ಪ್ರಧಾನಿ ನರೇಂದ್ರ ಮೋದಿಯವರು ವಿಶ್ವದ ಅತ್ಯಂತ ಜನಪ್ರಿಯ ನಾಯಕ !

ಅಮೆರಿಕಾ, ಯುನೈಟೆಡ್ ಕಿಂಗ್‍ಡಮ್, ರಶಿಯಾ ಮುಂತಾದ 13 ಪ್ರಮುಖ ದೇಶದ ನಾಯಕರನ್ನು ಹಿಂದಿಕ್ಕಿದ್ದಾರೆ !

ಪ್ರಧಾನ ಮಂತ್ರಿ ನರೇಂದ್ರ ಮೋದಿ

ನವದೆಹಲಿ – ಕೆನಡಾ, ಅಮೇರಿಕಾ, ಬ್ರೆಝಿಲ್, ಯುನೈಟೆಡ್ ಕಿಂಗ್‍ಡಮ್, ಫ್ರಾನ್ಸ್, ಜರ್ಮನಿ, ರಶಿಯಾ ಮತ್ತು ಆಸ್ಟ್ರೇಲಿಯಾ ಈ ದೇಶಗಳ ಸಹಿತ ಹದಿಮೂರು ದೇಶಗಳಲ್ಲಿನ ನಾಯಕರ ತುಲನೆಯಲ್ಲಿ ಪ್ರಧಾನಿ ಮೋದಿ ಇವರು ಹೆಚ್ಚು ಜನಪ್ರಿಯರು ಎಂಬುದು ಒಂದು ಸಮೀಕ್ಷೆಯಿಂದ ತಿಳಿದುಬಂದಿದೆ. ಅಮೇರಿಕಾದ ‘ಮಾರ್ನಿಂಗ್ ಕನ್ಸಲ್ಟ್’ ಎಂಬ ಸಂಸ್ಥೆಯು ಈ ಸಮೀಕ್ಷೆಯನ್ನು ನಡೆಸಿದೆ. ಈ ಸಮೀಕ್ಷೆಯಲ್ಲಿ ಪ್ರಧಾನಿ ಮೋದಿ ಅವರು ಶೇ. 70 % ದಷ್ಟು ಅಂಕಗಳನ್ನು ಗಳಿಸಿದ್ದಾರೆ. ಪ್ರತಿವಾರ ಈ ಸಮೀಕ್ಷೆಯ ಮಾಹಿತಿಯನ್ನು ಪುನರಾವಲೋಕನ ಮಾಡಲಾಗುತ್ತದೆ.

1. ಸಮೀಕ್ಷೆಯ ಅಂಕಿಅಂಶಗಳ ಪ್ರಕಾರ, ಪ್ರಧಾನಿ ಮೋದಿಯವರು ಕಳೆದವಾರದ ಸಮೀಕ್ಷೆಯಲ್ಲಿ ನಡೆಸಿರುವ 13 ಜಾಗತಿಕ ನಾಯಕರಲ್ಲಿ ಮೊದಲನೇ ಸ್ಥಾನದಲ್ಲಿದ್ದರು. ಈ ವರ್ಷದ ಜೂನ್ ತಿಂಗಳಲ್ಲಿ ಅವರ ಗುಣಾಂಕ ಶೇ. 66 ರಷ್ಟು ಇತ್ತು. ಆಗಸ್ಟ್ 2019 ರಲ್ಲಿ ಮೋದಿಯವರ ಗುಣಾಂಕ ನಿವ್ವಳ ಶೇ. 82 ರಷ್ಟು ಇತ್ತು. ಆದರೆ ಕಳೆದ ಎರಡು ವರ್ಷದಿಂದ ಇದರಲ್ಲಿ ಇಳಿಕೆ ಕಂಡುಬಂದಿದೆ.

2. ಪ್ರಧಾನಿ ನರೇಂದ್ರ ಮೋದಿ ಇವರ ಜನಪ್ರಿಯತೆ ಮಧ್ಯವಯಸ್ಕರಲ್ಲಿ ಎಲ್ಲಕ್ಕಿಂತ ಕಡಿಮೆ ಇರುವುದು ಸಮೀಕ್ಷೆಯಿಂದ ತಿಳಿದುಬಂದಿದೆ. ಭಾರತದಲ್ಲಿ ಸಮೀಕ್ಷೆ ಮಾಡಿದಾಗ ಮಧ್ಯವಯಸ್ಕರ ಪೈಕಿ ಶೇ. 25 ರಷ್ಟು ಜನರು ಮೋದಿ ಅವರನ್ನು ನಿರಾಕರಿಸಿದ್ದಾರೆ.