ಚಿಕ್ಕಮಗಳೂರಿನಲ್ಲಿರುವ ದತ್ತಪೀಠಕ್ಕೆ ಹಿಂದೂ ಅರ್ಚಕರನ್ನು ನೇಮಿಸಿ ! ರಾಜ್ಯ ಸರಕಾರಕ್ಕೆ ಕರ್ನಾಟಕ ಉಚ್ಚ ನ್ಯಾಯಾಲಯದ ಆದೇಶ

ಒಂದು ಹಿಂದೂ ಶದ್ಧಾಸ್ಥಾನಕ್ಕೆ ಹಿಂದೂ ಅರ್ಚಕರನ್ನು ನೇಮಿಸಲು ಸಹ ನ್ಯಾಯಾಲಯವು ಆದೇಶ ನೀಡಬೇಕಾಗುತ್ತದೆ, ಇದರಿಂದ ಬಹುಸಂಖ್ಯಾತ ಹಿಂದೂಗಳ ದೇಶದಲ್ಲಿ ಹಿಂದೂಗಳ ದುಃಸ್ಥಿತಿ ಗಮನಕ್ಕೆ ಬರುತ್ತದೆ !

ಬೆಂಗಳೂರು – ಚಿಕ್ಕಮಗಳೂರು ಜಿಲ್ಲೆಯಲ್ಲಿನ ದತ್ತಪೀಠದಲ್ಲಿ ಹಿಂದೂ ಅರ್ಚಕರನ್ನು ನೇಮಿಸಬೇಕು ಎಂದು ಕರ್ನಾಟಕ ಉಚ್ಚ ನ್ಯಾಯಾಲಯವು ಕರ್ನಾಟಕ ಸರಕಾರಕ್ಕೆ ಆದೇಶ ನೀಡಿದೆ. ಈ ಹಿಂದೆ ೨೦೧೮ರಲ್ಲಿ ಒಬ್ಬ ಮೌಲವೀ (ಇಸ್ಲಾಮನ ಧಾರ್ಮಿಕ ಮುಖಂಡ)ಯನ್ನು ಶ್ರೀ ದತ್ತಪೀಠದ ಮುಖ್ಯ ಅರ್ಚಕ ಎಂದು ನೇಮಿಸಲಾಗಿತ್ತು. ಅದರಿಂದ ದೊಡ್ಡ ವಿವಾದವು ಉದ್ಭವಿಸಿತ್ತು.

ದತ್ತಪೀಠವನ್ನು ನಂಬುವ ಹಿಂದುಗಳಿಗೆ ಶ್ರೀ ದತ್ತಗುರುಗಳು ನೀಡಿದ ಆಶೀರ್ವಾದವೇ ಈ ತೀರ್ಪು ! –  ಸಿ.ಟಿ. ರವಿ

ಭಾಜಪದ ಶಾಸಕರಾದ ಸಿ.ಟಿ.ರವಿಯವರು ದತ್ತಪೀಠ ಚಳುವಳಿಯ ನೇತೃತ್ವ ವಹಿಸಿದ್ದರು. ಉಚ್ಚ ನ್ಯಾಯಾಲಯದ ಆದೇಶವನ್ನು ಸ್ವಾಗತಿಸುತ್ತಾ ಅವರು ‘ಟ್ವಿಟರ ನಲ್ಲಿ ತಮ್ಮ ಪ್ರತಿಕ್ರಿಯೆಯನ್ನು ಮುಂದಿನಂತೆ ವ್ಯಕ್ತಪಡಿಸಿದರು ‘ಕರ್ನಾಟಕ ಉಚ್ಚ ನ್ಯಾಯಾಲಯವು ರಾಜ್ಯ ಸರಕಾರಕ್ಕೆ ದತ್ತಪೀಠದಲ್ಲಿ ಹಿಂದೂ ಅರ್ಚಕರನ್ನು ನೇಮಿಸುವ ಆದೇಶ ನೀಡುವುದು, ಇದು ಹಿಂದೂಗಳಿಗೆ ದೊಡ್ಡ ವಿಜಯವಾಗಿದೆ. ನ್ಯಾಯಮೂರ್ತಿ ನಾಗಮೋಹನ ದಾಸ ಸಮಿತಿಯ ಪಕ್ಷಪಾತದ ವರದಿಯನ್ನು ತಳ್ಳಿಹಾಕಿದ ಉಚ್ಚ ನ್ಯಾಯಾಲಯದ ತೀರ್ಮಾನವನ್ನು ನಾನು ಸ್ವಾಗತಿಸುತ್ತೇನೆ. ಈ ಪ್ರಕರಣದಲ್ಲಿ ಸಂಘರ್ಷ ನಡೆಸುತ್ತಿದ್ದ ಹಿಂದೂಗಳಿಗೆ ಇದೊಂದು ಮಹತ್ವವಾದ ಘಟನೆಯಾಗಿದೆ.

ದತ್ತಪೀಠದ ಮೇಲೆ ವಿಶ್ವಾಸವಿಟ್ಟುಕೊಳ್ಳುವ ಹಿಂದೂಗಳಿಗೆ ಇದೊಂದು ಮಹತ್ವದ ಘಟನೆಯಾಗಿದೆ. ದತ್ತಪೀಠದ ಮೇಲೆ ವಿಶ್ವಾಸವಿಟ್ಟುಕೊಳ್ಳುವವರಿಗೆಲ್ಲರಿಗೂ ಇದು ಶ್ರೀ ದತ್ತಗುರುಗಳ ಆಶೀರ್ವಾದವಾಗಿದೆ. ಈ ತೀರ್ಪಿನಿಂದ ಜನತೆಯಲ್ಲಿ ನ್ಯಾಯವ್ಯವಸ್ಥೆಯ ವಿಷಯದಲ್ಲಿ ಗೌರವ ಭಾವವು ವೃದ್ಧಿಯಾಗಿದೆ. ದೇವಸ್ಥಾನಗಳಲ್ಲಿನ ಧಾರ್ಮಿಕ ವಿಧಿ ಮಾಡಲು ಮೌಲವಿಯನ್ನು ನೇಮಿಸುವುದು ಅಯೋಗ್ಯವಾಗಿದೆ. ನ್ಯಾಯ ನೀಡಲಾಗಿದೆ ಹಾಗೂ ಯಾವಾಗಲೂ ಸತ್ಯದ್ದೇ ವಿಜಯವಾಗುತ್ತದೆ.

ಏನೀ ನ್ಯಾಯಾಲಯದ ಪ್ರಕರಣ?

೨೦೧೮ರಲ್ಲಿ ಕಾಂಗ್ರೆಸ್ಸಿನ ಸಮಕಾಲೀನ ಸಿದ್ಧರಾಮಯ್ಯ ಸರಕಾರವು ದತ್ತ ಪೀಠವನ್ನು ಧಾರ್ಮಿಕದತ್ತಿ ವಿಭಾಗದ ನಿಯಂತ್ರಣದಡಿಯಲ್ಲಿ ತಂದಿತ್ತು. ಕಾಂಗ್ರೆಸ ಸರಕಾರದ ಈ ಆಟವನ್ನು ಆ ಸಮಯದ ವಿರೋಧಿ ಪಕ್ಷದಲ್ಲಿದ್ದ ಭಾಜಪವು ವಿರೋಧಿಸಿತ್ತು. ಆಗ ಭಾಜಪವು ಈ ಸರಕಾರವು ರಾಜ್ಯದಲ್ಲಿನ ಅಲ್ಪಸಂಖ್ಯಾತರನ್ನು ಪ್ರಸನ್ನಗೊಳಿಸಲು ಪ್ರಯತ್ನಿಸುತ್ತಿದೆ. ಯಾವುದಾದರೂ ಮಸೀದಿಯಲ್ಲಿ ಧಾರ್ಮಿಕ ವಿಧಿ ಮಾಡಲು ಹಿಂದೂ ಅರ್ಚಕರನ್ನು ನೇಮಿಸುವ ಧೈರ್ಯವನ್ನು ಸಿದ್ಧರಾಮಯ್ಯನವರು ತೋರಿಸುವರೇ?, ಎಂದು ಪ್ರಶ್ನಿಸಿದ್ದರು. ಆ ಸಮಯದಲ್ಲಿ ಭಾಜಪವು ಈ ಪ್ರಕರಣದಲ್ಲಿ ಕಾನೂನುರೀತ್ಯಾ ಹೋರಾಟ ನಡೆಸಲಾಗುವುದು, ಎಂದು ಸಹ ಹೇಳಿದ್ದರು.

ದತ್ತಪೀಠದ ಇತಿಹಾಸ

ದತ್ತಪೀಠವು ೪ ಸಾವಿರ ಅಡಿ ಎತ್ತರದಲ್ಲಿರುವ ಹಿಂದೂಗಳ ಧಾರ್ಮಿಕ ಸ್ಥಳವಾಗಿದೆ. ಆ ಚಂದ್ರದ್ರೋಣ ಪರ್ವತದಲ್ಲಿರುವ ಗುಹೆಯಲ್ಲಿ ಭಗವಾನ ದತ್ತಾತ್ರೇಯರು ತಪಶ್ಚರ್ಯೆ ಮಾಡಿದ್ದರು. ಆದ್ದರಿಂದ ಆ ಕ್ಷೇತ್ರಕ್ಕೆ ‘ದತ್ತಪೀಠ ಎಂದು ಕರೆಯಲಾಗುತ್ತದೆ. ಆ ಸ್ಥಳದಲ್ಲಿ ಶ್ರೀ ದತ್ತಗುರುಗಳ ಪಾದುಕೆಯಿದೆ. ೧೬ನೇಯ ಶತಮಾನದವರೆಗೂ ಹಿಂದೂ ಪದ್ಧತಿಯಂತೆ ಪೂಜೆ-ಅರ್ಚನೆ ನಡೆಯುತ್ತಿದ ಬಗ್ಗೆಯೂ ನೋಂದಣಿಯಿದೆ. ಅನಂತರ ಅಲ್ಲಿ ಬಾಬಾ ಬುಡನ ಎಂಬ ಹೆಸರಿನ ಫಕೀರನಿರುತ್ತಿದ್ದನು. ಕ್ರೂರ ಇಸ್ಲಾಮಿ ಆಕ್ರಮಣಕಾರ ಟಿಪ್ಪು ಸುಲ್ತಾನನು ಮೈಸೂರನ್ನು ವಶಪಡಿಸಿಕೊಂಡ ಬಳಿಕ ದತ್ತಪೀಠವನ್ನು ಇಸ್ಲಾಮೀಕರಣಗೊಳಿಸಲಾಯಿತು. ಟಿಪ್ಪು ಸುಲ್ತಾನನು ಆ ಸ್ಥಳದ ಮೇಲ್ವಿಚಾರಣೆಗಾಗಿ ಮುಸಲ್ಮಾನ ಕುಟುಂಬದವರನ್ನು ನೇಮಿಸಿದನು. ಅನಂತರ ಅಲ್ಲಿ ಗೋರಿ ಕಟ್ಟಲಾಯಿತು. ಆ ಸ್ಥಳವನ್ನು ಬಾಬಾ ಬುಡನಗಿರಿ ದರ್ಗಾ ಎಂದು ನಾಮಕರಣ ಮಾಡಲಾಯಿತು. ಆ ಸ್ಥಳದ ಮೇಲೆ ಮತಾಂಧರು ತಮ್ಮ ಹಕ್ಕನ್ನು ಹೇಳುತ್ತಿದ್ದಾರೆ. ಆ ಧಾರ್ಮಿಕ ಸ್ಥಳ ಹಿಂದೂಗಳಿಗೆ ಸಿಗಬೇಕು ಎಂಬುದಕ್ಕಾಗಿ ಹಿಂದೂಗಳು ಕಾನೂನು ಮಾರ್ಗದಿಂದ ಹೋರಾಟ ನಡೆಸುತ್ತಿದ್ದಾರೆ.