ದೆಹಲಿಯಲ್ಲಿ ಉಗ್ರರ ದಾಳಿಯ ಸಾಧ್ಯತೆಯಿದೆ ಎಂದು ಇಸ್ರೈಲನ ರಾಯಭಾರಿ ಕಚೇರಿಯ ಭದ್ರತೆಯಲ್ಲಿ ಹೆಚ್ಚಳ

ನವ ದೆಹಲಿ -ಇಲ್ಲಿ ಜಿಹಾದಿ ಉಗ್ರರಿಂದ ದಾಳಿಯಾಗುವ ಸಾಧ್ಯತೆಯ ಮೇರೆಗೆ ಇಸ್ರೇಲಿನ ರಾಯಭಾರಿ ಕಚೇರಿಯ ಹೊರಗೆ ಭದ್ರತೆಯನ್ನು ಹೆಚ್ಚಿಸಲಾಗಿದೆ. ಗೂಢಚಾರ ವಿಭಾಗವು ಕೊಟ್ಟಿರುವ ಮಾಹಿತಿಯ ಆಧಾರದ ಮೇಲೆ ಮುಂಜಾಗರೂಕತಾ ಕ್ರಮವನ್ನು ತೆಗೆದುಕೊಳ್ಳಲಾಗಿದೆ. ಸಪ್ಟೆಂಬರ್ 6 ರಂದು ಇಸ್ರೈಲೀ ಜನರು ಹೊಸವರ್ಷದ ಸ್ವಾಗತ ಮಾಡುತ್ತಾರೆ. ಈ ಹಿನ್ನಲೆಯಲ್ಲಿ ದಾಳಿಯ ಸಾಧ್ಯತೆಯಿದೆ ಎಂಬ ಸಂದೇಹದಿಂದ ಭದ್ರತೆಯನ್ನು ಹೆಚ್ಚಿಸಲಾಗಿದೆ.