* ಕ್ರೈಸ್ತ ಧರ್ಮಪ್ರಚಾರಕರು ಸಂಪೂರ್ಣ ಭಾರತದಾದ್ಯಂತ ದೊಡ್ಡ ಪ್ರಮಾಣದಲ್ಲಿ ಹಿಂದೂಗಳನ್ನು ಮತಾಂತರಿಸಲು ಪ್ರಯತ್ನಿಸುತ್ತಿರುವಾಗ ಕೇಂದ್ರ ಸರಕಾರವು ಮತಾಂತರವಿರೋಧಿ ಕಾಯಿದೆ ತರಲು ಏಕೆ ಕ್ರಮವಹಿಸುತ್ತಿಲ್ಲ?- ಸಂಪಾದಕರು * ಮತಾಂತರವು ರಾಷ್ಟ್ರೀಯ ಸಮಸ್ಯೆಯಾಗಿದೆ! ಹೀಗಿರುವಾಗ ‘ಮತಾಂತರ’ದ ಸಮಸ್ಯೆಯನ್ನು ರಾಷ್ಟ್ರೀಯ ಸಮಸ್ಯೆಯೆಂದು ಘೋಷಿಸಿ ಕ್ರೈಸ್ತ ಧರ್ಮಪ್ರಚಾರಕರಿಗೆ ಕಠೋರ ಶಿಕ್ಷೆ ವಿಧಿಸಿದಾಗಲೇ ಅವರಿಗೆ ಭಯ ಬರುವುದು !- ಸಂಪಾದಕರು |
ಯಾದಗಿರೀ (ಕರ್ನಾಟಕ) – ಯಾದಗಿರೀ ತಾಲೂಕಿನ ನೀಲಹಳ್ಳಿ ಗ್ರಾಮದಲ್ಲಿ ಕ್ರೈಸ್ತ ಧರ್ಮಪ್ರಚಾರಕರು ಆ ಊರಿನ ಜನರನ್ನು ಪುಸಲಾಯಿಸಿ ಮತಾಂತರಗೊಳಿಸುತ್ತಿರುವುದು ಗಮನಕ್ಕೆ ಬಂದ ತಕ್ಷಣ ಅಲ್ಲಿನ ಸ್ಥಳೀಯ ಯುವಕರು ಅದನ್ನು ವಿರೋಧಿಸಿದರು. ಊರಿನ ಯುವಕರು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ ಬಳಿಕ 4 ಕ್ರೈಸ್ತ ಧರ್ಮಪ್ರಚಾರಕರನ್ನು ಬಂಧಿಸಲಾಯಿತು. ಅವರಲ್ಲಿ ಇಬ್ಬರು ಮಹಿಳೆಯರೂ ಇದ್ದಾರೆ. ಮತಾಂತರಗೊಳಿಸಲು ಬಂದವರ ಪೈಕಿ ಜೇಮ್ಸ ಎಂಬುವ ಪ್ರಾದಿಯು ಸ್ಥಳೀಯ ಯುವಕರೊಂದಿಗೆ ವಾದ ಮಾಡಿದನು ಹಾಗೂ ಮತಾಂತರಗೊಳಿಸಲು ಸರಕಾರದ ಆದೇಶವಿರುವುದಾಗಿ ಕೂಡ ಹೇಳಿದನು (ಬಹಿರಂಗವಾಗಿ ಹಸಿಹಸಿ ಸುಳ್ಳು ಹೇಳುವ ಕ್ರೈಸ್ತ ಧರ್ಮಪ್ರಚಾರಕರು ! ರಾಜ್ಯದಲ್ಲಿನ ಭಾಜಪ ಸರಕಾರವು ಮತಾಂತರದ ವಿಷಯವಾಗಿ ಭೂಮಿಕೆಯನ್ನು ಸ್ಪಷ್ಟ ಪಡಿಸಲಿ ಹಾಗೂ ಈ ರೀತಿ ಸರಕಾರದ ವಿರುದ್ಧ ಪ್ರಚಾರ ಮಾಡುವವರನ್ನು ಕಾರಾಗೃಹದಲ್ಲಿ ಬಂಧಿಸುವುದು ಅಗತ್ಯ ! – ಸಂಪಾದಕರು)
( ಸೌಜನ್ಯ: Asianet Suvarna News)
ಗ್ರಾಮಸ್ಥರನ್ನು ಅದರಲ್ಲಿಯೂ ದಲಿತರನ್ನು ಮತಾಂತರಗೊಳಿಸಲು ಕ್ರೈಸ್ತ ಧರ್ಮಪ್ರಚಾರಕರು ಪ್ರಯತ್ನಿಸುತ್ತಿದ್ದರು. ‘ಊರಿನಲ್ಲಿ ಚರ್ಚ್ ಇಲ್ಲದಿರುವಾಗ ಜನರನ್ನೇಕೆ ಮತಾಂತರ ಮಾಡುತ್ತಿರುವಿರಿ?’, ಎಂದು ಸ್ಥಳೀಯ ಯುವಕರು ಜೇಮ್ಸ ಅನ್ನು ವಿಚಾರಿಸಿದಾಗ ‘ನಾವು ದಲಿತರನ್ನು ಮತಾಂತರಗೊಳಿಸುತ್ತಿಲ್ಲ; ಬದಲಾಗಿ ಅವರನ್ನು ‘ಪರಿವರ್ತನೆ’ ಮಾಡುತ್ತಿದ್ದೇವೆ’, ಎಂದು ಹೇಳಿದರು. (ಹೀಗೆ ಮಾತಿನಲ್ಲಿ ಮರುಳು ಮಾಡುತ್ತಾ ತಮ್ಮ ಕುಕೃತ್ಯಗಳನ್ನು ಮುಚ್ಚಲು ನೋಡುವ ಧೂರ್ತ ಕ್ರೈಸ್ತ ಧರ್ಮಪ್ರಚಾರಕರು ! – ಸಂಪಾದಕರು) ಯುವಕರು ಜೇಮ್ಸರವರ ಬಳಿ ಮತಾಂತರಗೊಳಿಸಲು ಅನುಮತಿ ನೀಡಿರುವ ಸರಕಾರೀ ಆದೇಶದ ಪ್ರತಿಯನ್ನು ಕೇಳಿದಾಗ ಜೇಮ್ಸ ಅದನ್ನು ತೋರಿಸದೆ ‘ಪೊಲೀಸರ ಬಳಿಗೆ ಹೋಗುವೆನು’, ಎಂದು ಬೆದರಿಸಿದನು. ಆಗ ಸ್ಥಳೀಯ ಯುವಕರು ಅವನನ್ನು ತಕ್ಷಣ ಪೊಲೀಸು ಠಾಣೆಗೆ ಕರೆದೊಯ್ದು ಕ್ರೈಸ್ತ ಧರ್ಮಪ್ರಚಾರಕರ ವಿರುದ್ಧ ದೂರು ನೀಡಿದರು. ಪೊಲೀಸರು ಮತಾಂತರಿಸುತ್ತಿದ್ದ ನಾಲ್ವರನ್ನು ಬಂಧಿಸಿದರು. ಕ್ರೈಸ್ತ ಧರ್ಮಪ್ರಚಾರಕನ್ನು ನ್ಯಾಯಾಲಯದ ಎದುರು ಉಪಸ್ಥಿತಗೊಳಿಸಿದಾಗ ಅವರಿಗೆ ನ್ಯಾಯಾಂಗ ಬಂಧನವನ್ನು ವಿಧಿಸಲಾಯಿತು.