ಪ್ರಖರ ಹಿಂದುತ್ವನಿಷ್ಠ ಹಾಗೂ ಶ್ರೀರಾಮ ಸೇನೆಯ ಸಂಸ್ಥಾಪಕ ಪ್ರಮೋದ ಮುತಾಲಿಕ ಮತ್ತು ಅವರ ಸಹಚರರ ಗೋವಾ ಪ್ರವೇಶ ನಿರ್ಬಂಧ ಎರಡು ತಿಂಗಳು ಹೆಚ್ಚಿಸಲಾಗಿದೆ

ಪ್ರಮೋದ ಮುತಾಲಿಕ

ಪಣಜಿ (ಗೋವಾ ) – ಪ್ರಖರ ಹಿಂದುತ್ವನಿಷ್ಠ ಹಾಗೂ ಶ್ರೀರಾಮ ಸೇನೆಯ ಸಂಸ್ಥಾಪಕ ಶ್ರೀ. ಪ್ರಮೋದ ಮುತಾಲಿಕ ಮತ್ತು ಅವರ ಸಹಚರರಿಗೆ ಗೋವಾ ಪ್ರವೇಶ ನಿರ್ಬಂಧವನ್ನು ಇನ್ನು ಎರಡು ತಿಂಗಳು ಹೆಚ್ಚಿಸಲಾಗಿದೆ. ರಾಜ್ಯಾಡಳಿತದ ಗೃಹ ಇಲಾಖೆಯು ಈ ಆದೇಶವನ್ನು ಹೊರಡಿಸಿದೆ. ಶ್ರೀ. ಪ್ರಮೋದ ಮುತಾಲಿಕ ಮತ್ತು ಅವರ ಸಹಚರನನ್ನು ಗೋವಾ ಪ್ರವೇಶ ನಿರ್ಬಂಧ ಆದೇಶದ ಕಾಲಾವದಿಯು 6 ಸೆಪ್ಟೆಂಬರ ರಂದು ಮುಗಿಯುವುದಿತ್ತು ಆದ್ದರಿಂದ ಈಗ ಮತ್ತೆ ಹೊಸ ಪ್ರವೇಶ ನಿರ್ಬಂಧ ಆದೇಶವನ್ನು ಹೊರಡಿಸಲಾಗಿದೆ. ಈ ಆದೇಶ ಸೆಪ್ಟಂಬರ 6 ರಿಂದ ಜಾರಿಯಾಗಲಿದೆ. ಪ್ರವೇಶ ನಿರ್ಬಂಧದ ಆದೇಶದಲ್ಲಿ ಗೃಹಖಾತೆಯು, “ಪ್ರಖರ ಹಿಂದುತ್ವನಿಷ್ಠ ಪ್ರಮೋದ ಮುತಾಲಿಕ ಮತ್ತು ಅವರ ಸಹಚರರ ಗೋವಾ ಪ್ರವೇಶದಿಂದ ಗೋವಾದಲ್ಲಿ ಉದ್ವಿಗ್ನ ವಾತಾವರಣ ಉಂಟಾಗುವ ಸಾಧ್ಯತೆಯನ್ನು ನಿರಾಕರಿಸಲಾಗದು. ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ಪ್ರವೇಶ ನಿರ್ಬಂಧ ಹೆಚ್ಚಿಸಲಾಗಿದೆ” ಎಂದು ಹೇಳಿದೆ. (ರಾಷ್ಟ್ರೀಯ ತನಿಖಾ ದಳವು ಭಯೋತ್ಪಾದಕ ಚಟುವಟಿಕೆಗಳಲ್ಲಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಇದರ ಕೈವಾಡವಿದೆ ಎಂದು ಶಿಫಾರಸ್ಸು ಮಾಡಿದ್ದರೂ ಅವರ ಗೋವಾದಲ್ಲಿನ ಕಾರ್ಯದಿಂದ ಕಾನೂನು ಮತ್ತು ಸುವ್ಯವಸ್ಥೆ ಹಾಳಾಗುತ್ತದೆ ಎಂದು ಅನಿಸುವುದಿಲ್ಲ ಎಂಬುದನ್ನು ಅರಿತುಕೊಳ್ಳಿ. – ಸಂಪಾದಕರು)

ಪ್ರಖರ ಹಿಂದುತ್ವನಿಷ್ಠ ಶ್ರೀ. ಪ್ರಮೋದ ಮುತಾಲಿಕ ಮತ್ತು ಅವರ ಸಹಚರರ ಇವರ ಮೇಲೆ 19 ಆಗಸ್ಟ್ 2014 ರಿಂದ ಗೋವಾದಲ್ಲಿ ಪ್ರವೇಶ ನಿರ್ಬಂಧ ಹೇರಲಾಗಿತ್ತು. ಆರಂಭದಲ್ಲಿ ಈ ಪ್ರವೇಶ ನಿರ್ಬಂಧ ಆರು ತಿಂಗಳಿಗೆ ಎಂದು ಹೇಳಲಾಗಿತ್ತು ಮತ್ತು ಪ್ರತಿಬಾರಿಯೂ ಹೆಚ್ಚಿಸಲಾಗುತ್ತಿದೆ.