ಕಾಶ್ಮೀರಿ ನಾಯಕ ಸುಶೀಲ ಪಂಡಿತ ಇವರ ಮೇಲಿನ ಆರೋಪ ರದ್ದು !

ಸುಶೀಲ ಪಂಡಿತ

ಜಮ್ಮು – ದೆಹಲಿಯಲ್ಲಿ ಮೇ 21, 2018 ರಂದು ಒಂದು ಸಮ್ಮೇಳನವನ್ನು ಆಯೋಜಿಸಲಾಗಿತ್ತು. ಅದರಲ್ಲಿ ಒಬ್ಬ ನಾಯಕನು ಕಾಶ್ಮೀರದ ಬಾರಾಮುಲ್ಲಾದಲ್ಲಿ ಉಗ್ರರ ದಾಳಿಯಲ್ಲಿ 5 ಯೋಧರು ಹುತಾತ್ಮರಾದರು ಎಂದು ಹೇಳಿದ ನಂತರ ಕಾಶ್ಮೀರ ನಾಯಕ ಸುಶೀಲ ಪಂಡಿತ ಇವರು ಟ್ವೀಟ್ ಮಾಡಿದ್ದರು, ಆದರೆ ವಾಸ್ತವದಲ್ಲಿ ಆ ರೀತಿಯ ಘಟನೆ ನಡೆದಿರಲಿಲ್ಲ. ಆದ್ದರಿಂದ ಪಂಡಿತ ಇವರು ಟ್ವೀಟ್‍ಅನ್ನು ‘ಡಿಲಿಟ’ ಮಾಡಿದ್ದರು. ಆದರೆ ಮೊದಲೇ ಪಂಪೊರ ಪೊಲೀಸ್ ಠಾಣೆಯಲ್ಲಿ ಪಂಡಿತ ವಿರುದ್ಧ ಅಪರಾಧವನ್ನು ದಾಖಲಿಸಲಾಗಿತ್ತು. ಪಂಡಿತ ಇವರು ಈ ಅಪರಾಧವನ್ನು ರದ್ದು ಪಡಿಸುವಂತೆ ಜಮ್ಮು ಉಚ್ಚ ನ್ಯಾಯಾಲಯದಲ್ಲಿ ಬೇಡಿಕೆ ಸಲ್ಲಿಸಿದ್ದರು. ಅದನ್ನು ಅಂಗಿಕರಿಸಿ ಅಪರಾಧವನ್ನು ರದ್ದು ಪಡಿಸಲು ಉಚ್ಚ ನ್ಯಾಯಾಲಯವು ಆದೇಶಿಸಿದೆ.