ಅಯೋಧ್ಯೆ ಸಮೀಪದ ಹಳ್ಳಿಯಲ್ಲಿ ಕ್ರೈಸ್ತ ಮಿಷನರಿಗಳಿಂದ ಹಿಂದೂಗಳ ಮತಾಂತರದ ಪ್ರಯತ್ನ ಬಹಿರಂಗ: 40 ಜನರ ಬಂಧನ

* ಹಿಂದೂಗಳು ಧಾರ್ಮಿಕ ನಗರವಾಗಿರುವ ಅಯೋಧ್ಯೆಯ ಪರಿಸರದಲ್ಲಿ ಕ್ರೈಸ್ತ ಮತ ಪ್ರಚಾರಕರು ಇಂತಹ ಧೈರ್ಯ ತೋರಿಸುತ್ತಾರೆ ಎಂದರೆ ಇದು ಹಿಂದೂಗಳಿಗೆ ನಾಚಿಕೆಗೇಡು.- ಸಂಪಾದಕರು 

* ಉತ್ತರಪ್ರದೇಶದಲ್ಲಿ ಭಾಜಪದ ಸರಕಾರ ಇದೆ, ಎಂಬ ಬಗ್ಗೆ ಕ್ರಿಶ್ಚಿಯನ್ ಧರ್ಮಪ್ರಚಾರಕರಿಗೆ ಭಯವಿರಬೇಕು ಎಂದು ಹಿಂದೂಗಳಿಗೆ ಅನಿಸುತ್ತದೆ.- ಸಂಪಾದಕರು 

ಅಯೋಧ್ಯೆ (ಉತ್ತರಪ್ರದೇಶ) – ಇಲ್ಲಿಯ ಮಹಾಮಾರ್ಗದ ಹತ್ತಿರ ಇರುವ ಒಂದು ಊರಿನಲ್ಲಿ ಕ್ರೈಸ್ತ ಮತ ಪ್ರಚಾರಕರಿಂದಾಗುತ್ತಿರುವ ಹಿಂದೂಗಳ ಮತಾಂತರದ ಪ್ರಯತ್ನವನ್ನು ಆಡಳಿತವು ಪೊಲೀಸರಿಂದ ದಾಳಿ ನಡೆಸಿ ತಡೆಗಟ್ಟಿದೆ. ಈ ಪ್ರಕರಣದಲ್ಲಿ ೪೦ ಜನರನ್ನು ಬಂಧಿಸಲಾಗಿದೆ ಇದರಲ್ಲಿ ಮಹಿಳೆಯರೂ ಇದ್ದಾರೆ. ಈ ಊರಿನ ಒಂದು ಮನೆಯಲ್ಲಿ ಅನೇಕ ಜನರು ಒಟ್ಟುಗೂಡಿದ್ದರು. ಇದರ ಮಾಹಿತಿಯನ್ನು ಊರಿನವರು ಸರಕಾರಕ್ಕೆ ನೀಡಿದ ನಂತರ ಈ ದಾಳಿ ನಡೆಸಲಾಯಿತು.