2019 ನೇ ಇಸವಿಯ ತುಲನೆಯಲ್ಲಿ 2020 ರಲ್ಲಿ ಅಪರಾಧಗಳ ಇಳಿತದ ಪ್ರಮಾಣ ಅಲ್ಪ!

ಸೈಬರ್ ಅಪರಾಧಗಳಲ್ಲಿ ಮಾತ್ರ ದೊಡ್ಡ ಪ್ರಮಾಣದಲ್ಲಿ ಹೆಚ್ಚಳ !

ಅಲ್ಪಪ್ರಮಾಣದಲ್ಲಿ ಅಲ್ಲ ದೇಶದಲ್ಲಿನ ಅಪರಾಧ ಬೇರು ಸಹಿತ ನಾಶವಾಗಬೇಕು. ಇದಕ್ಕಾಗಿ ಕಠಿಣ ಕಾನೂನು ಹಾಗೂ ತಕ್ಷಣವೇ ಶಿಕ್ಷೆಯಾಗುವ ವ್ಯವಸ್ಥೆಯು ನಿರ್ಮಾಣವಾಗಬೇಕು ! ಹಾಗೆಯೇ ಅಪರಾಧಿ ವೃತ್ತಿಯೇ ನಿರ್ಮಾಣವಾಗಬಾರದೆಂದು, ಪ್ರತಿಯೊಬ್ಬರಿಗೂ ಧರ್ಮಶಿಕ್ಷಣ ಕೊಟ್ಟು ಸುಸಂಸ್ಕಾರಿತಗೊಳಿಸುವ ಅವಶ್ಯಕತೆಯಿದೆ. ಇದು ಕೇವಲ ಹಿಂದೂ ರಾಷ್ಟ್ರದಲ್ಲಿ ಮಾತ್ರ ಸಾಧ್ಯವಿದೆ; ಹಾಗಾಗಿ ಅದರ ಸ್ಥಾಪನೆ ಅನಿವಾರ್ಯವಾಗಿದೆ ! – ಸಂಪಾದಕರು 

ನವದೆಹಲಿ – ರಾಷ್ಟ್ರೀಯ ಅಪರಾಧ ದಾಖಲಾತಿ ಇಲಾಖೆಯಿಂದ 2020 ಸಾಲಿನಲ್ಲಿ ದೇಶದಲ್ಲಿನ ಅಪರಾಧ ಸಂದರ್ಭದಲ್ಲಿನ ವರದಿಯನ್ನು ಪ್ರಸಿದ್ಧ ಮಾಡಲಾಗಿದೆ. ಇದರಲ್ಲಿ 2019ರ ತುಲನೆಯಲ್ಲಿ ಮಹಿಳೆ ಮತ್ತು ಮಕ್ಕಳ ಇವರ ಸಂದರ್ಭದಲ್ಲಿನ ಅಪರಾಧ ಸ್ವಲ್ಪಮಟ್ಟಿಗೆ ಕಡಿಮೆಯಾಗಿರುವುದು ಕಂಡುಬರುತ್ತದೆ.

ಅಪಹರಣಗಳ ಪ್ರಕರಣ ಇಳಿಕೆ

2019 ಇಸವಿಯ ತುಲನೆಯಲ್ಲಿ 2020 ರಲ್ಲಿ ಅಪಹರಣಗಳ ಸಂಖ್ಯೆಯಲ್ಲಿ ಇಳಿಕೆಯಾಗಿದೆ. 2020 ರಲ್ಲಿ 84 ಸಾವಿರ 805 ಇದ್ದಿತ್ತು ಆದರೆ 2019 ರಲ್ಲಿ ಅದು 1 ಲಕ್ಷ 5 ಸಾವಿರ 36 ರಷ್ಟು ಇತ್ತು

ದೇಶದಲ್ಲಿ ಪ್ರತಿದಿನ 77 ಬಲಾತ್ಕಾರದ ಘಟನೆಗಳು !

ಈ ವರದಿಯ ಪ್ರಕಾರ 2020 ರಲ್ಲಿ ದೇಶಾದ್ಯಂತ ಒಟ್ಟು 66 ಲಕ್ಷ 1 ಸಾವಿರ 285 ಅಪರಾಧಗಳು ದಾಖಲಾಗಿವೆ; ಅದರಲ್ಲಿ ಪ್ರತಿದಿನ ಸರಾಸರಿ 77 ಅಪರಾಧಗಳು ಬಲಾತ್ಕಾರದ್ದಾಗಿದ್ದವು. ಇಡೀ ವರ್ಷದಲ್ಲಿ ಒಟ್ಟು 28 ಸಾವಿರ 46 ಬಲಾತ್ಕಾರದ ಅಪರಾಧಗಳು ದಾಖಲಾಗಿವೆ. ಇದರಲ್ಲಿ 25 ಸಾವಿರ 498 ಸಂತ್ರಸ್ತರು ಪ್ರೌಢರು ಹಾಗೂ 2 ಸಾವಿರ 655 ಅಪ್ರಾಪ್ತ ಹುಡುಗಿಯರಿದ್ದರು. ಇದೇ ಸಂಖ್ಯೆ 2019 ರಲ್ಲಿ ಅನುಕ್ರಮವಾಗಿ 32 ಸಾವಿರ 33, ಹಾಗೂ 2018 ರಲ್ಲಿ 33 ಸಾವಿರ 356 ಆಗಿತ್ತು. (ಬಲಾತ್ಕಾರಿಗಳಿಗೆ ಕೂಡಲೇ ಶಿಕ್ಷೆಯಾಗದೆ ಇರುವುದರಿಂದಲೇ ಬಲಾತ್ಕಾರದ ಘಟನೆಗಳಲ್ಲಿ ಹೆಚ್ಚಳವಾಗುತ್ತಿದೆ, ಇದು ಇಲ್ಲಿಯವರೆಗೆ ಎಲ್ಲಾ ಪಕ್ಷದ ಆಡಳಿತಗಾರರಿಗೆ ನಾಚಿಕೆಗೇಡಿನ ಸಂಗತಿ! – ಸಂಪಾದಕರು)

ಸೈಬರ್ ಅಪರಾಧಗಳಲ್ಲಿ ಹೆಚ್ಚಳ !

ಇಂಟರನೆಟ್ ನ ಮಾಧ್ಯಮದಿಂದಾಗುವ ಅಪರಾಧಗಳಲ್ಲಿ ಮಾತ್ರ 2020 ರಲ್ಲಿ ಹೆಚ್ಚಳವಾಗಿದೆ. 2019ರಲ್ಲಿ 44 ಸಾವಿರ 735, ಹಾಗೂ 2021 ರಲ್ಲಿ 50 ಸಾವಿರದ 35 ರಷ್ಟು ಸಂಖ್ಯೆಯಲ್ಲಿ ಅಪರಾಧಗಳು ದಾಖಲಾಗಿದ್ದವು. ಅದರಲ್ಲಿ 30 ಸಾವಿರ 142 ಪ್ರಕರಣಗಳು ಮೋಸಗಾರಿಕೆಯದ್ದಾಗಿದ್ದವು.

ಸರಕಾರಿ ಆದೇಶ ಉಲ್ಲಂಘನೆಯಲ್ಲಿ ಪ್ರಚಂಡ ಪ್ರಮಾಣದಲ್ಲಿ ಏರಿಕೆ

ಸರಕಾರದ ಆದೇಶಗಳನ್ನು ಉಲ್ಲಂಘಿಸುವುದರಲ್ಲಿ ಪ್ರಚಂಡ ಪ್ರಮಾಣದಲ್ಲಿ ಏರಿಕೆಯಾಗಿದೆ, 2020 ರಲ್ಲಿ ಒಟ್ಟು 6 ಲಕ್ಷ 12 ಸಾವಿರ 179 ಅಪರಾಧಗಳು ದಾಖಲಾಗಿವೆ, 2019 ರಲ್ಲಿ ಈ ಸಂಖ್ಯೆ ಕೇವಲ 29 ಸಾವಿರ 469 ರಷ್ಟಿತ್ತು. ಕೊರೊನಾದ ನಿಯಮಗಳ ಉಲ್ಲಂಘನೆಯಿಂದ ಈ ಸಂಖ್ಯೆ ಹೆಚ್ಚಾಗಿದೆ ಎಂದು ಹೇಳಲಾಗುತ್ತಿದೆ.