ದಕ್ಷಿಣ ಭಾರತದಲ್ಲಿ ಇಸ್ಲಾಮಿಕ್ ಸ್ಟೇಟನಿಂದ ‘ಇಸ್ಲಾಮಿ ಖಿಲಾಫತ್ ‘ನ್ನು  ಸ್ಥಾಪಿಸುವ ಷಡ್ಯಂತ್ರ ಬಹಿರಂಗ!

ಎನ್ಐಎನಿಂದ ಓರ್ವ ಇಸಿಸ್ ನ ಭಯೋತ್ಪಾದಕನ ವಿರುದ್ಧ ಆರೋಪ ಪತ್ರವನ್ನು ದಾಖಲು

ಮತಾಂಧ ಯುವಕರಿಗೆ ಹಿಂದುತ್ವನಿಷ್ಠ ನೇತಾರರ ಮತ್ತು ಪೊಲೀಸ್ ಅಧಿಕಾರಿಗಳ ಹತ್ಯೆಯ ತರಬೇತಿ

* ಜಿಹಾದಿ ಭಯೋತ್ಪಾದಕರಿಂದ ಭಾರತವನ್ನು ‘ಇಸ್ಲಾಮಿಸ್ಥಾನಗೊಳಿಸಲು ನಿರಂತರವಾಗಿ ಪ್ರಯತ್ನ, ದೇಶವನ್ನು ಇವರ ಹಿಡಿತದಿಂದ ಉಳಿಸಲು ಹಿಂದೂರಾಷ್ಟ್ರದ ಸ್ಥಾಪನೆ ಅವಶ್ಯಕ ! – ಸಂಪಾದಕರು 

* ‘ಭಯೋತ್ಪಾದನೆಗೆ ಧರ್ಮವಿಲ್ಲ’ ಎಂದು ಹೇಳುವ ಜಾತ್ಯತೀತ, ಸಾಮ್ಯವಾದಿ ಮತ್ತು ಕಾಂಗ್ರೆಸ್ಸಿಗೆ ಈಗ ಏನಾದರೂ ಹೇಳಲಿಕ್ಕಿದೆಯೇ ?- ಸಂಪಾದಕರು 

ನವದೆಹಲಿ – ರಾಷ್ಟ್ರೀಯ ಅನ್ವೇಷಣಾ ವಿಭಾಗ (ಎನ್ಐಎ)ವು ಇಸ್ಲಾಮಿಕ್ ಸ್ಟೇಟ್ ನ (ಇಸಿಸ್) ‘ಅಲ್-ಹಿಂದ್’ ಗುಂಪಿಗೆ ಸೇರಿದ ಶಿಹಾಬುದ್ದೀನ ಎಂಬ ಭಯೋತ್ಪಾದಕನ ವಿರುದ್ಧ ಇತ್ತೀಚೆಗೆ ಆರೋಪ ಪತ್ರವನ್ನು ದಾಖಲಿಸಿದೆ. ಈ ಅನ್ವೇಷಣೆಯಲ್ಲಿ ದಕ್ಷಿಣ ಭಾರತದಲ್ಲಿ ‘ಇಸ್ಲಾಮಿ ಖಿಲಾಫತ್’ ಸ್ಥಾಪಿಸುವ ಪ್ರಯತ್ನವು ನಡೆಯುತ್ತಿದೆ ಎಂಬುದು ಬಹಿರಂಗವಾಗಿದೆ. ‘ಟೈಮ್ಸ್ ನೌ’ ಎಂಬ ಆಂಗ್ಲ ವಾರ್ತಾ ವಾಹಿನಿಯು ನೀಡಿದ ಮಾಹಿತಿಗನುಸಾರ ಈ ಆರೋಪ ಪತ್ರದಲ್ಲಿ ‘ಇಸಿಸ್ ನ ಭಯೋತ್ಪಾದಕರು ದಕ್ಷಿಣದಲ್ಲಿನ ಕರ್ನಾಟಕ ಮತ್ತು ತಮಿಳುನಾಡು ರಾಜ್ಯಗಳಲ್ಲಿ ಅನೇಕಬಾರಿ ಸಭೆಗಳನ್ನು ನಡೆಸಿದ್ದಾರೆ. ಇವುಗಳ ಮಾಧ್ಯಮದಿಂದ ಪೊಲೀಸ್ ಅಧಿಕಾರಿಗಳು ಮತ್ತು ಹಿಂದುತ್ವನಿಷ್ಠ ನೇತಾರರ ಹತ್ಯೆಗಾಗಿ ಶಸ್ತ್ರ ಮತ್ತು ಸ್ಪೋಟಕಗಳನ್ನು ಸಂಗ್ರಹಿಸುವ ಷಡ್ಯಂತ್ರವನ್ನು ರಚಿಸಲಾಗಿತ್ತು.

1. ವಿಶೇಷ ಉಪನಿರೀಕ್ಷಕರಾದ ಎ.  ವಿಲ್ಸನ್ ರವರ ಹತ್ಯೆಯ  ಪ್ರಕರಣದಲ್ಲಿ ‘ಎನ್ಐಎ’ಯು ಜನವರಿ 2021ರಲ್ಲಿ ಚೆನ್ನೈಯ 39 ವರ್ಷದ ಶಿಹಾಬುದ್ಧಿನನನ್ನು ಬಂಧಿಸಿತ್ತು. ವಿಲ್ಸನರನ್ನು ಕೊಲ್ಲಲು ಶಿಹಾಬುದ್ದೀನ ಮತ್ತು ಅವನ ಸಹಚರರು ಬಂದೂಕು ಮತ್ತು ಸ್ಪೋಟಕಗಳನ್ನು ಬಳಸಿದ್ದರು. ಈ ಹತ್ಯೆಯ ಪ್ರಕರಣದಲ್ಲಿ 6 ಆರೋಪಿಗಳ ವಿರುದ್ಧ ಆರೋಪ ಪತ್ರವನ್ನು ಸಲ್ಲಿಸಲಾಗಿದೆ.

2. ಬೆಂಗಳೂರಿನ ಗುರಪ್ಪನಪಾಳ್ಯದಲ್ಲಿ ವಾಸಿಸುವ ಮಹಬೂಬ್ ಪಾಷಾ ಮತ್ತು ಖಾಜಾ ಮೋಯಿದಿನ ಇವರು ದಕ್ಷಿಣ ಭಾರತದಲ್ಲಿನ ಮುಸಲ್ಮಾನ ಯುವಕರನ್ನು ಸೇರಿಸಿ ‘ ಅಲ್ – ಹಿಂದ ‘ ಎಂಬ ಇಸಿಸ್ ಗೆ ಸಂಬಂಧಿಸಿದ ಭಯೋತ್ಪಾದನಾ ಗುಂಪನ್ನು ರಚಿಸಿದ್ದರು. ಈ ಯುವಕರಿಗೆ ಹಿಂದುತ್ವನಿಷ್ಠ ನೇತಾರರು ಮತ್ತು ಪೊಲೀಸ್ ಅಧಿಕಾರಿಗಳನ್ನು ಕೊಲ್ಲಲು ಕಾಡಿನಲ್ಲಿ ತರಬೇತಿಯನ್ನು ನೀಡಲಾಗಿತ್ತು. ಹತ್ಯೆಯ ನಂತರ ಅವರಿಗೆ ಆಶ್ರಯ ಪಡೆಯಲು ವಿವಿಧ ರಾಜ್ಯಗಳಲ್ಲಿನ ಸುರಕ್ಷಿತ ಪ್ರದೇಶಗಳನ್ನು ಆಯ್ಕೆ ಮಾಡಲಾಗಿತ್ತು. ಇವುಗಳಲ್ಲಿ ಮಹಾರಾಷ್ಟ್ರದಲ್ಲಿನ ರತ್ನಾಗಿರಿಯೂ ಇರುವುದು ಬೆಳಕಿಗೆ ಬಂದಿದೆ.

3. ಈ ಪ್ರಕರಣದಲ್ಲಿ ‘ಎನ್ಐಎ’ಯು ಇಸಿಸ್ ಗೆ ಸಂಬಂಧಿಸಿದ 25 ಸಂಶಯಿತರನ್ನು ಗುರುತಿಸಿದೆ. ಅವರು ಅಪಘಾನಿಸ್ತಾನದಲ್ಲಿ ಇದ್ದು ಅಲ್ಲಿನ ಆಡಳಿತ ಬದಲಾವಣೆಯ ನಂತರ ಈಗ ಜಿಹಾದಿಗಾಗಿ ಭಾರತೀಯರನ್ನು ಆನ್ ಲೈನ್ ನೇಮಕಾತಿ ಮಾಡಲು ಪ್ರಯತ್ನಿಸುತ್ತಿದ್ದಾರೆ’ ಎಂದು ಹೇಳಲಾಗುತ್ತದೆ.