ತಜಿಕಿಸ್ತಾನ ಹಾಗೂ ಉಜ್ಬೇಕಿಸ್ತಾನ ದೇಶದೊಳಗೆ ನುಗ್ಗಲು ಸಜ್ಜಾಗಿರುವ ಇಸ್ಲಾಮಿಕ್ ಸ್ಟೇಟನ 10 ಸಾವಿರ ಭಯೋತ್ಪಾದಕರು!

ಯುದ್ಧವಾಹನ ಕಳುಹಿಸಿದ ರಷ್ಯಾ !

ನವ ದೆಹಲಿ – ತಾಲಿಬಾನನ ರಾಜ್ಯವಿರುವ ಅಫ್ಘಾನಿಸ್ತಾನದಲ್ಲಿ ಈಗ ಜಿಹಾದಿ ಭಯೋತ್ಪಾದಕರಿಗೆ ಸ್ವಚ್ಛಂದವಾದ ಜಾಗ ಸಿಕ್ಕಿದಂತಾಗಿದೆ. ಅಫ್ಘಾನಿಸ್ತಾನ ಹಾಗೂ ಮಧ್ಯ ಏಷಿಯಾ ದೇಶಗಳ ಗಡಿಗಳಲ್ಲಿ ಇಸ್ಲಾಮಿಕ್ ಸ್ಟೇಟನ ಭಯೋತ್ಪಾದಕರಿದ್ದಾರೆ. ಇಸ್ಲಾಮಿಕ್ ಸ್ಟೇಟನ 10 ಸಾವಿರ ಭಯೋತ್ಪಾದಕರು ರಷ್ಯಾದೊಳಗೆ ನುಗ್ಗಲು ಪ್ರಯತ್ನಿಸುತ್ತಿದ್ದಾರೆಂಬ ಮಾಹಿತಿಯನ್ನು ರಷ್ಯಾವು ನೀಡಿದೆ. ಈ ಭಯೋತ್ಪಾದಕರು ತಜಿಕಿಸ್ತಾನ ಹಾಗೂ ಉಜ್ಬೇಕಿಸ್ತಾನ ದೇಶಗಳ ಒಳಗೆ ನುಗ್ಗುವ ತಂತ್ರ ರೂಪಿಸುತ್ತಿದ್ದಾರೆ, ಎಂದು ಹೇಳಲಾಗುತ್ತಿದೆ. ಆದ್ದರಿಂದ ರಷ್ಯಾವು ತಜಿಕಿಸ್ತಾನಕ್ಕೆ 30 ಅತ್ಯಾಧುನಿಕ ಯುದ್ಧವಾಹನಗಳನ್ನು ಕಳುಹಿಸಿದೆ ಎಂದು ಹೇಳಲಾಗುತ್ತಿದೆ.

ರಷ್ಯಾವು ತನ್ನ ಅತಿ ದೊಡ್ಡ ಶತ್ರುವೆಂದು ಇಸ್ಲಾಮಿಕ್ ಸ್ಟೇಟ ಪರಿಗಣಿಸಿದೆ. ಇಸ್ಲಾಮಿಕ್ ಸ್ಟೇಟ ಅನ್ನು ಸಂಹಾರ ಮಾಡಲು ರಷ್ಯಾವು ಸಿರಿಯಾದಲ್ಲಿ ಅನೇಕ ಬಾರಿ ವಾಯು ದಾಳಿ ನಡೆಸಿತ್ತು. ಈಗ ತಜಿಕಿಸ್ತಾನದ ಗಡಿಯಲ್ಲಿ ಇಸ್ಲಾಮಿಕ್ ಸ್ಟೆಟನ 10 ಸಾವಿರ ಭಯೋತ್ಪಾದಕರು ಒಟ್ಟು ಸೇರಿದ್ದಾರೆ. ರಷ್ಯಾ ನಡೆಸಿದ ವಾಯು ದಾಳಿಯ ಸೇಡನ್ನು ತೀರಿಸಿಕೊಳ್ಳಲು ಈ ಭಯೋತ್ಪಾದಕರು ಅಫ್ಘಾನಿಸ್ತಾನದ ಗಡಿ ದಾಟಿ ತಜಿಕಿಸ್ತಾನ ಹಾಗೂ ಉಜ್ಬೇಕಿಸ್ತಾನದ ಮಾರ್ಗವಾಗಿ ರಷ್ಯಾದೊಳಗೆ ನುಗ್ಗಬಹುದು, ಎಂದು ಪುತಿನರಿಗೆ ಚಿಂತೆಯಿದೆ.