ಲಕ್ಷದ್ವೀಪದ ಶಾಲೆಗಳಲ್ಲಿ ಮಧ್ಯಾಹ್ನದ ಊಟದಲ್ಲಿ ಮಾಂಸಾಹಾರಿ ಪದಾರ್ಥಗಳನ್ನು ತೆಗೆದಿರುವ ವಿರೋಧದಲ್ಲಿ ಮಾಡಿರುವ ಮನವಿಯನ್ನು ನಿರಾಕರಿಸಿದ ಕೇರಳ ಉಚ್ಚ ನ್ಯಾಯಾಲಯ !

ಮೇ 2021 ರಲ್ಲಿ ಲಕ್ಷದ್ವೀಪ ಸರಕಾರವು ಈ ಆದೇಶವನ್ನು ನೀಡಿತ್ತು !

ಈಗ ಸಾಮ್ಯವಾದಿಗಳು, ಜಾತ್ಯಾತೀತರು ಮುಂತಾದವರು ನ್ಯಾಯಾಲಯದ ಕೇಸರಿಕರಣ ಆಗಿದೆ ಎಂದು ಆರೋಪಿಸಲು ಆರಂಭಿಸಿದರೆ ಆಶ್ಚರ್ಯ ಪಡಬೇಕಿಲ್ಲ ! – ಸಂಪಾದಕರು

ತಿರುವನಂತಪುರಂ (ಕೇರಳ) – ಲಕ್ಷದ್ವೀಪದ ಶಾಲೆಗಳಲ್ಲಿ ಮಧ್ಯಾಹ್ನ ಊಟದಿಂದ ಮಾಂಸಹಾರಿ ಪದಾರ್ಥಗಳನ್ನು ತೆಗೆಯಲು, ಹಾಗೂ ಹಾಲಿನ ಕೇಂದ್ರವನ್ನು (ಡೇರಿ ಫಾರಂ) ಮುಚ್ಚಲು ಲಕ್ಷದ್ವೀಪ ಸರಕಾರವು ತೆಗೆದುಕೊಂಡಿರುವ ನಿರ್ಣಯದ ವಿರುದ್ಧ ಕೇರಳ ಉಚ್ಚ ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸಲ್ಲಿಸಲಾಗಿತ್ತು. ನ್ಯಾಯಾಲಯವು ಅದನ್ನು ತಿರಸ್ಕರಿಸಿದೆ, `ಸರಕಾರವು ತೆಗೆದುಕೊಂಡಿರುವ ನಿರ್ದಿಷ್ಟ ನಿರ್ಣಯದಲ್ಲಿ ಯಾರೂ ಹಸ್ತಕ್ಷೇಪ ಮಾಡಬಾರದು’, ಎಂದು ಸ್ಪಷ್ಟಪಡಿಸಿದೆ.

ಲಕ್ಷದ್ವೀಪ ಸರಕಾರವು 21 ಮೆ 2021 ರಂದು ಕೇಂದ್ರಾಡಳಿತ ಪ್ರದೇಶದ ಶಾಲೆಗಳಲ್ಲಿ ಮಧ್ಯಾಹ್ನ ಊಟದ ಆಹಾರಪದಾರ್ಥಗಳ ಪಟ್ಟಿಯಿಂದ ಮಾಂಸಹಾರವನ್ನು ತೆಗೆದುಹಾಕಿತ್ತು. ಹಾಗೂ ಅಲ್ಲಿ ಹಾಲಿನ ಕೇಂದ್ರವನ್ನು ಮುಚ್ಚುವ ಆದೇಶವನ್ನು ನೀಡಿತ್ತು. ಇದರ ವಿರುದ್ಧ ಕೇರಳದಲ್ಲಿ ಸೌಮ್ಯವಾದಿ ಸರಕಾರ, ಅದೇ ರೀತಿ ದೇಶದಲ್ಲಿನ ಜಾತ್ಯಾತೀತರು ವಿಷಕಾರುತ್ತಾ ‘ಲಕ್ಷದ್ವೀಪದ ಸಂಸ್ಕೃತಿಯ ಮೇಲೆ ಆಘಾತ ಮಾಡುವಂತಹ ಪ್ರಯತ್ನಗಳಾಗುತ್ತಿವೆ, ಹಾಗೂ ಕೇಂದ್ರ ಸರಕಾರದಿಂದ ಲಕ್ಷದ್ವೀಪವನ್ನು ಕೇಸರಿಕರಣಗೊಳಿಸುವ ಪ್ರಯತ್ನವಾಗುತ್ತಿದೆ’, ಎಂದು ಆರೋಪಿಸಿದ್ದರು. ಸರಕಾರದ ಆದೇಶದ ವಿರುದ್ಧ ಲಕ್ಷದ್ವೀಪ ಬಾರ್ ಅಸೋಸಿಯೇಷನ್ ನ್ಯಾಯವಾದಿ ಅಜಮಲ ಅಹಮದ್ ಇವರು ಉಚ್ಚ ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿಯ ಮನವಿ ನೀಡಿದ್ದರು. ಕೇರಳದ ಮುಖ್ಯ ನ್ಯಾಯಾಧೀಶ ನ್ಯಾಯಮೂರ್ತಿ ಎಸ್. ಮಣಿಕುಮಾರ ಮತ್ತು ನ್ಯಾಯಮೂರ್ತಿ ಶಾಜಿ ಪಿ .ಚಾಲಿ ಇವರ ಖಂಡ ಪೀಠವು ಈ ಮನವಿಯನ್ನು ನಿರಾಕರಿಸಿದೆ