ನಟ ಅಮೀರ್ ಖಾನನಿಂದ ‘ಸಿಎಟ್ ಟಯರ್’ನ ಜಾಹೀರಾತಿನಲ್ಲಿ ರಸ್ತೆಯಲ್ಲಿ ಪಟಾಕಿ ಸಿಡಿಸದಿರಲು ಸಂದೇಶ !

* ಸಾಮಾಜಿಕ ಮಾಧ್ಯಮಗಳಲ್ಲಿ ಅಮೀರ ಖಾನ ಮೇಲೆ ಟೀಕೆ; ‘ರಸ್ತೆಯಲ್ಲಿ ನಮಾಜು ಪಠಣ ಹೇಗೆ ಮಾಡಬಹುದು ?’ ಎಂದು ಪ್ರಶ್ನೆ ! – ಸಂಪಾದಕರು 

* ಸತತ ಹಿಂದೂಗಳ ಹಬ್ಬಗಳ ಸಮಯದಲ್ಲಿಯೇ ಈ ರೀತಿಯ ಸಲಹೆಗಳನ್ನು ಏಕೆ ನೀಡಲಾಗುತ್ತದೆ? ಕ್ರಿಸ್‍ಮಸ್‍ನ ಸಮಯದಲ್ಲಿಯೂ ಕ್ರೈಸ್ತರು ರಸ್ತೆಯಲ್ಲಿ ಪಟಾಕಿ ಸಿಡಿಸುವಾಗ ಅವರಿಗೆ ಮಾತ್ರ ಯಾರೂ ಏನನ್ನೂ ಏಕೆ ಹೇಳುವುದಿಲ್ಲ? ಬಕ್ರೀದನಂದು ರಸ್ತೆಯಲ್ಲಿ ಗೋಹತ್ಯೆ ಮಾಡಲಾಗುತ್ತದೆ, ಕುರಿಯನ್ನು ಕೊಲ್ಲಲಾಗುತ್ತದೆ, ಆಗ ಮಾತ್ರ ಜನರು ಏಕೆ ವಿರೋಧಿಸುವುದಿಲ್ಲ ? – ಸಂಪಾದಕರು 

ಮುಂಬೈ – ಚಿತ್ರನಟ ಅಮೀರ ಖಾನರವರು ‘ಸಿಯೆಟ್ ಟಯರ್’ನ ಒಂದು ಜಾಹೀರಾತಿನ ಪ್ರಚಾರ ಮಾಡುತ್ತಿದ್ದಾರೆ. ಅದರಲ್ಲಿ ಅಮೀರ್ ಖಾನ್ ಒಬ್ಬ ಹುಡುಗನಿಗೆ ‘ನಮ್ಮ ತಂಡವು ಗೆದ್ದರೆ ಹೂಕುಂಡ, ಪಟಾಕಿ ಹಾಗೂ ಭೂಚಕ್ರ ಇತ್ಯಾದಿ ಎಲ್ಲವನ್ನು ಖಂಡಿತವಾಗಿಯೂ ಸಿಡಿಸೋಣ; ಆದರೆ ಅದು ರಸ್ತೆಯಲ್ಲಿ ಅಲ್ಲ. ಏಕೆಂದರೆ ರಸ್ತೆಗಳನ್ನು ಪಟಾಕಿ ಸಿಡಿಸಲು ಮಾಡಿಲ್ಲ; ಆದರೆ ಅದನ್ನು ಸೊಸೈಟಿಯ ಆವರಣದಲ್ಲಿ, ರಸ್ತೆಯ ಮೇಲಲ್ಲ’ ಎಂಬ ಜಾಹೀರಾತು ಭಿತ್ತರವಾದ ಬಳಿಕ ಆ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ಟೀಕೆಯಾಗತೊಡಗಿತು. ‘ರಸ್ತೆ ಏನು ನಮಾಜು ಪಠಣಕ್ಕಾಗಿದೆಯೇ?’, ಎಂದು ಪ್ರಶ್ನಿಸಿ ಅಮೀರ್ ಖಾನ್ ರವರನ್ನು ‘ಹಿಂದೂವಿರೋಧಿ’ ಎಂದು ಹೇಳಲಾಗುತ್ತಿದೆ. ಅದೇ ರೀತಿ ಅಮೀರ್ ಖಾನ್ ಹಾಗೂ ಸೀಯೆಟ್ ಟಯರ್ ಅನ್ನು ಬಹಿಷ್ಕರಿಸುವ ಬೇಡಿಕೆ ಮಾಡಲಾಗುತ್ತಿದೆ.

1. ಸಾಮಾಜಿಕ ಮಾಧ್ಯಮಗಳ ಮೇಲೆ ವ್ಯಕ್ತಿಯೊಬ್ಬರು ಪ್ರತಿಕ್ರಿಯಿಸುತ್ತಾ, ಹಿಂದಿ ಚಿತ್ರೋದ್ಯಮದವರು ಹಿಂದೂಗಳ ಹಬ್ಬಗಳನ್ನೇ ಯಾವಾಗಲೂ ಗುರಿ ಮಾಡುತ್ತಾರೆ, ಆದರೂ ಹಿಂದೂಗಳು ಅವರ ಚಲನಚಿತ್ರಗಳನ್ನು ನೋಡುತ್ತಾರೆ, ಎಂದಿದ್ದಾರೆ.

2. ಸಿಯೆಟ್ ಟಯರ’ನ ಮಾಲೀಕರಾದ ಹರ್ಷ ಗೋಯಂಕಾರವರ ಮೇಲೆ ಕೂಡ ಅನೇಕರು ಟೀಕಿಸಿದ್ದಾರೆ. ಅವರನ್ನು ‘ಹಿಂದೂಫೋಬಿಕ್’ (ಹಿಂದೂವಿರೋಧಿ) ಎಂದು ಹೇಳಿದ್ದಾರೆ.

3. ಒಬ್ಬರಂತೂ ಪ್ರತಿಕ್ರಿಯಿಸುತ್ತಾ ಈಗ ನಾನು ನನ್ನ ಚತುಷ್ಚಕ್ರ ವಾಹನದ ಸಿಯೆಟ್ ಟಯರ್ ಬದಲಾಯಿಸಿ ಬೇರೆ ಸಂಸ್ಥೆಯ ಟಯರ್ ಹಾಕಲಿದ್ದೇನೆ. ಅಷ್ಟೇ ಅಲ್ಲದೆ ಬೇರೆಯವರಿಗೂ ಆ ರೀತಿ ಮಾಡಲು ಹೇಳುವೆನು ಎಂದಿದ್ದಾರೆ.