ್ಯಮದಿಂದ ಮತಾಂಧ ಹುಡುಗರು ಹಿಂದೂ ಹುಡುಗಿಯರನ್ನು ಪುಸಲಾಯಿಸಿ ಅವರ ಮತಾಂತರ ಮಾಡುತ್ತಿದ್ದರು. ಈಗ ಮತಾಂಧ ಹುಡುಗಿಯರು ಕೂಡ ಹಿಂದೂ ಹುಡುಗರನ್ನು ಮತಾಂತರಿಸುತ್ತಿದ್ದಾರೆ. ಹಿಂದೂ ಯುವಕರು ಹಾಗೂ ಯುವತಿಯರಲ್ಲಿ ಧರ್ಮಾಭಿಮಾನಶೂನ್ಯತೆಯಿಂದ ಈ ರೀತಿ ನಡೆಯುತ್ತದೆ, ಎಂಬುದನ್ನು ತಿಳಿಯಿರಿ !

* ಹಿಂದೂಗಳಿಗೆ ಧರ್ಮಶಿಕ್ಷಣ ನೀಡಿದ್ದರೆ ಹಾಗೂ ಅವರಿಂದ ಸಾಧನೆ ಮಾಡಿಸಿಕೊಂಡಿದ್ದರೆ, ಅವರಲ್ಲಿ ವಿವೇಕ, ನೈತಿಕತೆ ಇತ್ಯಾದಿ ಗುಣಗಳು ವೃದ್ಧಿಯಾಗಿ ಅವರು ಯಾವುದೇ ಆಮಿಷಗಳಿಗೆ ಅಥವಾ ಮೋಸಕ್ಕೆ ಬಲಿಯಾಗುತ್ತಿರಲಿಲ್ಲ, ಎಂಬುದನ್ನು ಗಮನದಲ್ಲಿಟ್ಟುಕೊಳ್ಳಿರಿ !

ಮಥುರಾ (ಉತ್ತರಪ್ರದೇಶ) – ದೆಹಲಿಯಲ್ಲಿನ ಮಂಗೋಲಪುರಿಯಲ್ಲಿರುವ ಮತಾಂಧ ಯುವತಿಯು 10 ನೆಯ ತರಗತಿಯಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಯೊಂದಿಗೆ ಸ್ನೇಹ ಬೆಳೆಸಿದಳು. ಅನಂತರ ಅವನನ್ನು ಪ್ರೇಮದ ಜಾಲದಲ್ಲಿ ಸಿಲುಕಿಸಿ ಅವನನ್ನು ಗುರುಗ್ರಾಮಕ್ಕೆ ಕರೆದು ಕೊಂಡು ಹೋದಳು. ಅಲ್ಲಿ ಶೀತಪೇಯದ ಮೂಲಕ ಮಾದಕದ್ರವ್ಯವನ್ನು ಕುಡಿಸಿ ಅವನ ಪ್ರಜ್ಞೆ ತಪ್ಪಿಸಿದಳು. ಅನಂತರ ಅವನ ಅಶ್ಲೀಲ ವಿಡಿಯೋವನ್ನು ತಯಾರಿಸಿದಳು. ಅದರ ಮಾಧ್ಯಮದಿಂದ ಮತಾಂತರ ಹಾಗೂ ನಿಕಾಹ ಮಾಡಿಕೊಳ್ಳಲು ಅವನನ್ನು ‘ಬ್ಲಾಕಮೇಲ್’ ಮಾಡಲು ಪ್ರಾರಂಭಿಸಿದಳು. ಈ ಪ್ರಕರಣದಲ್ಲಿ ಉತ್ತರಪ್ರದೇಶದ ಪೊಲೀಸರು ಆ ಯುವತಿಯನ್ನು ಬಂಧಿಸಿದ್ದು ಅವಳ ವಿರುದ್ಧ ‘ಪೋಕ್ಸೋ’ ಕಾಯಿದೆಯ ಅಂತರ್ಗವಾಗಿ ಅಪರಾಧವನ್ನು ದಾಖಲಿಸಲಾಗಿದೆ. ಅವಳ ಸಹಚರರ ಬಗ್ಗೆ ತನಿಖೆ ನಡೆಯುತ್ತಿದೆ.

ಪೊಲೀಸ್ ಅಧೀಕ್ಷಕರಾದ ಶ್ರೀಶಚಂದರವರು ಈ ಬಗ್ಗೆ ಮಾತನಾಡುತ್ತಾ, ದೆಹಲಿಯ ಮಂಗೋಲಪುರಿ ಭಾಗದಲ್ಲಿರುವ ಯುವತಿಯೊಬ್ಬಳು ಮೊದಲಿಗೆ ಕೊಸಿಕಲಾಂ ಕ್ಷೇತ್ರದ ಒಂದು ಊರಿನಲ್ಲಿ 10 ನೆಯ ತರಗತಿಯಲ್ಲಿ ಓದುತ್ತಿರುವ ವಿದ್ಯಾರ್ಥಿಯೊಂದಿಗೆ ಸಾಮಾಜಿಕ ಮಾಧ್ಯಮದ ಮೂಲಕ ಸ್ನೇಹ ಬೆಳೆಸಿದಳು. ತನ್ನನ್ನು ಹಿಂದೂವೆಂದು ಹೇಳುವ ಯುವತಿಯ ಮೇಲಿರುವ ಆರೋಪವೆಂದರೆ, ಅವಳು ಸಂಬಂಧಪಟ್ಟ ಸಂತ್ರಸ್ತ ವಿದ್ಯಾರ್ಥಿಗೆ ಪ್ರಜ್ಞೆತಪ್ಪಿಸಿ ತನ್ನ ಸಹಚರರ ಸಹಾಯದಿಂದ ಆತನ ಅಶ್ಲೀಲ ವಿಡಿಯೋ ತಯಾರಿಸಿದಳು. ಪ್ರಜ್ಞೆ ಬಂದ ಮೇಲೆ ಆರೋಪಿಗಳಿಗೆ ಹೇಳದೆ ಸಂತ್ರಸ್ತನು ಮನೆಗೆ ಬಂದನು. ಹುಡುಗನು ಸಂಪೂರ್ಣ ಘಟನೆಯನ್ನು ತನ್ನ ಕುಟುಂಬದವರಿಗೆ ಹೇಳಿದ ಬಳಿಕ ಅವರು ಪೊಲೀಸರಲ್ಲಿ ದೂರು ನೀಡಿದರು. ಹಿರಿಯ ಪೊಲೀಸ್ ಅಧೀಕ್ಷಕ ಡಾ. ಗೌರವ ಗ್ರೊವರರವರ ಆದೇಶದಂತೆ ಪೊಲೀಸ್ ಠಾಣೆಯಲ್ಲಿ ದೂರನ್ನು ದಾಖಲಿಸಿಕೊಂಡು ಕಾರ್ಯಾಚರಣೆ ಪ್ರಾರಂಭಿಸಲಾಗಿದೆ. ಆರೋಪಿ ಯುವತಿಯನ್ನು ನಿಕಾಹದ ಬಗ್ಗೆ ಚರ್ಚೆ ನಡೆಸುವ ನಿಮಿತ್ತ ಮಥುರಾಗೆ ಕರೆಯಿಸಿಕೊಳ್ಳಲಾಯಿತು. ಅನಂತರ ಅಕ್ಟೋಬರ್ 2 ರಂದು ಅವಳನ್ನು ಬಂಧಿಸಲಾಯಿತು, ಎಂದಿದ್ದಾರೆ.