ಮಹಂತ ನರೇಂದ್ರ ಗಿರಿ ಇವರ ಮೃತ್ಯು ಪ್ರಕರಣದ ತನಿಖೆ ಸಿಬಿಐ ವಶಕ್ಕೆ

ಪ್ರಯಾಗರಾಜ (ಉತ್ತರಪ್ರದೇಶ) – ಅಖಿಲ ಭಾರತೀಯ ಅಖಾಡಾ ಪರಿಷತ್ತಿನ ಅಧ್ಯಕ್ಷ ಮಹಂತ ನರೇಂದ್ರ ಗಿರಿ ಇವರ ಸಾವಿನ ತನಿಖೆಯನ್ನು ಕೇಂದ್ರೀಯ ತನಿಖಾ ದಳ (‘ಸಿಬಿಐ’ಗೆ) ಒಪ್ಪಿಸಲಾಗಿದೆ. ಸಿಬಿಐನಿಂದ ಈ ಪ್ರಕರಣದಲ್ಲಿ ಒಂದು ಅಪರಾಧವನ್ನು ಸಹ ನೋಂದಾಯಿಸಲಾಗಿದೆ. ಈ ಪ್ರಕರಣದ ತನಿಖೆಗಾಗಿ 6 ಸದಸ್ಯರ ತಂಡವನ್ನು ರಚಿಸಲಾಗಿದೆ. ಈವರೆಗೆ ಉತ್ತರಪ್ರದೇಶ ಪೊಲೀಸರ ವಿಶೇಷ ತನಿಖಾ ದಳದಿಂದ ಈ ಪ್ರಕರಣದ ತನಿಖೆ ನಡೆಯುತ್ತಿತ್ತು; ಆದರೆ ಕೆಲವು ಸಂತರು ಮತ್ತು ಮಹಂತರು ಈ ಪ್ರಕರಣದ ತನಿಖೆಯನ್ನು ಸಿಬಿಐನಿಂದ ನಡೆಸಬೇಕು ಎಂದು ಒತ್ತಾಯಿಸಿದ್ದರು, ಅದಕ್ಕನುಸಾರ ಈ ನಿರ್ಣಯ ತೆಗೆದುಕೊಳ್ಳಲಾಗಿದೆ ಎಂದು ಹೇಳಲಾಗಿದೆ.