ಅಯೋಧ್ಯೆ (ಉತ್ತರಪ್ರದೇಶ) ದಲ್ಲಿ ದೇವಸ್ಥಾನದ ಮೂರನೆಯ ಮಹಡಿಯಿಂದ ಬಿದ್ದು ಸಾಧು ಮಣಿರಾಮ ದಾಸ ಇವರ ಮೃತ್ಯು

ಅನುಮಾನಾಸ್ಪದ ಮೃತ್ಯುವೆಂಬ ಸಂದೇಹದಿಂದ ಪೊಲೀಸರಿಂದ ವಿಚಾರಣೆ ಪ್ರಾರಂಭ

ಸಾಧು ಮಣಿರಾಮ ದಾಸ

ಅಯೋಧ್ಯೆ (ಉತ್ತರಪ್ರದೇಶ) : ಇಲ್ಲಿನ ಶ್ರೀರಾಮ ಮಂತ್ರಾರ್ಥ ಮಂಡಪಮ್ ದೇವಸ್ಥಾನದ ಮೂರನೆಯ ಮಹಡಿಯಿಂದ ಕೆಳಗೆ ಬಿದ್ದು ಮಣಿರಾಮ ದಾಸ ಎಂಬ ಸಾಧುವು ಮೃತಪಟ್ಟಿದ್ದಾರೆ. ಪೊಲೀಸರು ಈ ಮೃತ್ಯುವಿನ ಅನ್ವೇಷಣೆಯನ್ನು ಪ್ರಾರಂಭಿಸಿದ್ದಾರೆ. ಇದು ಹತ್ಯೆಯೋ, ಆತ್ಮಹತ್ಯೆಯೋ ಅಥವಾ ಅಪಘಾತವೋ ಎಂದು ಕಂಡುಹಿಡಿಯಲು ಪೊಲೀಸರು ಪ್ರಯತ್ನಿಸುತ್ತಿದ್ದಾರೆ. ಮೃತರಾಗುವ ಕೆಲವು ದಿನಗಳ ಹಿಂದಿನಿಂದ ಮಣಿರಾಮ ದಾಸರು ಜನರೊಂದಿಗೆ ಮಾತನಾಡುವುದನ್ನು ಕಡಿಮೆ ಮಾಡಿದ್ದರು. ಅವರು ಒತ್ತಡದಲ್ಲಿರುವಂತೆ ತೋರುತ್ತಿತ್ತು. ಅವರು ಮಾತನ್ನು ಸಹ ಕಮ್ಮಿ ಮಾಡಿದ್ದರು. ಪೊಲೀಸರು ಈ ಪ್ರಕರಣದಲ್ಲಿ ದೇವಸ್ಥಾನದ ಇತರ ಇಬ್ಬರು ಸಾಧುಗಳನ್ನು ವಿಚಾರಣೆ ಮಾಡುತ್ತಿದ್ದಾರೆ.