ಪಾಕಿಸ್ತಾನದಲ್ಲಿ ಮತಾಂಧರಿಂದ ಹಿಂದೂ ಯುವತಿಯ ಮೇಲೆ 3 ತಿಂಗಳು ಸಾಮೂಹಿಕ ಅತ್ಯಾಚಾರ ಹಾಗೂ ನಂತರ ಬಲವಂತವಾಗಿ ಮತಾಂತರ!

ಭಾರತ ಸರಕಾರವು ಪಾಕಿಸ್ತಾನದಲ್ಲಿ ಹಿಂದೂಗಳ ಮೇಲಾಗುತ್ತಿರುವ ಅತ್ಯಾಚಾರಗಳನ್ನು ತಡೆಯಲು ಯಾವಾಗ ಕ್ರಮ ಕೈಗೊಳ್ಳಲಿದೆ?- ಸಂಪಾದಕರು 

ನವ ದೆಹಲಿ – ಪಾಕಿಸ್ತಾನದ ಸಿಂಧ್ ಪ್ರಾಂತ್ಯದಲ್ಲಿ ಸಶಸ್ತ್ರ ಮತಾಂಧರು ಓರ್ವ ಹಿಂದೂ ಯುವತಿಯನ್ನು ಅಪಹರಿಸಿ ಅವಳ ಮೇಲೆ ಸತತ 3 ತಿಂಗಳು ಸಾಮೂಹಿಕವಾಗಿ ಅತ್ಯಾಚಾರ ನಡೆಸಿದರು. ಅನಂತರ ಅವಳನ್ನು ಬಲವಂತವಾಗಿ ಮತಾಂತರಗೊಳಿಸಿ ಮುಸಲ್ಮಾನಳನ್ನಾಗಿಸಲಾಯಿತು. ಮುಂದೆ ಅವಳು ಅವರ ಹಿಡಿತದಿಂದ ತಪ್ಪಿಸಿಕೊಳ್ಳಲು ಯಶಸ್ವಿಯಾದಳು; ಆದರೆ ಇನ್ನೂ ಆಡಳಿತವು ಅವಳನ್ನು ಅವಳ ಪೋಷಕರಿಗೆ ಒಪ್ಪಿಸಿಲ್ಲ. ಅವಳ ಪೋಷಕರು ತಮ್ಮ ಮಗಳನ್ನು ಮರಳಿ ಪಡೆದುಕೊಳ್ಳಲು ಪ್ರಯತ್ನಿಸುತ್ತಿದ್ದಾರೆ; ಆದರೆ ಪಾಕಿಸ್ತಾನದ ಕಾಯಿದೆಯಿಂದ ಅದು ಸಹಜವಾಗಿ ಸಾಧ್ಯವಿಲ್ಲ, ಎಂಬ ಮಾಹಿತಿಯನ್ನು ದಕ್ಷಿಣ ಕೊರಿಯಾದಲ್ಲಿನ ಪಾಕಿಸ್ತಾನ ವಂಶದ ಮಾನವಾಧಿಕಾರ ಕಾರ್ಯಕರ್ತ ನ್ಯಾಯವಾದಿಗಳಾದ ರಾಹತ ಆಸ್ಟಿನರವರು ಟ್ವಿಟ್ ಮಾಡಿ ನೀಡಿದ್ದಾರೆ. (ವಿದೇಶದಲ್ಲಿರುವ ಮಾನವಾಧಿಕಾರ ಕಾರ್ಯಕರ್ತರಿಗೆ ಮಾಹಿತಿ ಸಿಗುತ್ತದೆ. ಆದರೆ ಭಾರತದಲ್ಲಿನ ವಾರ್ತಾವಾಹಿನಿಗಳಲ್ಲಿ ಮಾತ್ರ ಅದು ಏಕೆ ಪ್ರಸಾರ ಆಗಲ್ಲಿ.? ವಾಸ್ತವದಲ್ಲಿ ಭಾರತ ಸರಕಾರವು ಕೇವಲ ಪಾಕಿಸ್ತಾನ ಅಷ್ಟೇ ಅಲ್ಲ, ಜಗತ್ತಿನಾದ್ಯಂತವಿರುವ ಯಾವುದೇ ಹಿಂದೂವಿನ ಮೇಲೆ ಅತ್ಯಾಚಾರ ನಡೆದರೂ ಅದರ ಮಾಹಿತಿಯನ್ನು ವಿವಿಧ ಮಾಧ್ಯಮಗಳಿಂದ ಹಿಂದೂಗಳಿಗೆ ನೀಡಬೇಕು ಹಾಗೂ ಸಂಬಂಧಪಟ್ಟವರಿಗೆ ನ್ಯಾಯ ದೊರಕಿಸಿ ಕೊಡಲು ಏನು ಮಾಡಲಿದ್ದಾರೆ, ಎಂಬುದನ್ನು ಸಹ ಹೇಳಬೇಕು ! – ಸಂಪಾದಕರು)