ಅಫ್ಘಾನ್ ನಾಗರಿಕರಿಗೆ ದೇಶ ಬಿಟ್ಟು ಹೋಗಲು ಅನುಮತಿ ಕೊಡುವುದಿಲ್ಲ ! – ತಾಲಿಬಾನ್

ಕಾಬುಲ್ (ಅಫ್ಘಾನಿಸ್ತಾನ) – ಅಫ್ಘಾನಿಸ್ತಾನವನ್ನು ತಾಲಿಬಾನಿಗಳು ನಿಯಂತ್ರಣ ಪಡೆದ ನಂತರ ಲಕ್ಷಗಟ್ಟಲೆ ಅಫ್ಘಾನ್ ನಾಗರಿಕರು ದೇಶಬಿಟ್ಟು ಹೋಗಲು ಪ್ರಯತ್ನಿಸುತ್ತಿದ್ದಾರೆ. ಆದ್ದರಿಂದ ಕಾಬುಲ್ ವಿಮಾನ ನಿಲ್ದಾಣದಲ್ಲಿ ದೊಡ್ಡ ಪ್ರಮಾಣದ ಜನಜಂಗುಳಿ ಉಂಟಾಗಿದೆ. ಈವರೆಗೆ ಸಾವಿರಾರು ಅಫ್ಘಾನ್ ನಾಗರಿಕರು ದೇಶ ಬಿಟ್ಟು ಬೇರೆ ದೇಶಗಳಲ್ಲಿ ನಿರಾಶ್ರಿತರಾಗಿ ತಲುಪಿದ್ದಾರೆ. ಆದ್ದರಿಂದ ತಾಲಿಬಾನಿಗಳು ಅಫ್ಘಾನ್ ನಾಗರಿಕರಿಗೆ ದೇಶಬಿಟ್ಟು ಹೋಗದಂತೆ ಎಚ್ಚರಿಕೆಯನ್ನು ನೀಡಿದ್ದಾರೆ. ‘ಇನ್ನು ಯಾವುದೇ ಅಫ್ಘಾನ್ ನಾಗರಿಕರಿಗೆ ದೇಶಬಿಟ್ಟು ಹೋಗಲು ಅನುಮತಿ ಕೊಡುವುದಿಲ್ಲ’, ಎಂದು ತಾಲಿಬಾನ್ ಹೇಳಿದೆ.

ತಾಲಿಬಾನದ ವಕ್ತ್ತಾರ ಜಬಿಉಲ್ಲಾಹ ಮುಜಾಹಿದ್ ಇವನು, ಕಾಬುಲ್ ವಿಮಾನ ನಿಲ್ದಾಣದ ಕಡೆ ಹೋಗುವ ಎಲ್ಲ ಮಾರ್ಗಗಳನ್ನು ಬಂದ್ ಮಾಡಲಾಗಿದೆ. ಅಫ್ಘಾನ್ ನಾಗರಿಕರು ಈ ಮಾರ್ಗದಿಂದ ವಿಮಾನ ನಿಲ್ದಾಣಕ್ಕೆ ಹೋಗಲಾರರು. ಆದರೆ ವಿದೇಶಿ ನಾಗರಿಕರಿಗೆ ಮಾತ್ರ ವಿಮಾನ ನಿಲ್ದಾಣಕ್ಕೆ ಹೋಗುವ ಅನುಮತಿ ನೀಡಲಾಗಿದೆ ಎಂದು ಹೇಳಿದ್ದಾನೆ.