ಅಲಿಗಢ (ಉತ್ತರಪ್ರದೇಶ) ದ ಮದರಸಾದಲ್ಲಿ 6 ವರ್ಷದ ಬಾಲಕನನ್ನು ಕಬ್ಬಿಣದ ಸರಪಳಿಯಿಂದ ಕಟ್ಟಿರುವ ಘಟನೆ ಬಹಿರಂಗ

ಬಹಳಷ್ಟು ಮದರಸಾದಿಂದ ಜಿಹಾದಿ ಉಗ್ರರನ್ನು ತಯಾರು ಮಾಡಲಾಗುತ್ತದೆ, ಹೀಗೆ ಅನೇಕ ಬಾರಿ ಬೆಳಕಿಗೆ ಬಂದಿದೆ. ಬಹಳಷ್ಟು ಮದರಸಾಗಳಲ್ಲಿ ಮಕ್ಕಳ ಮೇಲೆ ಬಲಾತ್ಕಾರ ಮಾಡಲಾಗುತ್ತದೆ, ಮಕ್ಕಳ ಮೇಲೆ ದೌರ್ಜನ್ಯ ನಡೆಸಲಾಗುತ್ತಿದೆ, ಇಂತಹ ಘಟನೆಗಳು ಬೆಳಕಿಗೆ ಬಂದಿರುವುದರಿಂದ ಮದರಸಾಗಳಿಗೆ ರಾಜ್ಯ ಮತ್ತು ಕೇಂದ್ರದಿಂದ ಕೋಟಿಗಟ್ಟಲೆ ರೂಪಾಯಿ ಅನುದಾನ ಕೊಡುವುದನ್ನು ಇನ್ನು ಮುಂದೆ ಶಾಶ್ವತವಾಗಿ ನಿಲ್ಲಿಸಬೇಕು, ಎಂದು ಜನರ ಅಪೇಕ್ಷೆಯಾಗಿದೆ.- ಸಂಪಾದಕರು 

ಅಲಿಗಡ(ಉತ್ತರಪ್ರದೇಶ) – ಇಲ್ಲಿಯ ಒಂದು ಮದರಸಾದಲ್ಲಿ 6 ವರ್ಷದ ಒಬ್ಬ ಬಾಲಕನನ್ನು ದಪ್ಪವಾದ ಕಬ್ಬಿಣದ ಸರಪಳಿಯಿಂದ ಕಟ್ಟಿರುವುದು, ಅದೇ ರೀತಿ 4 ಮಕ್ಕಳ ಕೈಯಲ್ಲಿ ಕೊಳ ಹಾಕಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಪ್ರಸಾರವಾಗಿದೆ. ಈ ವಿಷಯವಾಗಿ ಪೊಲೀಸರಿಗೆ ಮಾಹಿತಿ ಸಿಕ್ಕ ನಂತರ ಪೊಲೀಸರು ಈ ಘಟನೆಯ ವಿಚಾರಣೆ ನಡೆಸುತ್ತಿದ್ದಾರೆ. ಅವರು ಮದರಸಾ ಚಾಲಕ ಫಹಿಮುದ್ದಿನ ಇವನನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ಈ ಘಟನೆ ಅಲಿಗಢದ ಮೊಹಲ್ಲಾ ಲಾಡಿಯಾ ಪರಿಸರದಲ್ಲಾಗಿದೆ. ಸ್ಥಳೀಯರ ಪ್ರಕಾರ, ಮದರಸಾದ ಮೌಲಾನಾ (ಇಸ್ಲಾಮಿ ವಿದ್ವಾನ್) ಬಹಳ ಕಠೋರ ಮತ್ತು ಕ್ರೂರಿಯಾಗಿದ್ದಾನೆ. ಆತ ಅನೇಕ ಸಲ ಹುಡುಗರನ್ನು ಹಿಗ್ಗಾಮುಗ್ಗಾ ಹೊಡೆಯುತ್ತಾನೆ ಎಂದು ಹೇಳಿದ್ದಾರೆ.


(ಸೌಜನ್ಯ : IndiaTV News)