ಕೊರೊನಾದ ನಿಯಮಗಳನ್ನು ಪಾಲಿಸಿ ಹಬ್ಬವನ್ನು ಆಚರಿಸಿ ಆನಂದ ಪಡೆಯಿರಿ ! – ‘ಏಮ್ಸ್’ ಆಸ್ಪತ್ರೆಯ ನಿರ್ದೇಶಕ ಡಾ. ರಣದೀಪ ಗುಲೇರಿಯಾ ಇವರಿಂದ ಮನವಿ

ಡಾ. ರಣದೀಪ ಗುಲೇರಿಯಾ

ನವದೆಹಲಿ : ಸದ್ಯದ ಹಬ್ಬಗಳ ಸಮಯದಲ್ಲಿ ನಾನು ಎಲ್ಲರಿಗೂ ಒಂದೇ ಸಲಹೆ ನೀಡುವೆ, ತಾವು ಹಬ್ಬಗಳನ್ನು ಆಚರಿಸಿ; ಆದರೆ ಸೋಂಕು ಹರಡದಂತೆ ಆಚರಿಸಿ. ಕೊರೊನಾದ ನಿಯಮಗಳನ್ನು ಪಾಲಿಸಿ. ನಾವು ಹಬ್ಬವನ್ನು ಆಚರಿಸಿದೆವು; ಆದರೆ ಇದರಿಂದ ನಮ್ಮದೇ ಪ್ರದೇಶದಲ್ಲಿ ಕೊರೊನಾ ರೋಗಿಗಳ ಸಂಖ್ಯೆ ಹೆಚ್ಚಾಯಿತು ಮತ್ತು ಅವರನ್ನು ಆಸ್ಪತ್ರೆಗೆ ಸೇರಿಸಬೇಕಾಯಿತು, ತೀವ್ರ ನಿಗಾ ಘಟಕದಲ್ಲಿ ಇರಿಸಬೇಕಾಗಿಬಂತು ಎಂದರೆ ಇದು ಸೂಕ್ತವಲ್ಲ. ಇದು ಹಬ್ಬದ ಹೊಸ ನಕಾರಾತ್ಮಕ ಪರಿಣಾಮವಾಗಬಹುದು. ಆದ್ದರಿಂದ ಹಬ್ಬಗಳನ್ನು ಆಚರಿಸಿ; ಆದರೆ ಅದೇ ಸಮಯದಲ್ಲಿ, ಕೊರೊನಾದ ನಿಯಮಗಳನ್ನು ಪಾಲಿಸಿ, ಎಂದು ದೆಹಲಿಯ ‘ಏಮ್ಸ್’ ಆಸ್ಪತ್ರೆಯ ನಿರ್ದೇಶಕರಾದ ಡಾ. ರಣದೀಪ ಗುಲೇರಿಯಾ ಹೇಳಿದರು. ಕೇಂದ್ರ ಆರೋಗ್ಯ ಸಚಿವಾಲಯವು ಡಾ. ಗುಲೇರಿಯಾರವರ ಈ ಕುರಿತಾದ ಒಂದು ವಿಡಿಯೋವನ್ನು ಪ್ರಸಾರ ಮಾಡಿದೆ. ಅದರಲ್ಲಿ ಅವರು ಜನರಿಗೆ ಹಬ್ಬದ ಸಮಯದಲ್ಲಿ ಹೆಚ್ಚು ಜಾಗರೂಕರಾಗಿರಬೇಕು ಎಂದು ಮನವಿ ಮಾಡಿದ್ದಾರೆ.

ಡಾ. ಗುಲೆರಿಯಾ ಇವರು ತಮ್ಮ ಮಾತನ್ನು ಮುಂದುವರೆಸುತ್ತಾ, ರೋಗಾಣು ಇನ್ನೂ ಇದೆ ನಮ್ಮ ಹಬ್ಬಗಳು ಆರಂಭವಾಗುತ್ತಿವೆ. ನಮ್ಮ ಕುಟುಂಬ ಮತ್ತು ಸ್ನೇಹಿತರೊಂದಿಗೆ ಆಚರಿಸಲು ಇಷ್ಟಪಡುವ ಅನೇಕ ಹಬ್ಬಗಳಿವೆ. ದಸರಾ, ದುರ್ಗಾ ಪೂಜೆ, ದೀಪಾವಳಿ ಅಥವಾ ಛಠ ಪೂಜೆಯಂತಹ ಅನೇಕ ಹಬ್ಬಗಳು ಸಮೀಪಿಸುತ್ತಿವೆ; ಆದರೆ ಈ ಹಬ್ಬಗಳು ಸಮೀಪಿಸುತ್ತಿದ್ದಂತೆ, ನಾವು ಜಾಗರೂಕರಾಗಿರಬೇಕು; ಏಕೆಂದರೆ ಕೊರೋನಾ ರೋಗಾಣು ಇನ್ನೂ ಅಸ್ತಿತ್ವದಲ್ಲಿದೆ ಮತ್ತು ಈ ರೋಗಾಣು ಒಬ್ಬ ವ್ಯಕ್ತಿಯಿಂದ ಇನ್ನೊಬ್ಬರಿಗೆ ಹರಡಲು ಹೆಚ್ಚು ಹೆಚ್ಚು ಅವಕಾಶಗಳನ್ನು ಹುಡುಕುತ್ತಿದೆ ಎಂಬುದನ್ನು ನಾವು ಅರ್ಥಮಾಡಿಕೊಳ್ಳಬೇಕು ಎಂದು ಹೇಳಿದರು.