‘ಭಾರತವನ್ನು ‘ಪಾಕಿಸ್ತಾನ’ ಅಥವಾ ‘ತಾಲಿಬಾನ’ ಆಗಲು ಬಿಡುವುದಿಲ್ಲ(ವಂತೆ) !’ – ಮಮತಾ ಬ್ಯಾನರ್ಜೀ

ಬಂಗಾಳವು ಬಾಂಗ್ಲಾದೇಶವಾಗುವುದರ ಕಡೆ ಮಾರ್ಗಕ್ರಮಣ ಮಾಡುತ್ತಿದೆ. ಆದ್ದರಿಂದ ಮಮತಾ ಬ್ಯಾನರ್ಜೀಯವರ ಹೇಳಿಕೆಯು, ಹಾಸ್ಯಾಸ್ಪದವಾಗಿದೆ! ಮಮತಾ ಬ್ಯಾನರ್ಜೀಯವರಿಗೆ ದೇಶಕ್ಕಾಗಿ ಏನಾದರೂ ಮಾಡಬೇಕೆಂದು ಅನಿಸುತ್ತಿದ್ದಲ್ಲಿ, ಅವರು ಬಂಗಾಳದಲ್ಲಿರುವ ಬಾಂಗ್ಲಾದೇಶೀ ನುಸುಳುಕೋರರನ್ನು ಒದ್ದೋಡಿಸುವ ಅವಶ್ಯಕತೆಯಿದೆ ! – ಸಂಪಾದಕರು 

ಕೊಲಕತಾ (ಬಂಗಾಳ) – ಬಂಗಾಳವು ಭಾರತವನ್ನು ರಕ್ಷಿಸಲಿದೆ ಹಾಗೂ ಭಾರತವನ್ನು ‘ಪಾಕಿಸ್ತಾನ’ ಅಥವಾ ‘ತಾಲಿಬಾನ’ವಾಗಲು ಬಿಡುವುದಿಲ್ಲ; ಏಕೆಂದರೆ ಇದು ರವೀಂದ್ರನಾಥ ಟಾಗೋರ ಹಾಗೂ ರಾಷ್ಟ್ರೀಯ ಕವಿ ನಝರೂಲ ಇಸ್ಲಾಮರವರ ಭೂಮಿಯಾಗಿದೆ. ಆದ್ದರಿಂದ ಇಲ್ಲಿ ಎಲ್ಲಾ ಸಮುದಾಯದ ಜನರು ಒಟ್ಟಾಗಿ ಇರುತ್ತಾರೆ, ಎಂದು ಬಂಗಾಳದ ಮುಖ್ಯಮಂತ್ರಿಗಳಾದ ಮಮತಾ ಬ್ಯಾನರ್ಜೀಯವರು ಹೇಳಿದ್ದಾರೆ. ಅವರು ಭವಾನಿಪುರದ ಉಪ ಚುನಾವಣೆಯ ಮೊದಲು ಆಯೋಜಿಸಲಾದ ಪ್ರಸಾರ ಸಭೆಯಲ್ಲಿ ಮಾತನಾಡುತ್ತಿದ್ದರು. ಭವಾನೀಪುರದಲ್ಲಿ ಶೇಕಡ 40ರಷ್ಟು ಜನಸಂಖ್ಯೆ ಬಂಗಾಳದ ಹೊರಗಿನವರಾಗಿದ್ದಾರೆ. ತೃಣಮೂಲ ಕಾಂಗ್ರೆಸ್‍ನ ಪ್ರಮುಖರಾದ ಮಮತಾ ಬ್ಯಾನರ್ಜೀಯವರು ಭವಾನಿಪುರದಿಂದ ಚುನಾವಣೆಗೆ ಸ್ಪರ್ಧಿಸುತ್ತಿದ್ದು ಅವರ ವಿರುದ್ಧ ಭಾಜಪದ ನ್ಯಾಯವಾದಿ ಪ್ರಿಯಾಂಕಾ ಟಿಬರೀವಾಲರವರು ಅಭ್ಯರ್ಥಿಯಾಗಿದ್ದಾರೆ. ಸಪ್ಟೆಂಬರ 30 ರಂದು ಅಲ್ಲಿ ಮತದಾನ ನಡೆಯಲಿದೆ. ಕೆಲವು ತಿಂಗಳ ಹಿಂದೆ ಬಂಗಾಳದಲ್ಲಿ ನಡೆದ ಮತದಾನದಲ್ಲಿ ಮಮತಾ ಬ್ಯಾನರ್ಜೀಯವರು ನಂದಿಗ್ರಾಮದಿಂದ ಚುನಾವಣೆಗೆ ನಿಂತಿದ್ದರು. ಆ ಚುನಾವಣೆಯಲ್ಲಿ ಅವರು ಭಾಜಪದ ಸುವೆಂದೂ ಅಧಿಕಾರಿಯವರ ಎದುರು ಸೋತಿದ್ದರು. ಅನಂತರ ಭವಾನಿಪುರದಿಂದ ಗೆದ್ದು ಬಂದ ತೃಣಮೂಲ ಕಾಂಗ್ರೆಸನ ಸೋವನದೇವ ಚಟ್ಟೋಪಾಧ್ಯೆಯವರು ತಮ್ಮ ಶಾಸಕಸ್ಥಾನಕ್ಕೆ ರಾಜೀನಾಮೆ ನೀಡಿರುವುದರಿಂದ ಆ ಸ್ಥಾನವು ಖಾಲಿಯಾಗಿದೆ. ಆದ್ದರಿಂದ ಅಲ್ಲಿ ಉಪ ಚುನಾವಣೆ ನಡೆಯಲಿದೆ. ಸಂವಿಧಾನದ ನಿಯಮಕ್ಕನುಸಾರ ನವೆಂಬರ 7 ರ ಒಳಗೆ ಮಮತಾ ಬ್ಯಾನರ್ಜೀಯವರು ಶಾಸಕರಾಗಿ ಆರಿಸಿ ಬರುವುದು ಅಗತ್ಯವಾಗಿರುವುದರಿಂದ ಅವರು ಈ ಚುನಾವಣೆಯಲ್ಲಿ ಗೆಲ್ಲುವುದು ಅನಿವಾರ್ಯವಾಗಿದೆ.