ಅಫಘಾನಿಸ್ತಾನದಿಂದ ಅಮೇರಿಕಾಗೆ ಕರೆತಂದ ಅಫಘಾನಿ ನಾಗರಿಕರಲ್ಲಿ ಸಾವಿರಾರು ಭಯೋತ್ಪಾದಕರು ! ಡೊನಾಲ್ಡ್ ಟ್ರಂಪ್‌ರವರ ದಾವೆ

‘ಭಾರತದಲ್ಲಿ ಕೂಡ ಇದೇ ರೀತಿ ಆಗಿರಲಿಕ್ಕಿಲ್ಲವಲ್ಲ ? ಎಂಬುದನ್ನು ಭಾರತೀಯ ಸುರಕ್ಷಾ ವ್ಯವಸ್ಥೆಯವರು ಪರಿಶೀಲಿಸಿ ನೋಡುವುದು ಅಗತ್ಯ!

ವಾಶಿಂಗ್‌ಟನ್ (ಅಮೇರಿಕಾ) – ಅಫಘಾನಿಸ್ತಾನದಿಂದ ಅಫಘಾನಿ ನಾಗರಿಕರನ್ನು ದೇಶದ ಹೊರಗೆ ಕರೆತಂದು ಅವರಿಗೆ ಅಮೇರಿಕಾದಲ್ಲಿ ಆಶ್ರಯ ನೀಡಲಾಗಿದೆ; ಆದರೆ ಅವರನ್ನು ಅಮೇರಿಕಾಗೆ ಕರೆತರುವಾಗ ಸಾವಿರಾರು ತಾಲಿಬಾನಿ ಭಯೋತ್ಪಾದಕರು ಅಲ್ಲಿಂದ ಹೊರಗೆ ಬಂದಿರ ಬಹುದು, ಒಂದು ವೇಳೆ ಹಾಗಿದ್ದರೆ ಅಮೇರಿಕಾಗೆ ಮುಂಬರುವ ದಿನಗಳು ತುಂಬಾ ಕಠಿಣವಾಗಿರುತ್ತದೆ, ಎಂದು ಅಮೇರಿಕಾದ ಮಾಜಿ ರಾಷ್ಟ್ರಾಧ್ಯಕ್ಷರಾದ ಡೊನಾಲ್ಡ್ ಟ್ರಂಪ್ ಇವರು ಹೇಳಿಕೆಯನ್ನು ನೀಡಿದ್ದಾರೆ.

ಡೊನಾಲ್ಡ್ ಟ್ರಂಪ್ ಇವರು ಮುಂದೆ, ಅಫಘಾನಿಸ್ತಾನದಿಂದ ಹೊರಗೆ ಕರೆತಂದ ೨೬ ಸಾವಿರ ನಾಗರಿಕರಲ್ಲಿ ಅಮೇರಿಕಾದ ನಾಗರಿಕರು ಕೇವಲ ೪ ಸಾವಿರ ಜನರು ಮಾತ್ರ ಇದ್ದಾರೆ ಎಂಬ ಮಾಹಿತಿ ನನಗೆ ಸಿಕ್ಕಿದೆ. ಈ ರೀತಿ ಸಾವಿರಾರು ಭಯೋತ್ಪಾದಕರನ್ನು ಹೊರಗೆ ತೆಗೆದಿರಬಹುದು ಎಂಬ ಬಗ್ಗೆ ನಾವು ಕಲ್ಪನೆ ಮಾಡಬಹುದು. ಹಾಗೂ ಅವರ ವಿಚಾರಣೆ ಸಹ ನಡೆಯುವುದಿಲ್ಲ. ರಾಷ್ಟ್ರಾಧ್ಯಕ್ಷರಾದ ಜೋ ಬಾಯ್‌ಡೆನ್ ಈ ರೀತಿ ಎಷ್ಟು ಉಗ್ರಗಾಮಿಗಳನ್ನು ಅಮೇರಿಕಾದ ಒಳಗೆ ತಂದಿದ್ದಾರೆ, ಎಂಬುದು ತಿಳಿದಿಲ್ಲ ಎಂದು ಹೇಳಿದ್ದಾರೆ.