ಭಾರತದ ಪ್ರಧಾನಮಂತ್ರಿಗಳಾದ ನರೇಂದ್ರ ಮೋದಿಯವರ ವಿರುದ್ಧದ ಆಂದೋಲನವನ್ನು ಸಹಿಸಿಕೊಳ್ಳಲು ಸಾಧ್ಯವಿಲ್ಲ ! – ನಾಗರಿಕರಿಗೆ ನೇಪಾಳ ಸರಕಾರದ ಎಚ್ಚರಿಕೆ

ಕಾಠಮಾಂಡೂ (ನೇಪಾಳ) – ಭಾರತದ ಪ್ರಧಾನಮಂತ್ರಿಗಳಾದ ನರೇಂದ್ರ ಮೋದಿಯವರ ಪುತ್ತಳಿಯನ್ನು ಸುಡುವುದು ಹಾಗೂ ಅವರನ್ನು ವಿರೋಧಿಸುವಂತಹ ಕೃತ್ಯ ಮಾಡಿ ಆಂದೋಲನ ಮಾಡುವವರಿಗೆ ನೇಪಾಳ ಸರಕಾರವು ಎಚ್ಚರಿಕೆ ನೀಡಿದೆ. ‘ನೇಪಾಳವು ಭಾರತದೊಂದಿಗೆ ಸ್ನೇಹ ಸಂಬಂಧವಿಟ್ಟುಕೊಳ್ಳಲು ಇಚ್ಛಿಸುತ್ತಿರುವುದರಿಂದ ಸರಕಾರವು ಅಂತಹ ಘಟನೆಗಳನ್ನು ಸಹಿಸಿಕೊಳ್ಳುವುದಿಲ್ಲ’, ಎಂದು ನೇಪಾಳದ ಸಾಮ್ಯವಾದಿ ಸರಕಾರವು ನುಡಿದಿದೆ.

ಕೆಲವು ದಿನಗಳ ಹಿಂದೆ ನೇಪಾಳದ ಗಡಿಯಲ್ಲಿ ಜಯಸಿಂಹ ಧಾಮೀ ಎಂಬ ಹೆಸರಿನ ಯುವಕನು ನದಿ ದಾಟಿ ಭಾರತದೊಳಗೆ ನುಗ್ಗಲು ಪ್ರಯತ್ನಿಸುತ್ತಿದ್ದನು. ಅವನು ತಂತಿಯ ಸಹಾಯದಿಂದ ನದಿ ದಾಟುತ್ತಿರುವಾಗ ಆ ತಂತಿಯನ್ನು ಕತ್ತರಿಸಿದುದರಿಂದ ನದಿಗೆ ಬಿದ್ದು ಅದರಲ್ಲಿ ಮುಳುಗಿ ಮರಣ ಹೊಂದಿದನು. ಭಾರತೀಯ ಸಶಸ್ತ್ರ ಸೈನ್ಯದಳದ ಅಧಿಕಾರಿಯು ಆ ತಂತಿಯನ್ನು ಕತ್ತರಿಸಿದಾರೆಂದು ನೇಪಾಳದ ನಾಗರಿಕರು ಆರೋಪಿಸಿದ್ದು ಪ್ರಧಾನಮಂತ್ರಿ ಮೋದಿಯವರ ಪುತ್ತಳಿಯನ್ನು ಸುಡಲು ಪ್ರಯತ್ನಿಸಿದರು. ಸಶಸ್ತ್ರ ದಳವು ಮಾತ್ರ ತಮ್ಮ ಅಧಿಕಾರಿಗಳು ಯಾರೂ ಆ ರೀತಿಯ ಕೃತ್ಯ ಮಾಡಿಲ್ಲವೆಂದು ಆ ಆರೋಪವನ್ನು ತಳ್ಳಿ ಹಾಕಿದ್ದಾರೆ. ನೇಪಾಳದ ಗೃಹಮಂತ್ರಾಲಯವು ನೇಪಾಳದ ಪರಂಪರೆಯಂತೆ ಅಕ್ಕಪಕ್ಕದ ದೇಶಗಳೊಂದಿಗೆ ಜಗಳವಾಡುವುದರ ಬದಲು ಚರ್ಚಿಸಿ ಅದನ್ನು ನಿವಾರಿಸಲು ಪ್ರಯತ್ನಿಸಲಾಗುವುದು. ಭವಿಷ್ಯದಲ್ಲಿಯೂ ಇದೇ ಈ ರೀತಿಯ ವಿವಾದಗಳನ್ನು ಪರಿಹರಿಸಬಹುದು ಎಂದು ಹೇಳಿದೆ.