‘ತಾಲಿಬಾನಿಗಳು ಬಂದು ಕಾಶ್ಮೀರವನ್ನು ಗೆದ್ದು ಪಾಕಿಸ್ತಾನಕ್ಕೆ ನೀಡುವರು !’(ಅಂತೆ)

ಪಾಕ ಆಡಳಿತ ಪಕ್ಷದ ನಾಯಕಿ ನೀಲಂ ಇರ್ಷಾದ್ ಶೇಖ ಇವರ ವಿಷಕಾರಿ ಹೇಳಿಕೆ !

ಪಾಕಿಸ್ತಾನಕ್ಕೆ ‘ಕಾಶ್ಮೀರ’ ಎಂದರೆ ಅಫ್ಘಾನಿಸ್ತಾನ ಎಂದೆನಿಸಿದೆಯೇ ? ಇಂತಹ ಪಾಕಿಸ್ತಾನಕ್ಕೆ ಪಾಠ ಕಲಿಸಲು ಇದೇ ಸರಿಯಾದ ಸಮಯವಾಗಿದ್ದು ಅದಕ್ಕೆ ಭಾರತ ಸರಕಾರ ಯೋಗ್ಯವಾದ ಹೆಜ್ಜೆಯನ್ನಿಡಬೇಕು.

ಇಸ್ಲಾಮಾಬಾದ್ (ಅಫ್ಘಾನಿಸ್ತಾನ) – ಪಾಕಿಸ್ತಾನದ ಪ್ರಧಾನಮಂತ್ರಿ ಇಮ್ರಾನ್ ಖಾನ್ ಇವರ ಪಕ್ಷವು ‘ತಹರಿಕ- ಎ- ಇನ್ಸಾಫ್’ನಿಂದ ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಅಧಿಕಾರಕ್ಕೆ ಬಂದ ನಂತರ ಸಂತೋಷವನ್ನು ವ್ಯಕ್ತಪಡಿಸಲಾಗುತ್ತಿದೆ. ಈಗ ಇದೇ ಪಕ್ಷದ ನಾಯಕಿ ನೀಲಂ ಇರ್ಷಾದ್ ಶೇಖ ಇವರು ‘ಇನ್ನು ತಾಲಿಬಾನಿಗಳು ಬರುವರು ಮತ್ತು ಕಾಶ್ಮೀರವನ್ನು ಗೆದ್ದು ಅದನ್ನು ಪಾಕಿಸ್ತಾನಕ್ಕೆ ಕೊಡುವರು’, ಎಂದು ಒಂದು ಖಾಸಗಿ ದೂರದರ್ಶನದ ವಾಹಿನಿಯಲ್ಲಿ ಚರ್ಚಿಸುವಾಗ ಹೇಳಿಕೆಯನ್ನು ನೀಡಿದರು. ಈ ಮೊದಲು ತಾಲಿಬಾನ್ ಮತ್ತು ಪಾಕ್‌ನ ಗುಪ್ತಚರ ಸಂಸ್ಥೆ ಐ.ಎಸ್.ಐ ಇವರಲ್ಲಿ ಸಂಬಂಧವಿದೆ ಎಂದು ಹೇಳಲಾಗುತ್ತಿದ್ದ ವಿಷಯವು ಇರ್ಷಾದ್ ಶೇಖ ಇವರ ಈ ಹೇಳಿಕೆಯಿಂದ ಇನ್ನೂ ಸ್ಪಷ್ಟವಾಗುತ್ತದೆ.

೧. ಇರ್ಷಾದ್ ಇವರು, ಇಮ್ರಾನ್ ಖಾನ್ ಇವರ ಸರಕಾರ sಸ್ಥಾಪನೆಯಾದ ನಂತರ ಪಾಕಿಸ್ತಾನದ ಗೌರವ ಹೆಚ್ಚಾಗಿದೆ. ತಾಲಿಬಾನಿಗಳು ‘ನಾವು ನಿಮ್ಮ ಜೊತೆ ಇದ್ದೇವೆ’, ಎಂದು ಹೇಳುತ್ತಾರೆ. ಈಗ ಅವರು ನಮಗೆ ಕಾಶ್ಮೀರವನ್ನು ವಶಪಡಿಸಿಕೊಂಡು ಕೊಡುವವರು ಎಂದರು

೨. ಕೆಲವು ದಿನಗಳ ಹಿಂದೆ ಇಮ್ರಾನ್ ಖಾನ್ ಇವರು ‘ಅಫ್ಘಾನಿಸ್ತಾನದಲ್ಲಿ ರಕ್ತದ ಓಕುಳಿಯಾಡುವವರು ತಾಲಿಬಾನಿಗಳು ಭಯೋತ್ಪಾದಕರಲ್ಲ ಅವರು ಸಾಮಾನ್ಯ ನಾಗರಿಕರಾಗಿದ್ದಾರೆ. ಅಮೆರಿಕಾವೇ ಅಫ್ಘಾನಿಸ್ತಾನವನ್ನು ಸಂಪೂರ್ಣವಾಗಿ ನಷ್ಟ ಮಾಡಿದೆ’, ಎಂದು ಹೇಳಿದ್ದರು.

ಪಾಕ್ ತಾಲಿಬಾನಿಗೆ ಸಹಾಯ ಮಾಡಿರುವುದರಿಂದ ಈಗ ಅವರು ನಮಗೆ ಸಹಾಯ ಮಾಡುವರು !

‘ತಾಲಿಬಾನಿಗಳು ನಿಮಗೆ ಕಾಶ್ಮೀರವನ್ನು ಗೆದ್ದು ಕೊಡುವರು’, ಎಂದು ನಿಮಗೆ ಯಾರು ಹೇಳಿದರು’, ಎಂಬ ಪ್ರಶ್ನೆಯ ಬಗ್ಗೆ ಇರ್ಷಾದ್ ಇವರು, ಭಾರತವು ನಮ್ಮನ್ನು ವಿಭಜನೆ ಮಾಡಿದೆ; ಈಗ ನಾವು ಮತ್ತೆ ಒಂದಾಗುವೆವು. ನಮ್ಮ ಸೈನ್ಯಕ್ಕೆ ತಾಲಿಬಾನ್ ಸಹಾಯ ಮಾಡುತ್ತಿದೆ; ಯಾಕಂದರೆ ಅವರ ಮೇಲೆ ಅನ್ಯಾಯ ಆದಾಗ ಪಾಕಿಸ್ತಾನವು ಅವರಿಗೆ ಸಹಾಯ ಮಾಡಿತ್ತು, ಈಗ ಅವರು ನಮಗೆ ಸಹಾಯ ಮಾಡುವರು ಎಂದು ಹೇಳಿದರು.