ದತ್ತಪೀಠದಲ್ಲಿ ಕೂಡಲೇ ಹಿಂದೂ ಅರ್ಚಕರನ್ನು ನೇಮಿಸಿ ದತ್ತಪೀಠವನ್ನು ಹಿಂದೂ ಕ್ಷೇತ್ರವೆಂದು ಘೋಷಿಸಿ – ಶ್ರೀ. ಮೋಹನ ಗೌಡ, ರಾಜ್ಯ ವಕ್ತಾರರು, ಹಿಂದೂ ಜನಜಾಗೃತಿ ಸಮಿತಿ

ಬೆಂಗಳೂರು – ಕಾಂಗ್ರೆಸ್ ಸರ್ಕಾರವು ಹಿಂದೂ ಧಾರ್ಮಿಕ ಹಕ್ಕುಗಳನ್ನು ಮುಟುಕುಗೊಳಿಸಲು 2018 ರಲ್ಲಿ ಮುಸ್ಲಿಂ ಮೌಲ್ವಿ ಸೈಯದ್ ಗೌಸ್ ಮೊಹಿದ್ದೀನ್ ಅವರನ್ನು ನೇಮಿಸಿತ್ತು. ಇದನ್ನು ಉಚ್ಚ ನ್ಯಾಯಾಲಯವು ರದ್ದುಗೊಳಿಸಿದೆ ಮತ್ತು ರಾಜ್ಯ ಸರ್ಕಾರಕ್ಕೆ ಹಿಂದೂ ಅರ್ಚಕರ ನೇಮಕ ಮಾಡಲು ಆದೇಶ ನೀಡಿದೆ. ಈ ಆದೇಶವನ್ನು ಹಿಂದೂ ಜನಜಾಗೃತಿ ಸಮಿತಿಯು ಸ್ವಾಗತಿಸುತ್ತದೆ. ಇದು ಕಾಂಗ್ರೆಸ್ ಸರ್ಕಾರವು ದತ್ತ ಪೀಠವನ್ನು ಮುಸಲ್ಮಾನರಿಗೆ ನೀಡಲು ಮಾಡಿದ ಷಡ್ಯಂತ್ರ್ಯದ ಪರಾಜಯವಾಗಿದೆ. ಮಾನ್ಯ ನ್ಯಾಯಾಲಯವು ತನ್ನ ಆದೇಶದಲ್ಲಿ ದತ್ತ ಪೀಠವು ವಕ್ಫ್ ಬೋರ್ಡ್ ಆಸ್ತಿಯಲ್ಲ, ಅದು ಹಿಂದೂ ಧಾರ್ಮಿಕ ದತ್ತಿ ಇಲಾಖೆಯ ಆಸ್ತಿಯಾಗಿದೆ ಎಂದು ಸ್ಪಷ್ಟವಾಗಿ ಉಲ್ಲೇಖ ಮಾಡಿದ ಕಾರಣ, ದತ್ತಪೀಠವನ್ನು ಹಿಂದೂ ಕ್ಷೇತ್ರವೆಂದು ಘೋಷಿಸಬೇಕು ಮತ್ತು ಅಲ್ಲಿ ಹಿಂದೂ ಪದ್ದತಿಯಂತೆ ತ್ರಿಕಾಲ ಪೂಜಾ ವಿಧಿ ನಡೆಯಲು ಕೂಡಲೇ ಹಿಂದೂ ಅರ್ಚಕರ ನೇಮಕ ಮಾಡಬೇಕು ಎಂದು ಹಿಂದೂ ಜನಜಾಗೃತಿ ಸಮಿತಿಯು ಆಗ್ರಹಿಸುತ್ತದೆ.