ದರಾಂಗ (ಅಸ್ಸಾಂ)ನಲ್ಲಿ ಅತಿಕ್ರಮಣವನ್ನು ತೆರವು ಗೊಳಿಸುವ ಕಾರ್ಯಾಚರಣೆಯಾಗುತ್ತಿರುವಾಗ ಸಾವಿರಾರು ಸಶಸ್ತ್ರ ಮತಾಂಧರಿಂದ ಪೊಲೀಸರ ಮೇಲೆ ದಾಳಿ

 ಪೊಲೀಸರು ಸ್ವರಕ್ಷಣೆಗಾಗಿ ನಡೆಸಿದ ಗುಂಡುಹಾರಾಟದಲ್ಲಿ ಆಕ್ರಮಣಕಾರ ಮತಾಂಧರ ಸಾವು

 ಗಂಭೀರವಾಗಿ ಗಾಯಗೊಂಡ 9 ಜನ ಪೊಲೀಸರು

* ಸರಕಾರೀ ಭೂಮಿಯ ಮೇಲೆ ಅತಿಕ್ರಮಣ ನಡೆಸಿ ಅದರ ಮೇಲೆ ಅದನ್ನು ತೆರವುಗೊಳಿಸಲು ಬಂದ ಪೊಲೀಸರ ಮೇಲೆಯೇ ಮತಾಂಧರು ನಡೆಸಿದ ಸಶಸ್ತ್ರ ಆಕ್ರಮಣ ಎಂದರೆ ಒಂದು ರೀತಿಯಲ್ಲಿ ಚಿಕ್ಕ ಯುದ್ಧವೇ ಆಗಿದೆ, ಎಂಬುದನ್ನು ಗಮನದಲ್ಲಿಟ್ಟುಕೊಳ್ಳಿರಿ ! – ಸಂಪಾದಕರು 

* ಮತಾಂಧರು ಈ ರೀತಿ ಸಂಘಟಿತರಿರುವುದರಿಂದ ಪೊಲೀಸರಿಗೆ ಹಾಗೂ ಆಡಳಿತಕ್ಕೆ ತಲೆನೋವಾಗಿರುವಾಗ, ಅಲ್ಲಿ ಹಿಂದೂಗಳ ಸ್ಥಿತಿ ಏನಾಗುವುದು? – ಸಂಪಾದಕರು 

* ಇಂತಹ ಕಾನೂನುದ್ರೋಹಿ ಮತಾಂಧರ ಮೇಲೆ ಕಾರ್ಯಾಚರಣೆ ನಡೆಸಲು ಕೇಂದ್ರ ಸರಕಾರವು ಅಸ್ಸಾಮ ಸರಕಾರಕ್ಕೆ ಸಹಾಯ ಮಾಡಿ ಮತಾಂಧರ ಹಿಂಸಾತ್ಮಕ ವೃತ್ತಿಯನ್ನು ನಾಶ ಮಾಡಲು ಪ್ರಯತ್ನಿಸಬೇಕು ! – ಸಂಪಾದಕರು 

ದರಾಂಗ (ಅಸ್ಸಾಂ) – ದರಾಂಗ ಜಿಲ್ಲೆಯ ಧೌಲಪುರದಲ್ಲಿ ಅತಿಕ್ರಮಣವನ್ನು ತೆರವುಗೊಳಿಸಲು ಹೋದ ಪಡೆಯ ಮೇಲೆ ಸಾವಿರಾರು ಮತಾಂಧ ಆಂದೋಲನಕಾರರು ಆಕ್ರಮಣ ನಡೆಸಿದ್ದಾರೆ. ಆಗ ಪೊಲೀಸರು ತಮ್ಮ ಸಂರಕ್ಷಣೆಗೋಸ್ಕರ ನಡೆಸಿದ ಗುಂಡು ಹಾರಾಟದಲ್ಲಿ ಸದ್ದಾಮ ಹುಸೇನ ಹಾಗೂ ಶೇಖ ಫರೀದ ಎಂಬ ಇಬ್ಬರು ಮೃತ ಪಟ್ಟಿದ್ದು, ಸಂಪೂರ್ಣ ಹಿಂಸಾಚಾರದಲ್ಲಿ 9 ಜನ ಪೊಲೀಸರು ಗಾಯಗೊಂಡಿದ್ದಾರೆ. ಅವರ ಪೈಕಿ ಕೆಲವರ ಪ್ರಕೃತಿ ಚಿಂತಾಜನಕವಾಗಿದೆ ಎಂದು ಹೇಳಲಾಗುತ್ತಿದೆ. ಅದರಲ್ಲೂ ಪೊಲೀಸ ಉಪ ನಿರೀಕ್ಷಕರಾದ ಮೊನಿರುದ್ದೀನರವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಆಕ್ರಮಣ ನಡೆಸುವವರ ಪೈಕಿ ಹಲವರು ಶಸ್ತ್ರಧಾರಿಗಳಾಗಿದ್ದರು, ಎಂದು ಹೇಳಲಾಗುತ್ತಿದೆ.

ಅತಿಕ್ರಮಣದಿಂದ ನಿರ್ವಸಿತರಾದ 800 ಕುಟುಂಬದವರು ತಮ್ಮ ಪುನರ್‍ವಸತಿಗೋಸ್ಕರ ಆಂದೋಲನ ನಡೆಸುತ್ತಿದ್ದರು. ಆಗ ಆಂದೋಲನಕಾರರು ಉದ್ರೇಕಗೊಂಡು ಪೊಲೀಸರ ಮೇಲೆ ಕಲ್ಲುತೂರಾಟ ಪ್ರಾರಂಭಿಸಿದರು. ಹಾಗೂ ಅವರ ಬಳಿ ಶಸ್ತ್ರಗಳಿದ್ದವು. ಆಗ ಪೊಲೀಸರು ಗುಂಡುಹಾರಾಟ ಮಾಡಿದರು.

ಪೊಲೀಸರು ಸ್ವರಕ್ಷಣೆಗೋಸ್ಕರ ಗುಂಡುಹಾರಾಟ ನಡೆಸಿದರು ! – ಮುಖ್ಯಮಂತ್ರಿ ಹಿಮಂತ ಬಿಸ್ವ ಸರಮಾ

ಮುಖ್ಯಮಂತ್ರಿ ಹಿಮಂತ ಬಿಸ್ವ

ಈ ಘಟನೆಯ ವಿಷಯವಾಗಿ ರಾಜ್ಯದ ಮುಖ್ಯಮಂತ್ರಿಗಳಾದ ಹಿಮಂತ ಬಿಸ್ವ ಸರಮಾರವರು ಪೊಲೀಸರು ಸ್ವರಕ್ಷಣೆಗೋಸ್ಕರ ಗುಂಡುಹಾರಾಟ ಮಾಡಿದರು. ಅದರಲ್ಲಿ ಇಬ್ಬರು ಮೃತ ಪಟ್ಟಿದ್ದು, ಪೊಲೀಸ ಅಧಿಕಾರಿಗಳೊಬ್ಬರು ಗಂಭೀರವಾಗಿ ಗಾಯಗೊಂಡಿದ್ದು ಅವರನ್ನು ಆಸ್ಪತ್ರೆಗೆ ಸೇರಿಸಲಾಗಿದೆ ಎಂದು ಹೇಳಿದ್ದಾರೆ

ಅತಿಕ್ರಮಣವನ್ನು ತೆರವುಗೊಳಿಸುವ ಕೆಲಸ ಮುಂದುವರೆಯಲಿದೆ ! – ಪೊಲೀಸ ಅಧೀಕ್ಷಕರು

ದರಾಂಗದ ಪೊಲೀಸು ಅಧೀಕ್ಷಕರಾದ ಸುಶಾಂತ ಬಿಸ್ವ ಸರಮಾರವರು ನುಡಿದರು, ಶಸ್ತ್ರಧಾರಿ ಆಂದೋಲನಕಾರರು ಹರಿತವಾದ ಅಸ್ತ್ರಗಳಿಂದ ಹಾಗೂ ಕಲ್ಲುಗಳಿಂದ ಪೊಲೀಸರ ಮೇಲೆ ದಾಳಿ ನಡೆಸಿದರು. ಆದ್ದರಿಂದ ಪೊಲೀಸರು ಸ್ವರಕ್ಷಣೆಗೋಸ್ಕರ ಗುಂಡು ಹಾರಿಸಬೇಕಾಯಿತು. ಈ ರೀತಿಯ ಘಟನೆ ನಡೆದಿದ್ದರೂ ಕೂಡ ಅತಿಕ್ರಮಣವನ್ನು ತೆರವುಗೊಳಿಸುವ ಕೆಲಸ ಮುಂದುವರೆಯುವುದು. ಇಲ್ಲಿಯವರೆಗೂ 602 ಹೆಕ್ಟಾರ ಭೂಮಿಯ ಮೇಲಿನ ಅತಿಕ್ರಮಣವನ್ನು ತೆರವುಗೊಳಿಸಲಾಗಿದೆ. (ಇಷ್ಟು ದೊಡ್ಡ ಪ್ರಮಾಣದಲ್ಲಿ ಅತಿಕ್ರಮಣವಾಗುವ ತನಕ ಅಲ್ಲಿಯವರೆಗೂ ಆಡಳಿತಗಾರರು ಹಾಗೂ ಪೊಲೀಸರು ನಿದ್ರಿಸುತ್ತಿದ್ದರೇ ? – ಸಂಪಾದಕರು)

ರಾಹುಲ ಗಾಂಧಿಯಿಂದ ಟೀಕೆ

ರಾಹುಲ ಗಾಂಧಿ

ಕಾಂಗ್ರೆಸ್ಸಿನ ಸಾಂಸದ ರಾಹುಲ ಗಾಂಧಿಯವರು ಟ್ವಿಟ್ ಮಾಡಿ, ಪ್ರಾಯೋಜಿತ ಬೆಂಕಿಯಲ್ಲಿ ಅಸ್ಸಾಮ ಈಗ ಹೊತ್ತಿ ಉರಿಯುತ್ತಿದೆ. ನಾನು ಅಸ್ಸಾಮಿನ ಬಾಂಧವರ ಬೆಂಬಲಕ್ಕಿದ್ದೇನೆ ಎಂದು ಹೇಳಿದ್ದಾರೆ. (ಅತಿಕ್ರಮಣ ನಡೆಸುವ ಮತಾಂಧರ ಬೆನ್ನೆಲುಬಾಗಿರುವ ಕಾಂಗ್ರೆಸ ಹಾಗೂ ಗಾಂಧಿ ಪರಿವಾರದಿಂದ ಇಂದು ದೇಶದಲ್ಲಿ ಮತಾಂಧರ ಅತಿಕ್ರಮಣವಾಗಿದೆ ಹಾಗೂ ಹೆಚ್ಚಾಗಿದೆ ! – ಸಂಪಾದಕರು)

30 ಸಾವಿರ ಎಕರೆ ಭೂಮಿಯ ಮೇಲೆ ಅತಿಕ್ರಮಣ

ಮೂಲಗಳು ನೀಡಿರುವ ಮಾಹಿತಿಗನುಸಾರ ಅಲ್ಲಿ 30 ಸಾವಿರ ಎಕರೆ ಭೂಮಿಯ ಮೇಲೆ ಅತಿಕ್ರಮಣ ನಡೆಸಲಾಗಿದೆ. ಆ ಭೂಮಿಯಲ್ಲಿ 5 ಸಾವಿರ ವರ್ಷ ಪುರಾತನವಾದ ಶಿವನ ದೇವಾಲಯ ಹಾಗೂ ಗುಹೆಯಿದೆ. ಅತಿಕ್ರಮಣ ಮಾಡಿದವರಲ್ಲಿ ಹೆಚ್ಚಿನವರು ಮುಸಲ್ಮಾನರಾಗಿದ್ದಾರೆ. ಸರಕಾರವು ಆಡಳಿತಕ್ಕೆ ಆ ಭೂಮಿಯನ್ನು ಅತಿಕ್ರಮಣದಿಂದ ಮುಕ್ತಗೊಳಿಸುವಂತೆ ಆದೇಶ ನೀಡಿದ ಬಳಿಕ ಅಲ್ಲಿ ಕಾರ್ಯಾಚರಣೆ ಮಾಡಲಾಯಿತು. ‘ಸರಕಾರವು ಅತಿಕ್ರಮಣವನ್ನು ತೆರವುಗೊಳಿಸಿ ಪುನರ್‍ವಸತಿಗೊಳಿಸುವ ಆಶ್ವಾಸನೆ ನೀಡಿತ್ತು’, ಎಂಬುದು ಮತಾಂಧರ ಹೇಳಿಕೆಯಾಗಿದೆ.