ಚೀನಾದ ಅತಿಕ್ರಮಣದ ವಿರುದ್ಧ ನೇಪಾಳಿ ನಾಗರಿಕರಿಂದ ಆಂದೋಲನ

ಇಂತಹ ಆಂದೋಲನಗಳನ್ನು ಮಾಡುವುದರಿಂದ ಚೀನಾದ ಮೇಲೆ ಯಾವುದೇ ಪರಿಣಾಮವಾಗುವುದಿಲ್ಲ. ಅದರ ಬದಲು ಜನತೆಯು ನೇಪಾಳದ ಸರಕಾರದ ಮೇಲೆ ಒತ್ತಡವನ್ನು ಹೇರಿ ಅದಕ್ಕೆ ಚೀನಾ ವಿರೋಧಿ ಭೂಮಿಕೆಯನ್ನು ತಾಳುವಂತೆ ಮಾಡಬೇಕು ! – ಸಂಪಾದಕರು

ಕಾಠ್ಮಂಡು (ನೇಪಾಳ) – ಚೀನಾದಿಂದ ನಡೆಯುತ್ತಿರುವ ಅತಿಕ್ರಮಣದ ವಿರುದ್ಧ ನೇಪಾಳದಲ್ಲಿನ ಜನತೆಯಿಂದ ಆಂದೋಲನ ನಡೆಸಲಾಯಿತು. ‘ಚೀನಾವು ತನ್ನ ವಿಸ್ತಾರವಾದಕ್ಕೆ ಲಗಾಮು ಹಾಕಬೇಕು ಮತ್ತು ನೇಪಾಳದಿಂದ ಕಬಳಿಸಿದ ಭೂಮಿಯನ್ನು ಹಿಂದಿರುಗಿಸಬೇಕು’ ಎಂದು ಈ ಸಮಯದಲ್ಲಿ ಮನವಿ ಮಾಡಲಾಯಿತು. ಈ ಸಮಯದಲ್ಲಿ ಆಂದೋಲನಕಾರರು ‘ಚೀನಾವು ನಮ್ಮ ಭೂಮಿಯನ್ನು ಹಿಂದಿರುಗಿಸಬೇಕು’ ಮತ್ತು ‘ಚೀನಾ ಹಿಂದೆ ಹೋಗು’ ಎಂಬಂತಹ ಘೋಷಣೆಗಳನ್ನು ನೀಡಿದರು. ಈ ಆಂದೋಲನವನ್ನು ಕಾಠ್ಮಂಡುವಿನಲ್ಲಿ ‘ಲೋಕತಾಂತ್ರಿಕ ಯುವಾ ಮಂಚಾ’ದ ವತಿಯಿಂದ ನಡೆಸಲಾಯಿತು. ಇದರಲ್ಲಿ ಸುಮಾರು 200 ನಾಗರಿಕರು ಸಹಭಾಗಿಯಾಗಿದ್ದರು.

1. ಒಂದು ವರದಿಯ ಅನುಸಾರ ಚೀನಾವು ನೇಪಾಳದ ಭೂಮಿಯಲ್ಲಿ ಕಟ್ಟಡ ಕಾಮಗಾರಿಯನ್ನು ಆರಂಭಿಸಿದ್ದು ಇಲ್ಲಿಯವರೆಗೆ 12 ರಿಂದ 15 ಕಟ್ಟಡಗಳನ್ನು ಕಟ್ಟಿದೆ. ‘ಈ ಕಟ್ಟಡಗಳನ್ನು ನೇಪಾಳದ ಭೂಮಿಯಲ್ಲಿ ಅತಿಕ್ರಮಣ ಮಾಡಿ ಕಟ್ಟಲಾಗಿದ್ದು ಅವುಗಳನ್ನು ತಕ್ಷಣ ತೆರವುಗೊಳಿಸಬೇಕು’ ಎಂದು ನೇಪಾಳದ ಜನತೆಯು ಮನವಿ ಮಾಡಿದೆ. ಈ ಮೂಲಕ ಚೀನೀ ಮತ್ತು ನೇಪಾಳದ ನಾಗರಿಕರ ನಡುವೆ ಅನೇಕ ಬಾರಿ ಸಂಘರ್ಷಗಳಾಗುತ್ತಿವೆ. ನೇಪಾಳಿ ನಾಗರಿಕರು ಚೀನಿ ನಾಗರಿಕರಿಗೆ ಪ್ರವೇಶ ನೀಡದಿರುವ ಭೂಮಿಕೆಯನ್ನು ತಳೆದಿದ್ದಾರೆ.

2. ನೇಪಾಳದ ಮುಖ್ಯಮಂತ್ರಿ ಶೇಖ ಬಹಾದೂರ ಥಾಪಾರವರು ಈ ಪ್ರಕರಣದ ವಿಚಾರಣೆಗಾಗಿ ಒಂದು ಸಮಿತಿಯನ್ನು ಸ್ಥಾಪಿಸಿದ್ದಾರೆ. ಈ ಸಮಿತಿಯು ನೇಪಾಳದ ಹುಮಲಾ ಭಾಗದಲ್ಲಿ ಚೀನಾದಿಂದ ನಡೆದಿರುವ ಅತಿಕ್ರಮಣದ ಬಗ್ಗೆ ಅಧ್ಯಯನ ಮಾಡಿ ಅದರ ವರದಿಯನ್ನು ಸರಕಾರಕ್ಕೆ ನೀಡಲಿದೆ.

3. ಈ ಹಿಂದಿನ ಕೆ.ಪಿ. ಓಲಿ ಶರ್ಮ ರವರ ನೇತೃತ್ವದ ಸರಕಾರವು ಚೀನಾದಿಂದ ಅತಿಕ್ರಮಣ ಆಗಿಯೇ ಇಲ್ಲ ಎಂದು ಹೇಳಿತ್ತು. ಆ ಸರಕಾರವೂ 19 ಸದಸ್ಯರ ಸಮಿತಿಯನ್ನು ರಚಿಸಿತ್ತು. ಆದರೆ ಅದರ ನಂತರವೂ ಚೀನಾದ ಅತಿಕ್ರಮಣ ನಡೆದಿದ್ದು ನೇಪಾಳಿ ನಾಗರಿಕರಿಗೆ ಈ ಭಾಗದಲ್ಲಿ ಇರುವುದು ಕಠಿಣವಾಗುತ್ತಿದೆ.